ಮೈಸೂರು: ರಂಗಾಯಣಕ್ಕೆ ಸರ್ಕಾರ ಕೊಡುವ ಅನುದಾನವನ್ನು ನೋಡಿ ನಾನೇ ಗಾಬರಿಗೊಂಡೆ ಸರ್ಕಾರದಿಂದ ಬರುವ ಅನುದಾನ ಬಹಳ ಕಡಿಮೆ ಇದೆ ಎಂದು ನಿರ್ದೇಶಕ ಅಡಂಡ್ಡ.ಸಿ.ಕಾರ್ಯಪ್ಪ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ರಂಗಾಯಣಕ್ಕೆ ಸರ್ಕಾರದಿಂದ ಬರುತ್ತಿರುವ ಅನುದಾನ ತುಂಬಾ ಕಡಿಮೆ ಇದೆ. ಈ ಅನುದಾನದಲ್ಲಿ ರಂಗಾಯಣ ನಡೆಸುವುದು ತುಂಬಾ ಕಷ್ಟ. ಬಹುರೂಪಿ ನಾಟಕೋತ್ಸವಕ್ಕೆ 1 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕೆಂದು ಸಚಿವ ಸಿ.ಟಿ ರವಿಯವರಿಗೆ ಕೇಳಿದ್ದೇನೆ. ರಾಜ್ಯದ 4 ರಂಗಾಯಣದಲ್ಲಿ ಮೈಸೂರು ರಂಗಾಯಣ ಬಹಳ ದೊಡ್ಡದು, ಇತರ ರಂಗಾಯಣಗಳಿಗೆ ಇದನ್ನು ಹೋಲಿಸಬಾರದು. ಸರ್ಕಾರ ನಮ್ಮ ರಂಗಾಯಣಕ್ಕೆ ಕೊಡುವ ಅನುದಾನ ನೋಡಿ ನಾನೇ ಗಾಬರಿಗೊಂಡೆ ಹೆಚ್ಚುವರಿ ಹಣ ಬರಲು ನಾನು ರಾಜಕೀಯ ವ್ಯಕ್ತಿಗಳಂತೆ ಹೋರಾಡುತ್ತಿದ್ದೇನೆ ಎಂದರು.
ಪ್ರತಿ ವರ್ಷ ಬಹುರೂಪಿಗೆ 1 ಕೋಟಿ ಹಣ ಕೊಡಬೇಕು ಒಟ್ಟು ರಂಗಾಯಣಕ್ಕೆ 9 ಕೋಟಿ ಹಣ ನೀಡಬೇಕೆಂದು ಸರ್ಕಾರವನ್ನು ಕೇಳಿದ್ದೇವೆ ಎಂದು ಹೇಳಿದರು.