ETV Bharat / state

ಉಮೇಶ್ ಕತ್ತಿ ನಿಧನ.. ಮೈಸೂರು ದಸರಾ ಎರಡನೇ ಹಂತದ ಗಜಪಡೆಗೆ ಪೂಜೆ ರದ್ದು

author img

By

Published : Sep 7, 2022, 1:58 PM IST

ಸಚಿವ ಉಮೇಶ್ ಕತ್ತಿ ನಿಧನದ ಹಿನ್ನೆಲೆ ಇಂದು ಅರಮನೆಗೆ ಆಗಮಿಸಿರುವ ಎರಡನೇ ಹಂತದ ಗಜಪಡೆಗೆ ಸಾಂಪ್ರದಾಯಿಕ ಪೂಜೆಯನ್ನು ರದ್ದು ಮಾಡಲಾಗಿದೆ.

Gajapade
ಗಜಪಡೆ

ಮೈಸೂರು: ಅರಣ್ಯ ಸಚಿವ ಉಮೇಶ್ ಕತ್ತಿ ನಿಧನದಿಂದ ಅರಮನೆ ಪ್ರವೇಶ ಮಾಡಲಿರುವ ಎರಡನೇ ಹಂತದ ಗಜಪಡೆಗೆ ಇಂದು ಸಾಂಪ್ರದಾಯಿಕ ಪೂಜೆಯನ್ನು ರದ್ದುಗೊಳಿಸಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದ್ದಾರೆ.

ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಈಗಾಗಲೇ ಅಭಿಮನ್ಯು ನೇತೃತ್ವದ ಮೊದಲ ಹಂತದ ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಮಹೇಂದ್ರ, ಭೀಮ, ಕಾವೇರಿ, ಚೈತ್ರ ಮತ್ತು ಲಕ್ಷೀ ಆನೆಗಳು ಆಗಸ್ಟ್ 7 ರಂದು ಗಜಪಯಣದ ಮೂಲಕ ಆಗಮಿಸಿ ಅಗಸ್ಟ್ 10 ರಂದು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಅರಮನೆ ಪ್ರವೇಶಿಸಿ ತಾಲೀಮು ಆರಂಭಿಸಿದ್ದವು.

ಇದರ ಜೊತೆಗೆ ಇಂದು ಎರಡನೇ ಹಂತದ ಆನೆಗಳು ಅರಮನೆ ಪ್ರವೇಶ ಮಾಡಲಿದ್ದು, ಅದರಲ್ಲಿ 18 ವರ್ಷದ ಅತ್ಯಂತ ಕಿರಿಯ ಆನೆ ಪಾರ್ಥಸಾರಥಿಯು ರಾಂಪುರ ಶಿಬಿರದಿಂದ ಈಗಾಗಲೇ ಅಗಮಿಸಿದೆ. ಉಳಿದ ಆನೆಗಳಾದ ದುಬಾರಿ ಆನೆ ಶಿಬಿರದ ಶ್ರೀರಾಮ ಮತ್ತು ಸುಗ್ರೀವ ಇದರೊಂದಿಗೆ ಗೋಪಿ ಹಾಗೂ ವಿಜಯ ಸಹ ದುಬಾರೆ ಆನೆ ಶಿಬಿರದಿಂದ ಅರಮನೆ ಪ್ರವೇಶ ಮಾಡಲಿರುವ ಎರಡನೇ ಹಂತದ ಗಜಪಡೆಯ ಆನೆಗಳಾಗಿವೆ.

ಇದನ್ನೂ ಓದಿ: ಮೈಸೂರು ದಸರಾ 2022: ಗಣೇಶ ಹಬ್ಬದ ನಿಮಿತ್ತ ಗಜಪಡೆಗೆ ವಿಶೇಷ ಪೂಜೆ

ನಾಳೆ ಸಿಡಿಮದ್ದು ತಾಲೀಮು: ಇಂದು ಎರಡನೇ ಹಂತದ ಗಜಪಡೆ ಅರಮನೆಗೆ ಆಗಮಿಸಿದ್ದು, ನಾಳೆ 14 ಆನೆಗಳನ್ನು ಸೇರಿಸಿ ಒಟ್ಟಾಗಿ ಮೊದಲ ಹಂತದ ಸಿಡಿಮದ್ದು ತಾಲೀಮು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೆ.9 ರಂದು ಮೊದಲ ಹಂತದಲ್ಲಿ ಆಗಮಿಸಿದ 9 ಗಜಪಡೆ ಹಾಗೂ ಎರಡನೇ ಹಂತದ 5 ಗಜಪಡೆಗಳನ್ನು ಒಟ್ಟಾಗಿ ತೂಕ ಹಾಕಿಸಲಾಗುವುದು ಎಂದು ಡಿಸಿಎಫ್ ಕರಿಕಾಳನ್​​ ಮಾಹಿತಿ ನೀಡಿದರು.

ಇದನ್ನೂ ಓದಿ: ಉಮೇಶ್ ಕತ್ತಿ ಪಾರ್ಥಿವ ಶರೀರ ಏರ್ ಲಿಫ್ಟ್.. ಬೆಳಗಾವಿಯತ್ತ ವಿಶೇಷ ವಿಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.