ETV Bharat / state

ಅನುಮತಿ ದುರ್ಬಳಕೆ: ಮೇಲುಕೋಟೆಯಲ್ಲಿ ಚಿತ್ರೀಕರಣಕ್ಕೆ ಸದ್ಯ ಅವಕಾಶವಿಲ್ಲ

ಮೈಸೂರು ನಗರದಲ್ಲಿ ಕೆಲವು ಕಟ್ಟಡಗಳು ಖಾಸಗಿಯವರ ಸುಪರ್ದಿಯಲ್ಲಿವೆ. ಅವರು ಆ ಕಟ್ಟಡಗಳನ್ನು ಸಂರಕ್ಷಿಸುತ್ತಿದ್ದಾರೆ. ಅದೇ ರೀತಿ ಸರ್ಕಾರಿ ಸುಪರ್ದಿಯಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಇಲಾಖೆಯವರು ತಮಗೆ ಬರುವ ಅನುದಾನಗಳಲ್ಲಿ ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಪುರಾತತ್ವ ಇಲಾಖೆಯ ಆಯುಕ್ತೆ ಪೂರ್ಣಿಮಾ ಹೇಳಿದರು.

ಮೇಲುಕೋಟೆ
ಮೇಲುಕೋಟೆ
author img

By

Published : Nov 17, 2021, 4:43 PM IST

ಮೈಸೂರು: ಶಿಥಿಲ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಹಾಗೂ ಮೇಲುಕೋಟೆಯಲ್ಲಿ ಚಿತ್ರೀಕರಣ ನಿಷೇಧ ಸಂಬಂಧ ಪುರಾತತ್ವ ಇಲಾಖೆಯ ಆಯುಕ್ತೆ ಪೂರ್ಣಿಮಾ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ಮೇಲುಕೋಟೆಯಲ್ಲಿ ತೆಲುಗು ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಜೆಸಿಬಿ ಬಳಸಿ ಸ್ಮಾರಕಕ್ಕೆ ಧಕ್ಕೆ ಮಾಡಲಾಗಿದೆ ಎಂಬ ವರದಿ ಹಾಗೂ ಸತತ ನಾಲ್ಕು ತಿಂಗಳಿನಿಂದ ಸುರಿಯುತ್ತಿರುವ ಮಳೆಗೆ ಸಾಂಸ್ಕೃತಿಕ ನಗರಿಯ ಪಾರಂಪರಿಕ ಕಟ್ಟಡಗಳು ಕುಸಿಯುತ್ತಿವೆ. ಈ ಬಗ್ಗೆ ಪುರಾತತ್ವ ಇಲಾಖೆಯ ಆಯುಕ್ತೆ ಪೂರ್ಣಿಮಾ ಕಟ್ಟಡಗಳ ಸಂರಕ್ಷಣೆಯ ಕುರಿತಾಗಿ ಸರ್ಕಾರಕ್ಕೆ ವರದಿ ನೀಡಿದ್ದಾರೆ.

ನಗರದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಈ ಬಗ್ಗೆ 2019 ರಲ್ಲಿ ವರದಿಯನ್ನು ತಯಾರಿಸಿ, ಕಳುಹಿಸಲಾಗಿದ್ದು ಯಥಾಸ್ಥಿತಿ ಕಾಪಾಡುವಂತೆ ಸರಿಪಡಿಸಿ ವರದಿ ನೀಡಲಾಗಿದೆ. ಈ ಕುರಿತು ಮತ್ತೊಂದು ವರದಿಯನ್ನೂ ಸಹ ಸಲ್ಲಿಸಲಾಗಿದೆ‌ ಎಂದು ತಿಳಿಸಿರುವ ಆಯುಕ್ತೆ, ನೂರು ವರ್ಷ ಪೂರೈಸಿದ ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಪರಿಗಣಿಸುತ್ತೇವೆ.

ಮೈಸೂರು ನಗರದಲ್ಲಿ ಕೆಲವು ಕಟ್ಟಡಗಳು ಖಾಸಗಿಯವರ ಸುಪರ್ದಿಯಲ್ಲಿವೆ. ಅವರು ಆ ಕಟ್ಟಡಗಳನ್ನು ಸಂರಕ್ಷಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಸರ್ಕಾರಿ ಸುಪರ್ದಿಯಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಇಲಾಖೆಯವರು ತಮಗೆ ಬರುವ ಅನುದಾನಗಳಲ್ಲಿ ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಚಿತ್ರತಂಡಕ್ಕೆ ನೋಟಿಸ್:

ಮೇಲುಕೋಟೆಯ ಬೆಟ್ಟದ ಕಲ್ಯಾಣಿ ಬಳಿ ತೆಲುಗು ಚಿತ್ರತಂಡ ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆಯ ಅನುಮತಿ ಪಡೆದು ಚಿತ್ರೀಕರಣ ನಡೆಸುತ್ತಿದೆ. ಆದರೆ ಅನುಮತಿಯ ಸಂದರ್ಭದಲ್ಲಿ ಹಾಕಲಾಗಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ, ಜೆಸಿಬಿ ತಂದು ಚಿತ್ರೀಕರಣ ನಡೆಸಿದ್ದು, ಇದರಿಂದ ಚಿಕ್ಕ ಕಟ್ಟೆಯೊಂದು ಒಡೆದಿದೆ ಎಂದು ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗಿವೆ.

ಇದರಿಂದ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ, ಜೆಸಿಬಿ ವಶಕ್ಕೆ ಪಡೆದು ಚಿತ್ರತಂಡಕ್ಕೆ ನೋಟಿಸ್ ನೀಡಲಾಗಿದೆ.‌ ಡೆಪಾಸಿಟ್ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮೇಲುಕೋಟೆಯಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿದಾಗ ಪದೇ ಪದೇ ಈ ರೀತಿ ದುರುಪಯೋಗ ಆಗುತ್ತಿರುವುದರಿಂದ ತಾತ್ಕಾಲಿಕವಾಗಿ ನಾವು ಚಿತ್ರೀಕರಣಕ್ಕೆ ಅನುಮತಿ ನೀಡುವುದನ್ನು ನಿಲ್ಲಿಸೋಣ ಎಂಬ ತೀರ್ಮಾನವನ್ನು ಇಲಾಖೆ ತೆಗೆದುಕೊಂಡಿದೆ ಎಂದು ಆಯುಕ್ತೆ ತಿಳಿಸಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.