ETV Bharat / state

ರಾಹುಲ್ ಗಾಂಧಿ ವಿಚಾರಣೆ ರಾಜಕೀಯ ಪ್ರೇರಿತವಲ್ಲ: ಎಸ್.ಟಿ.ಸೋಮಶೇಖರ್

ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದು ರಾಜಕೀಯ ಪ್ರೇರಿತವಲ್ಲ. ಈ ವಿಚಾರವಾಗಿ ಪ್ರತಿಭಟನೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ST Somashekhar
ಎಸ್.ಟಿ.ಸೋಮಶೇಖರ್
author img

By

Published : Jun 14, 2022, 7:02 PM IST

ಮೈಸೂರು: ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಇಡಿ ರಾಜಕೀಯಪ್ರೇರಿತವಾಗಿ ತನಿಖೆ ಮಾಡುತ್ತಿಲ್ಲ. ಈ ವಿಚಾರವಾಗಿ ಕಾಂಗ್ರೆಸ್​​ ದೇಶದಾದ್ಯಂತ ಪ್ರತಿಭಟನೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಇಡಿ ತನಿಖೆಗೆ ಒಳಪಡುವವರು ಆತಂಕ ಪಡಬೇಕಾಗಿಲ್ಲ. ಪ್ರಾಮಾಣಿಕವಾಗಿದ್ದರೆ ಭಯ ಯಾಕೆ? ಯಾರು ಅಕ್ರಮ ಮಾಡಿರುತ್ತಾರೋ ಅವರಿಗೆ ಭಯ ಇರುತ್ತದೆ. ರಾಜ್ಯದಲ್ಲೂ ಅನೇಕ ರಾಜಕಾರಣಿಗಳು, ಅಧಿಕಾರಿಗಳ ಮೇಲೆ ಇಡಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ ಎಂದರು‌.

ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವ ವಿಚಾರವಾಗಿ ಮಾತನಾಡಿದ ಅವರು, ಎಲ್ಲವನ್ನೂ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ. ಇದರಲ್ಲಿ ನಮ್ಮ ಪಾತ್ರ ಏನೂ ಇರುವುದಿಲ್ಲ. ಅವರು ಕೊಡುವ ಮಾರ್ಗದರ್ಶನ ಪಾಲಿಸುತ್ತೇವೆ. ಯಾರೇ ಯೋಗ ಮಾಡಬೇಕಾದ್ರೂ ನೋಂದಣಿ ಆಗಲೇಬೇಕು. ಕೇಂದ್ರ ನೀಡುವ ಮಾರ್ಗದರ್ಶನವೇ ಪ್ರೋಟೋಕಾಲ್ ಎಂದು ಮಾಹಿತಿ ನೀಡಿದರು‌‌.

ಲಲಿತ್ ಮಹಲ್ ಖಾಸಗೀಕರಣ ವಿಚಾರವಾಗಿ ಮಾತನಾಡಿ, ಸಿ.ಪಿ ಯೋಗೇಶ್ವರ್​​ ಪ್ರವಾಸೋದ್ಯಮ ಸಚಿವರಾಗಿದ್ದಾಗ ಪ್ರಸ್ತಾವನೆ ಇತ್ತು. ಮೈಸೂರು ಜನಪ್ರತಿನಿಧಿಗಳ ಅಭಿಪ್ರಾಯದಂತೆ ಕೈ ಬಿಡಲಾಗಿತ್ತು. ಇದಕ್ಕಾಗಿ ಈಗ ಉಪಸಮಿತಿ ರಚನೆ ಮಾಡಲಾಗಿದೆ. ಸಚಿವ ಆನಂದ್ ಸಿಂಗ್ ಹಾಗೂ ನಾರಾಯಣ ಗೌಡ ಸೇರಿ ಸಾಕಷ್ಟು ಜನರಿದ್ದಾರೆ. ಆ ಸಮಿತಿ ಈ ಬಗ್ಗೆ ಸಭೆ ನಡೆಸಿ ತೀರ್ಮನ ಕೈಗೊಳ್ಳುತ್ತೆ ಎಂದು ಹೇಳಿದರು.

ಇದನ್ನೂ ಓದಿ: ನಮ್ಮ ನಾಯಕರು ಯಾವುದೇ ತಪ್ಪು ಮಾಡಿಲ್ಲ, ಅವರ ಪರ ಹೋರಾಡುತ್ತೇವೆ: ಡಿ.ಕೆ.ಶಿವಕುಮಾರ್

ಜೂ.21ರಂದು ಪ್ರಧಾನಿ ಮೋದಿ ಅಗಮನ ವಿಚಾರವಾಗಿ ಮಾತನಾಡಿ, ಯೋಗ ಕಾರ್ಯಕ್ರಮ ಮಾತ್ರ ಅಧಿಕೃತ ಆಗಿದೆ. ಅದರ ಜೊತೆಗೆ ಮೂರ್ನಾಲ್ಕು ಕಾರ್ಯಕ್ರಮ ಅಳವಡಿಸಿಕೊಂಡಿದ್ದೇವೆ. ಫಲಾನುಭವಿಗಳ ಸಂವಾದ ಕಾರ್ಯಕ್ರಮ ನಡೆಸಲು ಚಿಂತಿಸಿದ್ದೇವೆ. ಇಂದು ಸಂಜೆ ಅಧಿಕಾರಿಗಳ ಸಭೆ ನಡೆಸುತ್ತಿದ್ದೇನೆ. ಎಷ್ಟು ಜನರನ್ನ ಸೇರಿಸಬೇಕು ಅಂತ ಅಂತಿಮ ತೀರ್ಮಾನ ಮಾಡ್ತೇವೆ. ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.