ಮೈಸೂರು : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅವರು ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು.
ಶುಕ್ರವಾರ ಶ್ರೀರಂಗಪಟ್ಟಣದಲ್ಲಿ ಪೂಜೆ ಸಲ್ಲಿಸಿದ ಶಶಿಕಲಾ ನಟರಾಜನ್, ಇಂದು ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಆಗಮಿಸಿದರು. ಅಭಿಮಾನಿಗಳು ಶಶಿಕಲಾ ನಟರಾಜನ್ ಅವರನ್ನು ನೋಡಿದ ಕೂಡಲೇ ಚಿನ್ನಮ್ಮ.. ಚಿನ್ನಮ್ಮ.. ಎಂದು ಅಭಿಮಾನದಿಂದ ಕೂಗಿ, ಫೋಟೋ ತೆಗೆಸಿಕೊಂಡರು.
ಮಾಜಿ ಸಿಎಂ ದಿ.ಜಯಲಲಿತಾ ಕೂಡ ಮೈಸೂರಿಗೆ ಬಂದಾಗ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಹೋಗುತ್ತಿದ್ದರು. ಅದೇ ಹಾದಿಯಲ್ಲಿ ಶಶಿಕಲಾ ನಟರಾಜನ್ ಹೆಜ್ಜೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಮಂಡ್ಯದ ನಿಮಿಷಾಂಭ, ಮಾರಮ್ಮ ದೇವಾಲಕ್ಕೆ ಶಶಿಕಲಾ ನಟರಾಜನ್ ಭೇಟಿ: 3 ವರ್ಷದ ಹರಕೆ ತೀರಿಸಿದ ಚಿನ್ನಮ್ಮ