ETV Bharat / state

ಚಿಂಟುಗೆ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ: ಮೇಷರೂಢ ಆಂಜನೇಯನಿಗೆ ವಿಶೇಷ ಪೂಜೆ

ಪ್ರೀತಿಯ ಚಿಂಟುಗೆ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ - ಕುಟುಂಬದವರ ಜತೆಗೂಡಿ ಶಾಸಕ ಸಾ.ರಾ.ಮಹೇಶ್ ರಿಂದ ವಿಶೇಷ ಪೂಜೆ ಸಲ್ಲಿಕೆ

Mahesh and his family celebrated the fourth year of the beloved Chintu (Monkey).
ಪ್ರೀತಿಯ ಚಿಂಟುಗೆ ( ಕೋತಿಗೆ) ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಮಾಡಿದ ಸಾ.ರಾ.ಮಹೇಶ್ ಮತ್ತು ಅವರ ಕುಟುಂಬ
author img

By

Published : Jan 2, 2023, 1:45 PM IST

ಮೈಸೂರು: ನಾಲ್ಕು ವರ್ಷಗಳ ಹಿಂದೆ ಅಗಲಿದ, ಪ್ರೀತಿಯ ಚಿಂಟುಗೆ ( ಕೋತಿಗೆ) ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಮಾಡುವ ಮೂಲಕ, ಶಾಸಕ ಸಾ.ರಾ.ಮಹೇಶ್, ಚಿಂಟು ಪ್ರೀತಿಯನ್ನು ಹೃದಯದಲ್ಲೇ ಉಳಿಸಿಕೊಂಡಿದ್ದಾರೆ. ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾರಾ ಫಾರಂನಲ್ಲಿ ಚಿಂಟು (ಮೇಷರೂಢ ಆಂಜನೇಯ) ನೆನಪಿಗಾಗಿ ನಿರ್ಮಿಸಿರುವ ದೇವಾಲಯದ 4ನೇ ವರ್ಷದ ಪೂಜಾ ಕಾರ್ಯಕ್ರಮವನ್ನು ಶಾಸಕ ಸಾ.ರಾ. ಮಹೇಶ್ ಹಾಗೂ ಅವರ ಕುಟುಂಬದವರು ನೆರವೇರಿಸಿದರು.

An idol built in memory of the baby monkey Chintu
ಕೋತಿ ಮರಿ ಚಿಂಟುವಿನ ನೆನಪಿಗಾಗಿ ನಿರ್ಮಿಸಿರುವ ವಿಗ್ರಹ

ಮಹೇಶ್​ರಿಗೂ ಚಿಂಟುವಿಗೂ ಸಂಬಂಧ ಬೆಸೆದಿದ್ದು ಹೇಗೆ?: ಸಾ.ರಾ. ಮಹೇಶ್​ ಅವರು ನಗರದ ಹೊರವಲಯದ ದಟ್ಟಗಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಗುಂಪಿನಿಂದ ಬೇರ್ಪಟ್ಟ ಕೋತಿ ಮರಿಯೊಂದು, ತೋಟದಲ್ಲಿರುವ ಕುರಿ ಮರಿಯೊಂದಿಗೆ ಆಟವಾಡುತ್ತಾ ಇತ್ತು.ನಂತರ ಕೋತಿ ಮರಿ ಶಾಸಕರ ಜೊತೆ ಬೆರೆತು ಅವರಿಬ್ಬರೊಡನೆ ಅನ್ಯೋನ್ಯವಾಗಿತ್ತು. ಈ ಕೋತಿ ಮರಿಯು ಶಾಸಕರಿಗೆ ಬಹಳ ಅಚ್ಚು ಮೆಚ್ಚು ಕೂಡಾ ಹೌದು. ಶಾಸಕರು ಹೊಸ ವರ್ಷದ ನಿಮಿತ್ತ ವಿದೇಶಿ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ವಿದ್ಯುತ್​ ಶಾರ್ಟ್​ ಸಕ್ಯೂಟ್​ನಿಂದ ಕೋತಿ ಮರಿ ಸಾವನ್ನಪ್ಪಿತ್ತು.

ಈ ವಿಚಾರ ತಿಳಿದ ಕೂಡಲೇ ಶಾಸಕರು ತಮ್ಮ ಚಿಂಟುವಿನ ಮೇಲಿನ ಪ್ರೀತಿಯಿಂದ ವಿದೇಶಿ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್​ ಬಂದಿದ್ದರು. ಅಷ್ಟೇ ಅಲ್ಲ​ ಕೋತಿ ಮರಿಯ ಅಂತ್ಯಕ್ರಿಯೆಯನ್ನು ತಮ್ಮ ಮನೆಯ ತೋಟದಲ್ಲಿ ನೆರೆವೇರಿಸಿದ್ದರು.

ಇದಾದ ಬಳಿಕ ಕೋತಿ ಚಿಂಟು ಸವಿನೆನಪಿಗಾಗಿ ಶಾಸಕರು 25 ಲಕ್ಷದ ರೂ ವೆಚ್ಚದಲ್ಲಿ ಮಾರುತಿ ದೇವಾಲಯವೊಂದನ್ನು ನಿರ್ಮಿಸಿದ್ದಾರೆ. ಅದೂ ಕೂಡಾ ಅಂತ್ಯಕ್ರಿಯೆ ನಡೆಸಿದ ಸ್ಥಳದಲ್ಲಿಯೇ ಎನ್ನುವುದು ಮತ್ತೊಂದು ವಿಶೇಷವಾಗಿದೆ. ದೇವಾಲಯದಲ್ಲಿ ಕುರಿಮರಿಯ ಮೇಲೆ ಕೋತಿ ಕುಳಿತಿರುವ ವಿಗ್ರಹವನ್ನು ಸ್ಥಾಪಿಸಲಾಗಿದೆ.

ಇದೀಗ ಪ್ರೀತಿಯ ಚಿಂಟುಗೆ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯನ್ನು ಮಾಡಿ ತಮಗೆ ಚಿಂಟು ಮೇಲಿರುವ ಪ್ರೀತಿಯನ್ನು ಶಾಸಕ ಸಾ ರಾ ಮಹೇಶ ನಿರೂಪಿಸಿದ್ದಾರೆ.

ಇದನ್ನೂ ಓದಿ: ಸಿದ್ದೇಶ್ವರ ಶ್ರೀಗೆ ಮುಂದುವರಿದ ಚಿಕಿತ್ಸೆ, ಸಾವಿರಾರು ಅಭಿಮಾನಿಗಳ ಆಗಮನ; ಅನ್ನದಾಸೋಹ ವ್ಯವಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.