ETV Bharat / state

ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳ‌ ನೆಲಸಮಕ್ಕೆ ಪ್ರೋ. ರಂಗರಾಜು ವಿರೋಧ - ದೇವರಾಜ ಮಾರುಕಟ್ಟೆ ನೆಲಸಮ

ಸಾಂಸ್ಕೃತಿಕ ನಗರದ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್​ಡೌನ್​ ಬಿಲ್ಡಿಂಗ್ ಕೆಡವಿ ಹೊಸದಾಗಿ ನಿರ್ಮಾಣ ಮಾಡುವುದಕ್ಕೆ ಪಾರಂಪರಿಕ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.

Devaraja Market
ದೇವರಾಜ ಮಾರುಕಟ್ಟೆ
author img

By

Published : Jul 22, 2021, 4:14 PM IST

ಮೈಸೂರು: ನಗರದ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್‌ ಬಿಲ್ಡಿಂಗ್ ಅನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಲು ಸರ್ಕಾರ ಚಿಂತಿಸಿದೆ ಎಂದು ಸಚಿವ ಭೈರತಿ ಬಸವರಾಜು ಹೇಳಿಕೆ ನೀಡಿದ್ದರು. ಇದಕ್ಕೆ ಪಾರಂಪರಿಕ ಸಮಿತಿಯ ಸದಸ್ಯ ಪ್ರೋ.ರಂಗರಾಜು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ದೇವರಾಜ ಮಾರುಕಟ್ಟೆ ಕೆಡವದಂತೆ ಹೈಕೋರ್ಟ್​ನಲ್ಲಿ 2 ಕೇಸ್​ಗಳು ಇವೆ. ಇದನ್ನು ತಿಳಿಯದೆ 100 ಕೋಟಿ ವೆಚ್ಚದಲ್ಲಿ ಮಾರುಕಟ್ಟೆಯನ್ನು ಪುನರ್ ನಿರ್ಮಾಣ ಮಾಡಲು ಹೊರಟಿರುವುದು ಸರಿಯಲ್ಲ. 10 ಕೋಟಿ ನೀಡಿದರೆ ಅದನ್ನು 50 ವರ್ಷ ಬಾಳಿಕೆ ಬರುವ ರೀತಿಯಲ್ಲಿ ಯೋಗ್ಯವಾಗಿ ಸಂರಕ್ಷಣೆ ಮಾಡಬಹುದು ಎಂದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಪ್ರೋ. ರಂಗರಾಜು

ಈ ಮಾರುಕಟ್ಟೆ ಸುಮಾರು 130 ವರ್ಷಗಳಷ್ಟು ಹಳೆಯದ್ದಾಗಿದೆ. ಇದರ ತಳಭಾಗದಲ್ಲಿ ಒಡೆಯರು ಕೆಆರ್​ಎಸ್​ನಿಂದ ಅರಮನೆಗೆ ನೀರು ತರಲು ನಾಲೆಯ ಮಾರ್ಗವನ್ನು ಮಾಡಿಸಲು ಹೊರಟಿದ್ದರು. ನಾಲೆ ತೆಗೆಯುತ್ತಿದ್ದಾಗ ದೊಡ್ಡ ಬಂಡೆಗಳು ಕಂಡುಬಂದವು. ಹೀಗಾಗಿ ಅದನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಈಗಲೂ ದೇವರಾಜ ಮಾರುಕಟ್ಟೆ ಗಟ್ಟಿಯಾಗಿದೆ. ಕೆಲವು ಕಡೆ ಶಿಥಿಲವಾಗಿದೆ. ಅದನ್ನು ಸರಿಪಡಿಸಬಹುದು ಎಂದು ಸಲಹೆ ನೀಡಿದ್ದಾರೆ.

ಓದಿ: ರಾಜೀನಾಮೆ ಕುರಿತು ಸಿಎಂ ಸುಳಿವು: ಸಚಿವ ಸ್ಥಾನದ ಚಿಂತೆ, ಬಿಎಸ್​​​ವೈ ನಿವಾಸಕ್ಕೆ ಸಚಿವರ ದೌಡು..!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.