ಮೈಸೂರು : ಸ್ವಚ್ಛ ನಗರಿ ಮೈಸೂರಿನ ಒಳ ಚರಂಡಿಗಳನ್ನು ಸ್ವಚ್ಛಗೊಳಿಸಲು ರೋಬೋಟ್ ಯಂತ್ರ ಬಂದಿದ್ದು, ಇದು ರಾಜ್ಯದಲ್ಲೇ ಮೊದಲ ರೋಬೋಟ್ ಸ್ವಚ್ಛಯಂತ್ರ ಆಗಿದೆ.
ದೇಶದಲ್ಲೇ ಸ್ವಚ್ಛ ನಗರಿ, ಅರಮನೆಗಳ ನಗರಿ ಎಂಬ ಖ್ಯಾತಿ ಪಡೆದಿರುವ ಮೈಸೂರು ಈ ಬಾರಿ ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು , ಹಲವಾರು ಕೆಲಸಗಳನ್ನು ಕೈಗೊಂಡಿದೆ. ಈ ನಡುವೆ, ನಗರದ ಒಳ ಚರಂಡಿ ಕ್ಲೀನ್ ಮಾಡಲು ಪುಣೆಯಿಂದ ಬ್ಯಾಂಡಿಕೂಟ್ ರೋಬೋಟ್ ಖರೀದಿ ಮಾಡಿದೆ. ಜೊತೆಗೆ ಇದನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ಇಲ್ಲಿನ ಪೌರಕಾರ್ಮಿಕರಿಗೆ ತರಬೇತಿ ನೀಡಲು ತಜ್ಞರನ್ನು ಕರೆಸಲಾಗುತ್ತಿದೆ ಎಂದು ಪಾಲಿಕೆಯ ಆಯುಕ್ತ ಗುರು ದತ್ತ ಹೆಗ್ಗಡೆ ಮಾಹಿತಿ ನೀಡಿದರು.
ಇದನ್ನೂ ಓದಿ:'ದಾದಾ' ಅಭಿಮಾನಿಗಳಿಗೆ ಗುಡ್ನ್ಯೂಸ್: ಸೌರವ್ ಗಂಗೂಲಿ ಆರೋಗ್ಯದಲ್ಲಿ ಚೇತರಿಕೆ