ETV Bharat / state

ಜಮೀರ್ ಮನೆ ಮೇಲೆ ಎಸಿಬಿ ದಾಳಿ: ಖುಷಿ ಪಡೋರು ಮೊದಲು ಕಾಂಗ್ರೆಸ್​​​ನವರು: ಸಚಿವ ಸೋಮಶೇಖರ್

ಜಮೀರ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದ ಬಗ್ಗೆ ಮೊದಲು ಖುಷಿ ಪಡುವವರು ಕಾಂಗ್ರೆಸ್ಸಿಗರು. ಏಕೆಂದರೆ ಜಮೀರ್, ಅವರು ಸಿಎಂ ಆಗಲಿ ಇವರು ಸಿಎಂ ಆಗಲಿ ಎಂದು ಹೇಳಿಕೆ ನೀಡುತ್ತಿರುತ್ತಾರೆ. ಹಾಗಾಗಿ ಕಾಂಗ್ರೆಸ್ ಒಳಗಿಂದ ಸಂತೋಷ ಪಟ್ಟುಕೊಂಡು ಹೊರಗಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಚಿವ ಎಸ್ ಟಿ ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.

s-t-somashekar-statement-about-acb-ride-on-jameer-ahmed
ಜಮೀರ್ ಮನೆ ಮೇಲೆ ಎ ಸಿಬಿ ದಾಳಿ: ಖುಷಿ ಪಡೋರು ಮೊದಲು ಕಾಂಗ್ರೆಸ್ಸಿನವರು: ಸಚಿವ ಸೋಮಶೇಖರ್
author img

By

Published : Jul 5, 2022, 3:32 PM IST

ಮೈಸೂರು: ಜಮೀರ್ ಮನೆ ಮೇಲೆ ಎಸಿಬಿ ದಾಳಿ ಆಗಿದ್ದು ಮೊದಲು ಖುಷಿ ಪಡೋರು ಕಾಂಗ್ರೆಸ್ಸಿನವರೇ, ಏಕೆಂದರೆ ಅವರು ಸಿಎಂ ಆಗಲಿ ಇವರು ಸಿಎಂ ಆಗಲಿ ಎಂದು ಜಮೀರ್ ಆಗಾಗ ಹೇಳಿಕೆ ಕೊಡುತ್ತಿರುತ್ತಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ಜಮೀರ್ ಮನೆ ಮೇಲೆ ಎ ಸಿಬಿ ದಾಳಿ: ಖುಷಿ ಪಡೋರು ಮೊದಲು ಕಾಂಗ್ರೆಸ್ಸಿನವರು: ಸಚಿವ ಸೋಮಶೇಖರ್

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಜಮೀರ್ ಅಹಮದ್ ಮನೆ ಮೇಲೆ ನಡೆದ ಎಸಿಬಿ ದಾಳಿಗೆ ಕಾಂಗ್ರೆಸ್ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಜಮೀರ್ ಮನೆಯ ಮೇಲೆ ಎಸಿಬಿ ದಾಳಿ ಆಗಿರುವ ಬಗ್ಗೆ ಖುಷಿ ಪಡೋರು ಕಾಂಗ್ರೆಸ್ಸಿನವರೇ ಏಕೆಂದರೆ ಜಮೀರ್, ಅವರು ಸಿಎಂ ಆಗಲಿ ಇವರು ಸಿಎಂ ಆಗಲಿ ಅಂತ ಹೇಳಿಕೆ ಕೊಡುತ್ತಿರುತ್ತಾರೆ. ಇದರಿಂದ ಒಳಗೆ ಖುಷಿ ಪಟ್ಟುಕೊಂಡು ಹೊರಗಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಶಾಸಕ ಜಮೀರ್ ಪ್ರಾಮಾಣಿಕರಾಗಿದ್ದರೆ ಏನು ಆಗಲ್ಲ ಎಂದು ಕಾಂಗ್ರೆಸ್ ಅವರು ಧೈರ್ಯ ತುಂಬಬೇಕು ಅದನ್ನು ಬಿಟ್ಟು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಚಿವರು ಪ್ರಶ್ನಿಸಿದರು.

ಸಿಎಂ ದಿಟ್ಟ ನಿಲುವು : ಪಿಎಸ್​​​ಐ ನೇಮಕ ಹಗರಣದಲ್ಲಿ ಎಡಿಜಿಪಿ ಬಂಧನ ಮಾಡಿರುವುದಕ್ಕೆ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಿರುದ್ಯೋಗಿಗಳ ಮನಸ್ಸಿಗೆ ನೋವುಂಟು ಮಾಡಿ, ಚೆಲ್ಲಾಟ ಆಡಿದವರ ಮೇಲೆ ಸರ್ಕಾರ ಕ್ರಮ ಜರುಗಿಸಿದ್ದು ಎಷ್ಟೇ ದೊಡ್ಡವರಾಗಿದ್ದರು ಅವರನ್ನು ಮಟ್ಟಹಾಕುವ ಕೆಲಸವನ್ನು ಸರ್ಕಾರ ಮಾಡಲಿದೆ. ಈ ತನಿಖೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಸಿಎಂ ಮೇಲೆ ಒತ್ತಡ ಇದ್ದರೂ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇಂತಹ ಕ್ರಮ ಸಾಧ್ಯವೇ, ಇಂತಹ ನೂರಾರು ಕೇಸ್ ಗಳನ್ನು ಕಾಂಗ್ರೆಸ್ ಮುಚ್ಚಿ ಹಾಕಿದೆ ಎಂದು ಸೋಮ್ ಶೇಖರ್ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಕೊನೆಯ ಅವತಾರ : ಸಿದ್ದರಾಮೋತ್ಸವ ಆಚರಣೆ ಸಿದ್ದರಾಮಯ್ಯ ಅವರ ಕೊನೆಯ ಅವತಾರ. ಸಿಎಂ ಆಗಿದ್ದಾಗ ಸರಿಯಾಗಿ ಕೆಲಸ ಮಾಡಿದ್ದರೆ 35 ಸಾವಿರ ಮತಗಳಿಂದ ಸೋಲು ಅನುಭವಿಸುತ್ತಿರಲಿಲ್ಲ. ಇಂತಹ ವೈಫಲ್ಯಗಳನ್ನು ಮರೆಮಾಚಲು ಸಿದ್ದರಾಮೋತ್ಸವ ಆಚರಣೆ ಮಾಡುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರ ವೈಭವೀಕರಣ ಅಷ್ಟೇ. ಹುಟ್ಟು ಹಬ್ಬವನ್ನು ಕಾಂಗ್ರೆಸ್ ಹೆಸರಿನಲ್ಲೇ ಮಾಡಬಹುದಿತ್ತು. ಆದರೆ, ಒಂದು ವ್ಯಕ್ತಿಯ ಹೆಸರಿನಲ್ಲಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಬಾರಿಯ ವಿಶ್ವ ವಿಖ್ಯಾತ ದಸರಾ ಮಹೋತ್ಸವ ಆಚರಣೆ ಮಾಡುವ ಬಗ್ಗೆ ಜುಲೈ 10 ರ ಬಳಿಕ ಉನ್ನತ ಮಟ್ಟದ ಸಭೆ ಬೆಂಗಳೂರಿನಲ್ಲಿ ಸಿಎಂ ನೇತೃತ್ವದಲ್ಲಿ ನಡೆಯಲಿದೆ. ಆ ಬಳಿಕ ಮೈಸೂರಿನಲ್ಲಿ ಸಭೆ ನಡೆಸಿ ದಸರಾ ಆಚರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಓದಿ : ಭಕ್ತರ ಸೋಗಿನಲ್ಲಿ ಬಂದ್ರು, ಚಾಕುವಿನಿಂದ 40ಕ್ಕೂ ಹೆಚ್ಚು ಬಾರಿ ಇರಿದ್ರು.. ಚಂದ್ರಶೇಖರ್​ ಗುರೂಜಿ ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.