ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಅಡಿಯಲ್ಲಿ ಬರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗೆ ವಾಕ್ ಇನ್ ಇಂಟರ್‌ವ್ಯೂ ನಡೆಸಲಾಗುವುದು. ಒಟ್ಟು 34 ಹುದ್ದೆಗಳ ನೇಮಕಾತಿಗೆ ಸಂಸ್ಥೆ ಮುಂದಾಗಿದ್ದು, ಆಸಕ್ತ ಮತ್ತು ಅರ್ಹ ಪದವೀಧರರು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ: ಪಿಜಿಟಿ, ಕಂಪ್ಯೂಟರ್ ಅಸಿಸ್ಟೆಂಟ್, ಟಿಜಿಟಿ, ವರ್ಕ್ ಎಕ್ಸುಪಿರಿಯನ್ಸ್ ಟೀಚರ್, ಸೆಮಿ ಪ್ರೊಫೆಷನಲ್ ಅಸಿಸ್ಟೆಂಟ್, ಪ್ರೈಮರಿ ಟೀಚರ್, ಪ್ರೀ ಪ್ರೈಮರಿ, ವೊಕೇಷನಲ್ ಟೀಚರ್, ಲ್ಯಾಬೊರೇಟರಿ ಅಸಿಸ್ಟಂಟ್, ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ.
ವಿದ್ಯಾರ್ಹತೆ: ಮೇಲಿನ ಹುದ್ದೆ ಅನುಸಾರವಾಗಿ ವಿವಿಧ ಶೈಕ್ಷಣಿಕ ವಿದ್ಯಾರ್ಹತೆ ನಿಗದಿ ಮಾಡಲಾಗಿದ್ದು, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಡಿಎಡ್, ಬಿಎಡ್, ಪದವಿ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು.
- ಪಿಜಿಟಿ ಹುದ್ದೆಗೆ ಬಿಇ, ಬಿಟೆಕ್, ಕಂಪ್ಯೂಟರ್ ಸೈನ್ಸ್ನಲ್ಲಿ ಎಂಎಸ್ಸಿ, ಎಂಸಿಎ, ಎಂ.ಕಾಂ ಬಿಎಡ್
- ಕಂಪ್ಯೂಟರ್ ಅಸಿಸ್ಟಂಟ್ ಹುದ್ದೆಗೆ ಪದವಿ, ಸ್ನಾತಕೋತ್ತರ ಪದವಿ
- ಟಿಜಿಟಿ: ಪದವಿ, ಬಿ.ಎಡ್
- ವರ್ಕ್ ಎಕ್ಸ್ಪಿರಿಯನ್ಸ್ ಟೀಚರ್: ಡಿಪ್ಲೊಮಾ, ಪದವಿ, ಬಿಇ ಅಥವಾ ಬಿಟೆಕ್, ಬಿಎಸ್ಸಿ, ಬಿಸಿಎ ಪದವಿ
- ಸೆಮಿ-ಪ್ರೊಫೆಷನ್ ಅಸಿಸ್ಟೆಂಟ್ (ಲೈಬ್ರರಿ): ಬಿ ಲಿಬ್ ಪದವಿ, ಬಿ.ಐ.ಐಎಸ್ಸಿ, ಪದವಿ
- ಪ್ರೈಮರಿ ಟೀಚರ್: ಡಿಎಡ್, ಬಿಎಡ್, ಬಿಇಐಎಡ್
- ಪ್ರಿ ಪ್ರೈಮರಿ: ಡಿಪ್ಲೊಮ, ಡಿಎಡ್
- ವೊಕೇಷನಲ್ ಟೀಚರ್: ಡಿಪ್ಲೊಮಾ, ಬಿಇ, ಬಿಟೆಕ್, ಬಿಎಸ್ಸಿ, ಬಿಸಿಎ, ಪದವಿ
- ಪ್ರಯೋಗಾಲಯ ಸಹಾಯಕರು: ಪದವಿ, ಬಿಎಸ್ಸಿ
- ಕಚೇರಿ ಸಹಾಯಕರರು: ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು ನಿಯಮ ಅನುಸಾರ.
ವಯೋಮಿತಿ: ಹುದ್ದೆಗೆ ಅನುಸಾರವಾಗಿ ವಯೋಮಿತಿ ನಿಗದಿಸಲಾಗಿದ್ದು, ಶಿಕ್ಷಕರ ಹುದ್ದೆಗೆ ಗರಿಷ್ಟ ವಯೋಮಿತಿ 30 ಆಗಿದ್ದು, ಉಳಿದ ಹುದ್ದೆಗಳಿಗೆ 65 ವರ್ಷ ನಿಗದಿ ಮಾಡಲಾಗಿದೆ.
ವೇತನ: ಪಿಜಿಟಿಗೆ 27,500 ರೂ, ಕಂಪ್ಯೂಟರ್ ಅಸಿಸ್ಟೆಂಟ್ 17,000 ರೂ, ಟಿಜಿಟಿ 26,500 ರೂ, ವರ್ಕ್ ಎಕ್ಸುಪಿರಿಯನ್ಸ್ ಟೀಚರ್ 26,250 ರೂ, ಸೆಮಿ ಪ್ರೊಫೆಷನಲ್ ಅಸಿಸ್ಟೆಂಟ್ 19,000 ರೂ , ಪ್ರೈಮರಿ ಟೀಚರ್ 21,2500 ರೂ, ಪ್ರೀ ಪ್ರೈಮರಿ 20,000 ರೂ, ವೊಕೆಷನಲ್ ಟೀಚರ್ 25,000 ರೂ, ಲ್ಯಾಬೊರೇಟರಿ ಅಸಿಸ್ಟಂಟ್ 17,000 ರೂ, ಆಫೀಸ್ ಅಸಿಸ್ಟಂಟ್ 23,000 ರೂ ವೇತನ ನಿಗದಿಸಲಾಗಿದೆ.
ಈ ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಜೂನ್ 1 ರಿಂದ ಜೂನ್ 5ರವರೆಗೆ ಈ ನೇರ ಸಂದರ್ಶನ ನಡೆಯಲಿದೆ. ನೇರ ಸಂದರ್ಶನ ನಡೆಯುವ ಸ್ಥಳ: ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರು- 570006.
ವಿಶೇಷ ಸೂಚನೆ: ಈಗಾಗಲೇ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಅಥವಾ ಡಿಎಂ ಶಾಲೆಗಳಲ್ಲಿ 3 ಶೈಕ್ಷಣಿಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಭ್ಯರ್ಥಿಗಳು ಮತ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವುದಿಲ್ಲ. ವಿವರವಾದ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಅಭ್ಯರ್ಥಿಗಳು riemysore.ac.in ಜಾಲತಾಣಕ್ಕೆ ಭೇಟಿ ನೀಡಿ.
ಇದನ್ನೂ ಓದಿ: ಅಂಚೆ ಇಲಾಖೆಯ 12,828 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ