ಮೈಸೂರು: ನಾನಾಗಲಿ ನನ್ನ ಕುಟುಂಬದವರು ಆಗಲಿ ಯಾವುದೇ ಆಸೆ ಆಕಾಂಕ್ಷೆಗಳಿಗೆ ಬಲಿಯಾಗಿಲ್ಲ ಹಾಗೂ ಹಣ ಪಡೆದಿಲ್ಲ ಎಂದು ಚಾಮುಂಡಿ ಬೆಟ್ಟದಲ್ಲಿ ಬಂದು ಅರ್ನಹ ಶಾಸಕ ಹೆಚ್. ವಿಶ್ವನಾಥ್ ಪ್ರಮಾಣ ಮಾಡಿದರೆ, ನಾನು ರಾಜ್ಯದ ಜನತೆಯನ್ನು ಕ್ಷಮೆಯಾಚಿಸುತ್ತೇನೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಾ.ರಾ. ಮಹೇಶ್ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾ.ರಾ ಮಹೇಶ್, ನಿನ್ನೆ ಅನರ್ಹ ಶಾಸಕ ಹೆಚ್.ವಿಶ್ವನಾಥ್, "ನಾಳೆ ಬೆಳಗ್ಗೆ 9 ಗಂಟೆಗೆ ಸಾ.ರಾ.ಮಹೇಶ್ ಬಂದು ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಲಿ ಎಂದು ಹಾಕಿದ್ದ ಸವಾಲನ್ನು ಒಪ್ಪಿಕೊಳ್ಳುತ್ತೇನೆ ಎಂದರು.
ನಾಳೆ ಹೆಚ್. ವಿಶ್ವನಾಥ್ ಚಾಮುಂಡಿ ಬೆಟ್ಟಕ್ಕೆ ಬರುವಾಗ ಮಾಜಿ ಪತ್ರಕರ್ತರು ಹಾಗೂ ಹಾಲಿ ಮುಖ್ಯಮಂತ್ರಿಗಳ ಪತ್ರಿಕಾ ಸಲಹೆಗಾರರಾದ ಮರಕಲ್ ಅವರನ್ನು ಕರೆದುಕೊಂಡು ಬಂದರೆ ಎಲ್ಲಾ ವಿಚಾರ ಗೊತ್ತಾಗಲಿದೆ. ಇನ್ನು ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಹೆಚ್.ವಿಶ್ವನಾಥ್ ಆಗಲಿ ಅವರ ಕುಂಟುಬದ ಯಾವ ವ್ಯಕ್ತಿಯೂ ಅಭ್ಯರ್ಥಿ ಆಗುವುದಿಲ್ಲ ಹೊರಗಿನ ವ್ಯಕ್ತಿ ಬಿಜೆಪಿಯ ಅಭ್ಯರ್ಥಿಗಳಾಗಿದ್ದಾರೆ. ಆದರೂ ಹೆಚ್.ವಿಶ್ವನಾಥ್ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗುತ್ತಾರೆ ಎಂದರು.