ETV Bharat / state

ಮೈಸೂರು ಚಿನ್ನದ ಅಂಗಡಿಯಲ್ಲಿ ದರೋಡೆ ಯತ್ನ ಪ್ರಕರಣ.. ಸಿಸಿಟಿವಿಯಲ್ಲಿ ಕಳ್ಳರ ಚಾಣಾಕ್ಷತನ ಸೆರೆ.. - Robbers captured in CCTV news

ಎಲ್ಲಾ ಆಯಾಮಗಳಿಂದ ತನಿಖೆ ಆರಂಭವಾಗಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು. ಮಾಲೀಕನ ಮೇಲೆ ಹಲ್ಲೆಯಾಗಿದ್ದು, ಬಲವಂತವಾಗಿ ಮಾಲೀಕನನ್ನು ಕೂಡಿ ಹಾಕಿ ದರೋಡೆ ಮಾಡಿದ್ದಾರೆ..

ಸಿಸಿಟಿವಿಯಲ್ಲಿ ಬಯಲಾಯ್ತು ಚಾಲಾಕಿ ಕಳ್ಳರ ಚಾಣಾಕ್ಷತನ..!

author img

By

Published : Aug 23, 2021, 9:41 PM IST

Updated : Aug 23, 2021, 10:29 PM IST

ಮೈಸೂರು : ವಿದ್ಯಾರಣ್ಯಪುರಂನ ಪ್ರಮುಖ ರಸ್ತೆಯಲ್ಲಿರುವ ಅಮೃತ್ ಗೋಲ್ಡ್ & ಸಿಲ್ವರ್ ಚಿನ್ನಾಭರಣ ಅಂಗಡಿಯಲ್ಲಿ ದರೋಡೆಗೆ ಯತ್ನಿಸಿದ ದರೋಡೆಕೋರರು, ವಿಫಲವಾದ್ದದರಿಂದ ಟೀ-ಶರ್ಟ್ ಗಳನ್ನು ಕಾಂಪೌಂಡ್ ಒಳಗೆ ಎಸೆದು ಪರಾರಿಯಾಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಕಳ್ಳರ ಚಾಣಾಕ್ಷತನ ಸೆರೆ

ಚಿನ್ನಾಭರಣ ದೋಚುವ ವೇಳೆ ಬ್ಲೂ ಶರ್ಟ್ ಹಾಕಿದ್ರೇ, ಪರಾರಿ ಆಗುವಾಗ ವೈಟ್ ಶರ್ಟ್ ಧರಿಸಿದ್ದ ದರೋಡೆಕೋರನೋರ್ವ ಶರ್ಟ್​ ಎಸೆದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ದರೋಡೆ ಯತ್ನ ಪ್ರಕರಣದ ತನಿಖೆ :

ದರೋಡೆ ಯತ್ನ ಪ್ರಕರಣದ ತನಿಖೆ ಆರಂಭ ಮಾಡಿದ್ದೇವೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡಿ ಪ್ರಕರಣ ಬಗೆಹರಿಸುತ್ತೇವೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಮೈಸೂರು ನಗರದ ವಿದ್ಯಾರಣ್ಯಪುರಂನ ದರೋಡೆ ನಡೆದ ಅಮೃತ್ ಗೋಲ್ಡ್ & ಸಿಲ್ವರ್ ಮಳಿಗೆಗೆ ನಾಲ್ವರು ದರೋಡೆಕೋರರು ಬಂದು ಹೆದರಿಸಿ, ಚಿನ್ನಾಭರಣ ದೋಚಲು ಯತ್ನಸಿದ್ದು, ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಸಾರ್ವಜನಿಕನೊಬ್ಬನಿಗೆ ಗುಂಡೇಟು ತಗುಲಿ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ನೀಡಿದರು.

ಎಲ್ಲಾ ಆಯಾಮಗಳಿಂದ ತನಿಖೆ ಆರಂಭವಾಗಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು. ಮಾಲೀಕನ ಮೇಲೆ ಹಲ್ಲೆಯಾಗಿದ್ದು, ಬಲವಂತವಾಗಿ ಮಾಲೀಕನನ್ನು ಕೂಡಿ ಹಾಕಿ ದರೋಡೆ ಮಾಡಿದ್ದಾರೆ ಎಂದು ಹೇಳಿದರು.

ಓದಿ: ಮೈಸೂರು : ದರೋಡೆಕೋರರು ಹಾರಿಸಿದ ಗುಂಡಿಗೆ ಯುವಕ ಬಲಿ.. ಪ್ರಕರಣದ ಆರೋಪಿಗಳ ಫೋಟೋ ಬಿಡುಗಡೆ

Last Updated : Aug 23, 2021, 10:29 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.