ETV Bharat / state

ಸ್ಯಾಂಟ್ರೊ ರವಿಗೆ ಜನವರಿ 25ರ ವರೆಗೆ ನ್ಯಾಯಾಂಗ ಬಂಧನ - ಸ್ಯಾಂಟ್ರೊ ರವಿ

ವಿವಿಧ ಪ್ರಕರಣಗಳ ಆರೋಪಿ ಸ್ಯಾಂಟ್ರೋ ರವಿ - ಜನವರಿ 25ರ ವರೆಗೆ ನ್ಯಾಯಾಂಗ ಬಂಧನ - ಸ್ಯಾಂಟ್ರೋ ರವಿ ಪರ ವಕೀಲರಿಂದ ಮಾಹಿತಿ

santro-ravi-sent-to-judicial-custody-till-january-25
ಸ್ಯಾಂಟ್ರೊ ರವಿಗೆ ಜನವರಿ 25ರ ವರೆಗೆ ನ್ಯಾಯಾಂಗ ಬಂಧನ
author img

By

Published : Jan 16, 2023, 5:57 PM IST

Updated : Jan 16, 2023, 6:29 PM IST

ಮೈಸೂರು : ಅತ್ಯಾಚಾರ, ವಂಚನೆ, ಜಾತಿ ನಿಂದನೆ, ಅಕ್ರಮ ಹಣ ವರ್ಗಾವಣೆ ಸೇರಿ ವಿವಿಧ ಪ್ರಕರಣಗಳ ಆರೋಪಿ ಸ್ಯಾಂಟ್ರೊ ರವಿಯನ್ನು ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸ್ಯಾಂಟ್ರೊ ರವಿಯ ನ್ಯಾಯಾಂಗ ಬಂಧನವನ್ನು ಜನವರಿ 25ರ ವರೆಗೆ ವಿಸ್ತರಿಸಿ ನ್ಯಾಯಾಧೀಶರಾದ ಗುರುರಾಜ್ ಅವರು ಆದೇಶಿಸಿದರು. ಇನ್ನು ಪ್ರಕರಣ ಸಂಬಂಧ ಸ್ಯಾಂಟ್ರೊ ರವಿ ಪರ ವಕೀಲರಾದ ಚೇತನ್ ಈಟಿವಿ ಭಾರತಕ್ಕೆ​​ ಮಾಹಿತಿ ನೀಡಿದ್ದಾರೆ.

ಸ್ಯಾಂಟ್ರೋ ರವಿಗೆ ಜನವರಿ 25ವರೆಗೆ ನ್ಯಾಯಾಂಗ ಬಂಧನ : ವಿವಿಧ ಪ್ರಕರಣಗಳ ಆರೋಪಿ ಸ್ಯಾಂಟ್ರೋ ರವಿಯನ್ನು ನಗರದ ಆರನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಪರ ವಕೀಲರು ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಹೇಳಿದಾಗ ನ್ಯಾಯಾಧೀಶರಾದ ಗುರುರಾಜ್​ ಅವರು ಜನವರಿ 25 ರವರೆಗೆ ಸ್ಯಾಂಟ್ರೊ ರವಿಯ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ವಿಚಾರಣೆಯನ್ನು ಜನವರಿ 18 ಕ್ಕೆ ಮುಂದೂಡಿದರು.

ಜನವರಿ 18ಕ್ಕೆ ವಿಚಾರಣೆ ಮುಂದೂಡಿಕೆ : ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಸ್ಯಾಂಟ್ರೊ ರವಿ ಪರ ವಕೀಲರಾದ ಚೇತನ್ ಹಾಗೂ ಹರೀಶ್ ಅವರು ನಮ್ಮ ಆರೋಪಿಯ ವಿರುದ್ಧ ಅತ್ಯಾಚಾರ, ಜಾತಿನಿಂದನೆ, ವಂಚನೆ ಆರೋಪವಿದೆ. ಅದು ಬಿಟ್ಟರೆ ವರ್ಗಾವಣೆ ಪ್ರಕರಣ ಸೇರಿದಂತೆ ಬೇರೆ ಯಾವುದೇ ಪ್ರಕರಣ ಇಲ್ಲ ಎಂದು ವಾದಿಸಿದರು. ಇನ್ನು ಪ್ರಕರಣ ಸಂಬಂಧ ತಕರಾರು ಅರ್ಜಿ ಸಲ್ಲಿಸಲು ನ್ಯಾಯಾಧೀಶರು ಸೂಚಿಸಿ ಪ್ರಕರಣದ ವಿಚಾರಣೆಯನ್ನು ಜನವರಿ 18 ಕ್ಕೆ ಮುಂದೂಡಿದರು.

ಸ್ಯಾಂಟ್ರೊ ರವಿ ಪರ ವಕೀಲರು ಹೇಳಿದ್ದೇನು ?: ನ್ಯಾಯಾಲಯದ ಮುಂದೆ ಸ್ಯಾಂಟ್ರೊ ರವಿಯನ್ನು ಹಾಜರು ಪಡಿಸಿದಾಗ ಸರ್ಕಾರಿ ಪರ ವಕೀಲರು ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಹೇಳಿದರು. ಆಗ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆಯನ್ನು ಜನವರಿ 18 ಕ್ಕೆ ಮುಂದೂಡಿದರು. ಆದರೆ, ಈ ಪ್ರಕರಣ ಸಿಐಡಿಗೆ ವರ್ಗಾವಣೆ ಆಗುವ ಪ್ರಕರಣ ಅಲ್ಲ. ಕೇವಲ 370 ಹಾಗೂ 498 ಪ್ರಕರಣ ದಾಖಲಾಗಿದೆ. ಇದು ಸಿಐಡಿಗೆ ವಹಿಸುವ ಪ್ರಕರಣ ಅಲ್ಲ. ಈ ಬಗ್ಗೆ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ. ಆರೋಪಿ ಸ್ಯಾಂಟ್ರೊ ರವಿಯನ್ನು 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಮಗೆ ಸಿಐಡಿಗೆ ವಹಿಸಿರುವ ದಾಖಲೆ ಸಿಕ್ಕ ತಕ್ಷಣ ನಾವು ಹೈಕೋರ್ಟ್ ನಲ್ಲಿ ಆಕ್ಷೇಪಣೆ ಸಲ್ಲಿಸುತ್ತೇವೆ ಹಾಕುತ್ತೇವೆ ಎಂದು ವಕೀಲ ಚೇತನ್ ಹೇಳಿದರು.

ಇನ್ನು ದೂರುದಾರೆ ತನ್ನನ್ನು ಅತ್ಯಾಚಾರ ಮಾಡಿ ಬಲವಂತವಾಗಿ ಮದುವೆಯಾಗಿದ್ದಾನೆ. ಜೊತೆಗೆ ಜಾತಿ ನಿಂದನೆ ಕೇಸ್ ಹಾಕಿದ್ದಾರೆ. ಈ ಪ್ರಕರಣಗಳ ತನಿಖೆ ನಡೆಯುತ್ತಿದೆ. ಬೇರೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಇನ್ನು ಈ ಹಿಂದೆ ದೂರುದಾರೆಯ ಮೇಲೆ ರವಿ 10 ಲಕ್ಷ ಚೆಕ್ ಬೌನ್ಸ್ ಪ್ರಕರಣವನ್ನು ಹಾಕಿದ್ದಾರೆ. ಈ ಪ್ರಕರಣವನ್ನು ಹಿಂಪಡೆಯಲು ಮಾಡಿರುವ ಆರೋಪವೂ ಇದೆ ಎಂದು ಹೇಳಿದ ವಕೀಲರು ಹೇಳಿದರು. ಪ್ರಕರಣ ಸಂಬಂಧ ಎಲ್ಲ ದಾಖಲಾತಿಗಳನ್ನು ಸಂಗ್ರಹ ಮಾಡಿ ಜಾಮೀನು ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ಸ್ಯಾಂಟ್ರೋ ರವಿ ಪ್ರಕರಣ: ಸಿಐಡಿ ತನಿಖೆಗೆ ವರ್ಗಾಯಿಸಿದ ರಾಜ್ಯ ಸರ್ಕಾರ

Last Updated : Jan 16, 2023, 6:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.