ಮೈಸೂರು: ಕೊರೊನಾ ವೈರಸ್ ಭೀತಿ ನಡುವೆಯೂ ಪರೀಕ್ಷೆ ಬರೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂದು ಮಹತ್ವದ ದಿನವಾಗಿದ್ದು, ಫಲಿತಾಂಶ ಪ್ರಕಟವಾಗಿದೆ.
ಅತಿ ಹೆಚ್ಚು ಅಂಕ ಗಳಿಸಿದ ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಸಿವಿಲ್ ಸರ್ವೀಸ್ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ.
ಹುಣಸೂರು ತಾಲೂಕಿನ ಬಿಳಿಕೆರೆ ನಿವಾಸಿಯಾಗಿರುವ ಬಿ.ಎನ್.ಸ್ಪಂದನ 600 ಅಂಕಗಳಿಗೆ 582 ಅಂಕ ಗಳಿಸಿದ್ದಾರೆ. ಕನ್ನಡ -96, ಇಂಗ್ಲಿಷ್ -90, ಇತಿಹಾಸ-100, ಅರ್ಥಶಾಸ್ತ್ರ-100, ಭೂಗೋಳಶಾಸ್ತ್ರ-98, ರಾಜ್ಯಶಾಸ್ತ್ರ-98 ಅಂಕ ಪಡೆದಿದ್ದಾರೆ.
ಮೈಸೂರಿನ ಸರಸ್ವತಿಪುರಂ ನಿವಾಸಿಯಾಗಿರುವ ಎನ್.ಲಕ್ಷ್ಮೀ 600 ಅಂಕಗಳಿಗೆ 578 ಅಂಕ ಗಳಿಸಿದ್ದಾರೆ. ಕನ್ನಡ-94, ಇಂಗ್ಲಿಷ್-95, ಅರ್ಥಶಾಸ್ತ್ರ-98, ಭೂಗೋಳ-100, ಸಮಾಜಶಾಸ್ತ್ರ-96 ಅಂಕ ಪಡೆದಿದ್ದಾರೆ.