ETV Bharat / state

ಫೆ.11 ರಂದು ರಾಷ್ಟೀಯ ಲೋಕ ಅದಾಲತ್: 1,11,492 ಪ್ರಕರಣಗಳು ವಿಚಾರಣೆಗೆ ಬಾಕಿ - ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು

ಫೆ. 11 ರಂದು ನಡೆಯುವ ಲೋಕ ಅದಾಲತ್​ ಅನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ ಎಸ್ ಸಂಗ್ರೇಶಿ ತಿಳಿಸಿದ್ದಾರೆ.

Judge G S Congress press conference
ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ ಸುದ್ದಿಗೋಷ್ಠಿ
author img

By

Published : Feb 7, 2023, 1:01 PM IST

Updated : Feb 7, 2023, 3:58 PM IST

ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ ಸುದ್ದಿಗೋಷ್ಠಿ

ಮೈಸೂರು: ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುವ ಉದ್ದೇಶದಿಂದ ಫೆ.11 ರಂದು ರಾಷ್ಟ್ರೀಯ ಲೋಕ ಅದಾಲತ್ ಅನ್ನು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ ಎಸ್ ಸಂಗ್ರೇಶಿ ತಿಳಿಸಿದ್ದಾರೆ.

ನಗರದ ನ್ಯಾಯಾಲಯಗಳ ಸಂಕೀರ್ಣ ಕಛೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಒಟ್ಟು 1,11,492 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಅವುಗಳ ಪೈಕಿ 59,872 ಸಿವಿಲ್ ಪ್ರಕರಣಗಳು ಹಾಗೂ 62,403 ಕ್ರಿಮಿನಲ್ ಪ್ರಕರಣಗಳಿದ್ದು, ಸದರಿ ಪ್ರಕರಣಗಳಲ್ಲಿ 34,739 ಇತ್ಯರ್ಥವಾಗುವ ಸಂಭವವಿದ್ದು, ಅವುಗಳ ಪೈಕಿ ಈಗಾಗಲೇ 19,586 ಪ್ರಕರಣಗಳನ್ನು ರಾಜಿ ಆಗುವ ಸಾಧ್ಯತೆ ಇರುವ ಪ್ರಕರಣಗಳು ಎಂದು ಗುರುತಿಸಲಾಗಿದೆ ಎಂದು ಹೇಳಿದರು.

ರಾಜಿಯಾಗುವಂತಹ ಯಾವುದೇ ಪ್ರಕರಣಗಳನ್ನು ಕಕ್ಷಿಗಾರರ ವಿನಂತಿಯ ಮೇರೆಗೆ ಸಂಬಂಧಪಟ್ಟ ನ್ಯಾಯಾಲಯಗಳಲ್ಲಾಗಲಿ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಸಂಬಂಧಪಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸದಲ್ಲಿ, ಅಂತಹ ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ. ಮಹಾದೇವಸ್ವಾಮಿ, ಉಪಾಧ್ಯಕ್ಷ ಪುಟ್ಟ ಸಿದ್ದೆಗೌಡ, ಕಾರ್ಯದರ್ಶಿ ಎಸ್. ಉಮೇಶ್ ಉಪಸ್ಥಿತರಿದ್ದರು.

ಅಪಹರಣ ಮಾಡಿ, ಹಣ ನೀಡಿದ ನಂತರ ತಂದೆ-ಮಗನನ್ನು ಬಿಟ್ಟ ಕಿಡ್ನಾಪರ್ಸ್: ಅಪಹರಣ ಮಾಡಿ, ಹಣ ನೀಡಿದ ನಂತರ ತಂದೆ ಹಾಗೂ ಮಗನನ್ನು ಬಿಟ್ಟು ಕಿಡ್ನಾಪಸ್೯ ಪರಾರಿಯಾಗಿರುವ ಘಟನೆ ನಡೆದಿದೆ. ಮೈಸೂರಿನ ಜೆ.ಪಿ.ನಗರ ನಿವಾಸಿ ದೀಪಕ್‌ ಕುಮಾರ್‌ ಕೆಡಿಯಾ ಹಾಗೂ ಪುತ್ರ ಹರ್ಷ ಕುಮಾರ್‌ ಕೆಡಿಯಾ ಅವರನ್ನು ದುಷ್ಕರ್ಮಿಗಳು, ನಂಜನಗೂಡಿನ ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಕಾರ್ಖಾನೆ ಬಳಿ ಅಪಹರಿಸಿ ತಿ.ನರಸೀಪುರದಲ್ಲಿ ಸಂಜೆ ವೇಳೆ ಬಿಟ್ಟು ಪರಾರಿಯಾಗಿದ್ದಾರೆ.

ದೀಪಕ್‌ ಮತ್ತು ಹರ್ಷ ಸೋಮವಾರ ಬೆಳಗ್ಗೆ ಮೈಸೂರಿನಿಂದ ಕಾರ್ಖಾನೆಗೆ ತೆರಳಿದ್ದು, ಅಲ್ಲಿ ಕಾರಿನಲ್ಲಿ ಅಪಹರಿಸಿದ್ದ ದುಷ್ಕರ್ಮಿಗಳು ಕುಟುಂಬದವರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕುಟುಂಬದವರು ಅಪಹರಣಕಾರರು ಹೇಳಿದ ಸ್ಥಳಕ್ಕೆ ಹಣ ಕಳುಹಿಸಿದ ಬಳಿಕ ಸಂಜೆ ಹೊತ್ತಿಗೆ ಇಬ್ಬರನ್ನೂ ಸುರಕ್ಷಿತವಾಗಿ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ದೀಪಕ್‌ ಹಾಗೂ ಹರ್ಷ ಅವರು ನೀಡಿದ ದೂರಿನ ಮೇರೆಗೆ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಉದ್ಯಮಿ ಹಾಗೂ ಪುತ್ರ ಅಪಹರಣವಾಗಿ ಬಿಡುಗಡೆಗೊಂಡಿರುವ ಬಗ್ಗೆ ಬಂದ ದೂರಿನ ಮೇರೆಗೆ ‍ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಸ್ ಪಿ ಸೀಮಾ ಲಾಟ್ಕರ್‌ ಮಾಹಿತಿ ನೀಡಿದ್ದಾರೆ.

ಕಾರಿನ ಗಾಜು ಒಡೆದು 10 ಲಕ್ಷ ರೂ. ದರೋಡೆ: ಉದ್ಯಮಿಯ ಕಾರಿನ ಗಾಜು ಒಡೆದ ಕಳ್ಳರು 10 ಲಕ್ಷ ರೂ ನಗದು ದೋಚಿರುವ ಘಟನೆ ವಿಜಯನಗರದ ವಾಟರ್‌ಟ್ಯಾಂಕ್‌ ಬಳಿ ಸೋಮವಾರ ಸಂಜೆ ನಡೆದಿತ್ತು. ಉದ್ಯಮಿ ಗೋವಿಂದೇ ಗೌಡ ಸಬ್‌ರಿಜಿಸ್ಟ್ರಾರ್‌ ಕಚೇರಿ ಸಮೀಪ ಸ್ನೇಹಿತರನ್ನು ನೋಡಲೆಂದು ಕಾರಿನಲ್ಲೇ ಹಣವಿರಿಸಿ ಹೋಗಿದ್ದರು. ವಾಪಸ್‌ ಬಂದು ನೋಡಿದಾಗ ಕಾರಿನ ಮುಂದಿನ ಗಾಜು ಒಡೆದಿತ್ತು. ಡ್ರೈವರ್‌ ಸೀಟ್‌ನಲ್ಲಿ ಇರಿಸಿದ್ದ ಹಣವಿದ್ದ ಬ್ಯಾಗ್ ಕೂಡ ಮಾಯವಾಗಿದೆ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಸರಗಳ್ಳತನ ಮಾಡುತ್ತಿದ್ದ ಮೂವರ ಬಂಧನ: 13 ಲಕ್ಷ ವೌಲ್ಯದ ಚಿನ್ನದ ಸರ ವಶ

Last Updated : Feb 7, 2023, 3:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.