ಮೈಸೂರು: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಪ್ರಕ್ರಿಯೆಗೆ ಇನ್ನೊಂದೇ ದಿನ ಬಾಕಿ ಇದ್ದು, 82 ಮಂದಿ ಅವಿರೋಧವಾಗಿ ಆಯ್ಕೆಯಾದರೆ, 5069 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಎರಡನೇ ಹಂತದಲ್ಲಿ ಮೈಸೂರು ತಾಲೂಕು, ನಂಜನಗೂಡು, ತಿ.ನರಸೀಪುರ ಮೂರು ತಾಲೂಕುಗಳ ಒಟ್ಟು 102 ಗ್ರಾಪಂಗಳಿಗೆ 1929 ಮಂದಿ ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಅದರಲ್ಲಿ 81 ಮಂದಿ ಅವಿರೋಧವಾಗಿ ಆಯ್ಕೆಯಾದರೆ, 13 ಸದಸ್ಯ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. 1834 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 5069 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಡಿ. 27ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.
ಮತ ಕೇಂದ್ರಗಳು: ಗ್ರಾಪಂ ಸಂಖ್ಯೆ 102, ಮತಗಟ್ಟೆಗಳು 748, ಆಕ್ಸಿಲರಿ ಮತಗಟ್ಟೆಗಳು 182, ಒಟ್ಟು ಮತಗಟ್ಟೆಗಳು 930( ಮೂರು ತಾಲೂಕುಗಳಿಂದ)
ಚುನಾವಣೆಗೆ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ 4092 ಮಂದಿಯನ್ನು ನಿಯೋಜನೆ ಮಾಡಲಾಗಿದೆ. 6,30,488 ಮಂದಿ ಮತದಾರರಿದ್ದು, 3,16,651 ಪುರುಷರು, 3,13,800 ಮಹಿಳೆಯರು, 37 ಇತರ ಮತದಾರರಿದ್ದಾರೆ.