ETV Bharat / state

ಬೈಕ್ ಕಳವು ಪ್ರಕರಣ ತನಿಖೆ ವೇಳೆ ಸಿಕ್ಕಿಬಿದ್ದ ಆರೆಸ್ಸೆಸ್ ಮುಖಂಡನ ಕೊಲೆ ಆರೋಪಿ - ಬೈಕ್ ಕಳವು ಆರೋಪಿ ಸೆರೆ

ಬೈಕ್ ಕಳವು ಪ್ರಕರಣವೊಂದನ್ನು ಬೇಧಿಸಿದ ಮೈಸೂರು ಸಿಸಿಬಿ ಪೊಲೀಸರು ಆರೆಸ್ಸೆಸ್ ಮುಖಂಡನ ಕೊಲೆ ಆರೋಪಿಯನ್ನೂ ಬಂಧಿಸಿದ್ದಾರೆ.

murder accused arrested
ಆರೆಸ್ಸೆಸ್ ಮುಖಂಡನ ಕೊಲೆ ಆರೋಪಿ ಬಂಧನ
author img

By

Published : Aug 8, 2021, 2:33 PM IST

ಮೈಸೂರು: ಬೈಕ್ ಕಳವು ಪ್ರಕರಣವೊಂದನ್ನು ತನಿಖೆ ಮಾಡುವಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ​ ಮುಖಂಡ ರಾಜು ಕೊಲೆ ಪ್ರಕರಣದ ಆರೋಪಿ ಅಬೀದ್ ಪಾಷ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ನಗರದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಬಗೆಹರಿಸಿದ ಸಿಸಿಬಿ ಪೊಲೀಸರು, ಆರೋಪಿ ಅಬ್ದುಲ್ ರಹೀಂ (21) ಎಂಬಾತನನ್ನು ಬಂಧಿಸಿದ್ದರು. ಈತನನ್ನು ವಿಚಾರಣೆಗೆ ಒಳಪಡಿಸಿದಾಗ 4 ಲಕ್ಷ ರೂ ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ ಬಗ್ಗೆ ಬಾಯ್ಬಿಟ್ಟಿದ್ದ. ಅಲ್ಲದೆ ತನಗೆ ಬೈಕ್ ಕಳವು ಮಾಡುವಂತೆ ಆಬಿದ್ ಪಾಷಾ ಪ್ರೇರೇಪಿಸಿದ್ದ ಎಂದು ಹೇಳಿದ್ದಾನೆ

ಇದನ್ನೂ ಓದಿ : ಬೆಂಗಳೂರಿನಲ್ಲಿ ರೌಡಿಶೀಟರ್‌ ಕೊಲೆ ಪ್ರಕರಣ: ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಆರೋಪಿಯ ಮಾಹಿತಿ ಆಧರಿಸಿ ಪೊಲೀಸರು ಆಬಿದ್ ಪಾಷಾನನ್ನು ಬಂಧಿಸಿದ್ದರು. ಈತನ ಹಿನ್ನೆಲೆ ಕೆದಕಿದಾಗ, ಆರೆಸ್ಸೆಸ್ ಮುಖಂಡ ರಾಜು ಕೊಲೆ ಆರೋಪಿಗಳಲ್ಲಿ ಓರ್ವ ಎಂದು ಗೊತ್ತಾಗಿದೆ. ಯುವಕನಿಗೆ ಬೈಕ್ ಕಳವು ಮಾಡುವಂತೆ ಹೇಳಿ ಆರೋಪಿ ಆಬಿದ್ ಪಾಷಾ, ಇದೀಗ ಇನ್ನೊಂದು ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.