ಮೈಸೂರು: ತಮ್ಮ ವಾಹನಗಳಲ್ಲಿ ನಿಯಮ ಉಲ್ಲಂಘಿಸಿ ಹಾಕಲಾಗಿದ್ದ ನಂಬರ್ ಪ್ಲೇಟ್ ಹಾಗೂ ವಿವಿಧ ಚಿಹ್ನೆಗಳನ್ನು ಆರ್ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸ್ಥಳದಲ್ಲೇ ಅವುಗಳನ್ನು ತೆಗೆಸಿದ್ದಾರೆ.
![rto](https://etvbharatimages.akamaized.net/etvbharat/prod-images/5523836_rto.jpg)
ನಗರದ ವಿವಿಧ ಕಡೆಗಳಲ್ಲಿ ಆರ್ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಾಹನಗಳಲ್ಲಿ ನಿಯಮಬಾಹಿರವಾಗಿ ಹಾಕಿದ್ದ ನಂಬರ್ ಪ್ಲೇಟ್, ಲೋಗೋ ಇರುವ ಪ್ಲೇಟ್ ಗಳು ಹಾಗೂ ವಿವಿಧ ಚಿಹ್ನೆ ಇರುವ ಹೆಸರುಗಳನ್ನು ಹಾಕಿಸಿಕೊಂಡು ಸಂಘ ಸಂಸ್ಥೆ ಹೆಸರಿನಲ್ಲಿದ್ದ ಕೆಲವು ನೇಮ್ ಪ್ಲೇಟ್ಗಳನ್ನು ಸ್ಥಳದಲ್ಲೇ ಆರ್ಟಿಒ ಅಧಿಕಾರಿಗಳು ತೆರವುಗೊಳಿಸಿದರು. ಕೇಂದ್ರದ ಮೋಟಾರು ಕಾಯ್ದೆಯ ಹಾಗೂ ಹೈಕೋರ್ಟ್ ನ ಆದೇಶದ ಮೇರೆಗೆ ಆರ್ಟಿಒ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸುತ್ತಿದ್ದಾರೆ.