ETV Bharat / state

ಬಿ.ವೈ. ವಿಜಯೇಂದ್ರ ಮುಂದಿನ ರಾಜಾಹುಲಿ: ಸಚಿವ‌ ಎಸ್.ಟಿ. ಸೋಮಶೇಖರ್ - ಬಿ ವೈ ವಿಜಯೇಂದ್ರ ಕುರಿತು ಎಸ್ ಟಿ ಸೋಮಶೇಖರ್ ಅಭಿಪ್ರಾಯ

ನೂರಾರು ಪೆಟ್ಟು ಬಿದ್ದ ಮೇಲೆಯೇ ಶಿಲೆ ವಿಗ್ರಹವಾಗುವುದು. ವಿಜಯೇಂದ್ರ ಅವರಿಗೂ ಪೆಟ್ಟು ಬೀಳುತ್ತಿವೆ. ಶೇ 50-60 ರಷ್ಟು ಉಳಿ ಏಟು ಬಿದ್ದಿದ್ದು, ಮೂರ್ತಿ ಸಿದ್ಧವಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜಾಹುಲಿಯಾಗಲಿದ್ದಾರೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

s t somashekhar
ಸಚಿವ‌ ಎಸ್.ಟಿ. ಸೋಮಶೇಖರ್
author img

By

Published : Feb 14, 2021, 5:43 PM IST

ಮೈಸೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರೀತಿ ಮುಂದಿನ ದಿನಗಳಲ್ಲಿ ಬಿ.ವೈ. ವಿಜಯೇಂದ್ರ ರಾಜ್ಯದ ರಾಜಾಹುಲಿ ಆಗಲಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು‌‌.

ಸಚಿವ‌ ಎಸ್.ಟಿ. ಸೋಮಶೇಖರ್

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಜೆಎಸ್ಎಸ್ ಬಡಾವಣೆಯಲ್ಲಿ ಏರ್ಪಡಿಸಿದ್ದ ಮಹಾಸಭಾದ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನೇಕ ಪೆಟ್ಟು ತಿಂದ ಯಡಿಯೂರಪ್ಪ ಅವರು 40 ವರ್ಷದ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದಾರೆ. ಹೀಗಾಗಿಯೇ ಅತ್ಯಂತ ಯಶಸ್ವಿ ಸಿಎಂ ಕೂಡ ಆಗಿದ್ದಾರೆ. ತಂದೆ ಹಾಕಿಕೊಟ್ಟ ಹಾದಿಯಲ್ಲೇ ಪುತ್ರ ಬಿ.ವೈ. ವಿಜಯೇಂದ್ರ ಸಾಗುತ್ತಿದ್ದಾರೆ ಎಂದು ಗುಣಗಾನ ಮಾಡಿದರು.

ಈ ಸುದ್ದಿಯನ್ನೂ ಓದಿ: ಮೀಸಲಾತಿಗಾಗಿ ಬಿಜೆಪಿ ಹೋರಾಟ ಸಾಮಾಜಿಕ ನ್ಯಾಯದ ದಿಕ್ಕು ತಪ್ಪಿಸುವ ರಾಜಕೀಯ ಷಡ್ಯಂತ್ರ: ಸಿದ್ದರಾಮಯ್ಯ

ನೂರಾರು ಪೆಟ್ಟು ಬಿದ್ದ ಮೇಲೆಯೇ ಶಿಲೆ ವಿಗ್ರಹವಾಗುವುದು. ವಿಜಯೇಂದ್ರ ಅವರಿಗೂ ಪೆಟ್ಟು ಬೀಳುತ್ತಿವೆ. ಶೇ 50-60 ರಷ್ಟು ಉಳಿ ಏಟು ಬಿದ್ದಿದ್ದು, ಮೂರ್ತಿ ಸಿದ್ಧವಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜಾಹುಲಿಯಾಗಲಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.