ETV Bharat / state

ಸಾವರ್ಕರ್​ ವಿರೋಧ ಕಾಂಗ್ರೆಸ್​ ಬೌದ್ಧಿಕ ದಿವಾಳಿತನಕ್ಕೆ ಉದಾಹರಣೆ: ಪ್ರತಾಪ್​ ಸಿಂಹ

author img

By

Published : May 28, 2020, 1:03 PM IST

ದೇವರಾಜ ಅರಸು ರಸ್ತೆಯಲ್ಲಿರುವ ತ್ರಿಪುರ ಭೈರವಿ ಮಠದ ಆವರಣದಲ್ಲಿರುವ ಆಂಜನೇಯ ದೇವಸ್ಥಾನದ ಮುಂಭಾಗ ವೀರ ಸಾವರ್ಕರ್ ಯುವ ಬಳಗದ 15 ನೇ ವಾರ್ಷಿಕೋತ್ಸವ ಆಚರಣೆ ಹಾಗೂ ಸಾವರ್ಕರ್ 136ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.

Savarkar Jayanti celebration in mysore
ಸಾವರ್ಕರ್​ ಜಯಂತಿ ಆಚರಣೆಯಲ್ಲಿ ಪ್ರತಾಪ್​ ಸಿಂಹ ಕಿಡಿ

ಮೈಸೂರು: ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಂಸದ ಪ್ರತಾಪ್​ ಸಿಂಹ ನೇತೃತ್ವದಲ್ಲಿ ಇಂದು ಸಾವರ್ಕರ್ ಜಯಂತಿ ಆಚರಣೆ ಮಾಡಲಾಯಿತು.

ದೇವರಾಜ ಅರಸು ರಸ್ತೆಯಲ್ಲಿರುವ ತ್ರಿಪುರ ಭೈರವಿ ಮಠದ ಆವರಣದಲ್ಲಿರುವ ಆಂಜನೇಯ ದೇವಸ್ಥಾನದ ಮುಂಭಾಗ ವೀರ ಸಾವರ್ಕರ್ ಯುವ ಬಳಗದ 15 ನೇ ವಾರ್ಷಿಕೋತ್ಸವ ಆಚರಣೆ ಹಾಗೂ ಸಾವರ್ಕರ್ 136ನೇ ಜಯಂತಿಯಲ್ಲಿ ಸಾವರ್ಕರ್ ಭಾವಚಿತ್ರಕ್ಕೆ ಸಚಿವ ರಮೇಶ್ ಜಾರಕಿಹೊಳಿ, ಸಂಸದ ಪ್ರತಾಪಸಿಂಹ, ಶಾಸಕ ಎಲ್‌.ನಾಗೇಂದ್ರ, ತ್ರಿಪುರ ಭೈರವಿ ಮಠದ ಮೈಸೂರು ಶಾಖಾ ಮಠದ ಪೀಠಾಧಿಪತಿ ಡಾ.ಕೃಷ್ಣಮೋಹನನಂದ ಗಿರಿ ಗೋಸ್ವಾಮೀಜಿ ಪುಷ್ಪಾರ್ಚನೆ ಮಾಡಿದರು.

ನಂತರ ಪ್ರತಾಪಸಿಂಹ ಮಾತನಾಡಿ, ಬೆಂಗಳೂರಿನ ಯಲಹಂಕದ ಫ್ಲೈಓವರ್​ಗೆ ಸಾವರ್ಕರ್​ ಹೆಸರನ್ನು ಸೂಚಿಸಲು ಮುಂದಾಗಿದ್ದಕ್ಕೆ ವಿರೋಧಿಸುತ್ತಿರುವ ಕಾಂಗ್ರೆಸ್​ನವರ ಭೌದ್ಧಿಕತೆ ದಿವಾಳಿಯಾಗಿದೆ. ಅನೇಕ ಯೋಜನೆಗಳಲ್ಲಿ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಹೆಸರಿದೆ. ಆದರೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸಾವರ್ಕರ್ ಹೆಸರು ಬೇಡವೇ ಎಂದು ಪ್ರಶ್ನೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.