ETV Bharat / state

ಪರಿಷತ್‌ನಲ್ಲಿ ಗೂಂಡಾಗಿರಿ ಮಾಡಿದವರ ಅಮಾನತು ಮಾಡಲಿ : ಸಚಿವ ಎಸ್ ಟಿ ಸೋಮಶೇಖರ್​

ಸಭಾಪತಿಗಳ ಮೇಲೆ ಆರೋಪ ಬಂದ ಮೇಲೆ ಅವರು ಆ ಕುರ್ಚಿಯಲ್ಲಿ ಕೂರುವಂತಿಲ್ಲ. ಅವಿಶ್ವಾಸ ನಿರ್ಣಯ ಗೊತ್ತುವಳಿಯಾದ ಮೇಲೆ ಸಭಾಪತಿಗಳಾದವರು ಕುರ್ಚಿಯನ್ನು ಬಿಟ್ಟುಕೊಡಬೇಕು. 14 ದಿನದ ಅವಧಿಯಲ್ಲಿ ಅವಕಾಶ ಕಲ್ಪಿಸಿ ಸರಿಯಾದ ರೀತಿ ನಡೆದುಕೊಳ್ಳಬೇಕು. ಆದರೆ, ಅದಕ್ಕೆ ಅವಕಾಶ ಕೊಡದ ಸಭಾಪತಿಗಳ ನಡೆ ಸರಿಯಲ್ಲ..

S. T. Somashekhar states that congress must suspend the
ಪರಿಷತ್ ನಲ್ಲಿ ಗೂಂಡಾಗಿರಿ ಮಾಡಿದವರ ಅಮಾನತು ಮಾಡಲಿ: ಸಚಿವ ಎಸ್. ಟಿ. ಸೋಮಶೇಖರ್​
author img

By

Published : Dec 16, 2020, 1:27 PM IST

ಮೈಸೂರು : ಸಭಾಪತಿಗಳ ಕುರ್ಚಿಗೆ ಅದರದ್ದೇ ಆದ ಗೌರವವಿದೆ. ಆದರೆ, ಮೊದಲ ಬಾರಿ ಎಂಎಲ್​ಸಿ ಆದವರೂ ಸಹ ಆ ಖುರ್ಚಿಯಲ್ಲಿ ಕೂರುತ್ತಾರೆಂದರೆ ಏನರ್ಥ? ಸಭಾಪತಿಗಳ ಮೇಲೆ ಅವಿಶ್ವಾಸ ನಿರ್ಣಯವನ್ನು ನಮ್ಮ ಪಕ್ಷದ ಸದಸ್ಯರು ಮಂಡಿಸಿದ್ದಾರೆ.

ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ? ಎಲ್ಲರಿಗೂ ನೀತಿ, ಕಾನೂನು ಹೇಳುವ ಅವರು ತಮ್ಮ ಪಕ್ಷದ ನಾಯರಿಗೆ ಬುದ್ಧಿ ಹೇಳಲಿ. ಗೂಂಡಾಗಿರಿ ಮಾಡಿದವರನ್ನು ಅಮಾನತು ಮಾಡಲಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ತಿಳಿಸಿದರು.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರವಾನ್ವಿತ ಹಿರಿಯ ಸದಸ್ಯರೂ ಉಪ ಸಭಾಪತಿಗಳಾದ ಧರ್ಮೇಗೌಡರನ್ನು ಎಳೆದಾಡಿ ಗೂಂಡಾಗಿರಿ ಮಾಡಿದ ಹಾಗೆ ಬಲತ್ಕಾರವಾಗಿ ಖುರ್ಚಿಯಿಂದ ಎಳೆದಾಡಿದ್ದು ಖಂಡನೀಯ.

ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್‌ನವರು ಮರ್ಯಾದೆ ಉಳಿಸಿಕೊಳ್ಳಬೇಕೆಂದಿದ್ರೆ ಹೀಗೆ ಗೂಂಡಾಗಿರಿ ಮಾಡಿದವರನ್ನು ಅಮಾನತು ಮಾಡಬೇಕು. ಚಿಂತಕರ, ಬುದ್ಧಿವಂತರ ಚಾವಡಿ ಎಂದೇ ಹೆಸರಾಗಿದ್ದ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಇಂತಹ ಒಂದು ಕೀಳುಮಟ್ಟದ ರಾಜಕೀಯಕ್ಕೆ ಇಳಿಯುತ್ತದೆ ಅಂದರೆ ಹೇಗೆ ಎಂದು ಸಚಿವರು ಪ್ರಶ್ನಿಸಿದರು.

ಸಭಾಪತಿಗಳ ಮೇಲೆ ಆರೋಪ ಬಂದ ಮೇಲೆ ಅವರು ಆ ಕುರ್ಚಿಯಲ್ಲಿ ಕೂರುವಂತಿಲ್ಲ. ಅವಿಶ್ವಾಸ ನಿರ್ಣಯ ಗೊತ್ತುವಳಿಯಾದ ಮೇಲೆ ಸಭಾಪತಿಗಳಾದವರು ಕುರ್ಚಿಯನ್ನು ಬಿಟ್ಟುಕೊಡಬೇಕು. 14 ದಿನದ ಅವಧಿಯಲ್ಲಿ ಅವಕಾಶ ಕಲ್ಪಿಸಿ ಸರಿಯಾದ ರೀತಿ ನಡೆದುಕೊಳ್ಳಬೇಕು. ಆದರೆ, ಅದಕ್ಕೆ ಅವಕಾಶ ಕೊಡದ ಸಭಾಪತಿಗಳ ನಡೆ ಸರಿಯಲ್ಲ ಎಂದು ಸಚಿವರು ಖಂಡಿಸಿದರು.

ಕಾಂಗ್ರೆಸ್‌ನವರ ಷಡ್ಯಂತ್ರ : ಇದು ನೂರಕ್ಕೆ ನೂರು ಕಾಂಗ್ರೆಸ್‌ನವರ ಪೂರ್ವ ನಿಯೋಜಿತ ಸಂಚು. ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿಯೇ ಗೂಂಡಾಗಿರಿ ಮಾಡುವ ಹಾಗೂ ದಾಂಧಲೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಇದು ಅವರ ಸಂಸ್ಕೃತಿ ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ವರ್ತನೆ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದು ಸಚಿವರಾದ ಸೋಮಶೇಖರ್ ಹೇಳಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ : ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 23ರ ಸ್ವಾತಂತ್ರ್ಯ ಉದ್ಯಾನವನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌ ಟಿ ಸೋಮಶೇಖರ್ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎಲ್‌ ನಾಗೇಂದ್ರ, ಪಾಲಿಕೆ ಆಯುಕ್ತರಾದ ಗುರುದತ್ತ ಹೆಗಡೆ ಸೇರಿದಂತೆ ಅಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.

ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರರ ಭವನಕ್ಕೆ ಭೇಟಿ ನೀಡಿದ ಸಚಿವ ಸೋಮಶೇಖರ್, ಸ್ವಾತಂತ್ರ್ಯ ಹೋರಾಟಗಾರರಾದ ವೈ ಸಿ ರೇವಣ್ಣ ಅವರು, ಸಚಿವರ ಬಳಿ ಸಮಸ್ಯೆಗಳನ್ನು ಹೇಳಿ ಮನವಿ ಪತ್ರ ಸಲ್ಲಿಸಿದರು. ಅವರಿಂದ ಅಹವಾಲನ್ನು ಆಲಿಸಿದ ಸಚಿವರು, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.