ಮೈಸೂರು: ಜಿಲ್ಲೆಯ ಕೋವಿಡ್ ಪರಿಸ್ಥಿತಿ ಕುರಿತು ಸರ್ಕಾರಿ ಮುಖ್ಯ ಕಾರ್ಯದರ್ಶಿ ಕರೆದ ಸಭೆಗೆ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅರ್ಧಗಂಟೆ ತಡವಾಗಿ ಆಗಮಿಸಿದ್ದಾರೆ.
ಇಂದು ನಗರದ ಆಡಳಿತ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಮೈಸೂರು ಜಿಲ್ಲೆಯ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್ , ಜಿಲ್ಲಾಧಿಕಾರಿ ಹಾಗೂ ನಗರ ಪಾಲಿಕೆಯ ಆಯುಕ್ತರ ಸಭೆ ಕರೆದು ಇಲ್ಲಿನ ಕೋವಿಡ್ ಸ್ಥಿತಿಗತಿಗಳ ಬಗ್ಗೆ ವಿವರ ಪಡೆದರು. ಆದರೆ, ಸಭೆಗೆ ಮುಖ್ಯಕಾರ್ಯದರ್ಶಿ ಜೊತೆಗೆ ಜಿಲ್ಲಾಧಿಕಾರಿ ಆಗಮಿಸಿದರು. ಆದರೆ, ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ಹಾಗೂ ಆರೋಗ್ಯಾಧಿಕಾರಿಗಳು ಅರ್ಧ ಗಂಟೆ ಲೇಟ್ ಆಗಿ ಆಗಮಿಸಿ ಮಾಹಿತಿ ನೀಡಿದರು.
ಪ್ರತ್ಯೇಕವಾಗಿ ಮಾಹಿತಿ ಪಡೆದ ಮುಖ್ಯಕಾರ್ಯದರ್ಶಿ :
ಮೈಸೂರು ನಗರಕ್ಕೆ ಆಗಮಿಸಿದ ಸರ್ಕಾರದ ಮುಖ್ಯಕಾರ್ಯದರ್ಶಿ ರವಿ ಕುಮಾರ್, ಶಿಲ್ಪಾನಾಗ್ ರಾಜೀನಾಮೆ ಹಾಗೂ ಇತರ ಬೆಳವಣಿಗೆ ಬಗ್ಗೆ ಜಿಲ್ಲಾಧಿಕಾರಿಯಿಂದ ಮೊದಲು ಮಾಹಿತಿ ಪಡೆದರು. ಕೋವಿಡ್ ಸರ್ವೆ ಮುಗಿದ ನಂತರ ಪಾಲಿಕೆ ಆಯುಕ್ತೆಯಿಂದ ಸಿಎಸ್ ರವಿ ಕುಮಾರ್ ಮಾಹಿತಿ ಪಡೆದು ಮುಖ್ಯಮಂತ್ರಿಗಳಿಗೆ ನಾಳೆ ವರದಿಯನ್ನು ಸಲ್ಲಿಸಲಿದ್ದಾರೆ ಎನ್ನಲಾಗಿದೆ.