ETV Bharat / state

ಸಾಲಮನ್ನಾ ವಿಚಾರ: ಸರ್ಕಾರಕ್ಕೆ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್​​ ನೀಡಿದ್ರು ಈ ಸಲಹೆ - undefined

ನಗರದ ಜೆಎಸ್​ಎಸ್ ಆಸ್ಪತ್ರೆಯಲ್ಲಿರುವ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ ನಡೆಯಿತು. ಜಾಗತೀಕರಣ-ಸವಾಲುಗಳು ಮತ್ತು ಸಹಕಾರದ ಅಗತ್ಯ' ವಿಷಯ ಕುರಿತು ಮಾತನಾಡಿದ ಆರ್ಥಿಕ ತಜ್ಞೆ ಡಾ. ಗೀತಾ ಗೋಪಿನಾಥ್​ ಅವರು ಕೃಷಿ ಸಾಲಮನ್ನಾ ಮಾಡುವುದಕ್ಕಿಂತ, ಕೃಷಿಗೆ ಹೆಚ್ಚಿನ ವೇದಿಕೆ ಒದಗಿಸಿಕೊಟ್ಟರೆ ಎಲ್ಲ ರೈತರಿಗೆ ಅನುಕೂಲವಾಗಲಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಡಾ. ಗೀತಾ ಗೋಪಿನಾಥ್
author img

By

Published : May 20, 2019, 9:04 PM IST

ಮೈಸೂರು: ರೈತರ ಸಾಲ ಮನ್ನಾ ಮಾಡುವುದಕ್ಕಿಂತ ಅವರ ಕೃಷಿಗೆ ಲಾಭದಾಯಕ ವೇದಿಕೆ ಒದಗಿಸಿಕೊಡಬೇಕಿದೆ ಎಂದು ಅಮೆರಿಕದ ವಾಷಿಂಗ್ಟನ್​ ಡಿಸಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಸಂಶೋಧನಾ ವಿಭಾಗದ ಆರ್ಥಿಕ ಸಲಹೆಗಾರರು ಮತ್ತು ನಿರ್ದೇಶಕಿಯಾಗಿರುವ ಡಾ. ಗೀತಾ ಗೋಪಿನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿರುವ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ಸುವರ್ಣ ಮಹೋತ್ಸವದ ದತ್ತಿ ಉಪನ್ಯಾಸದಲ್ಲಿ' ಜಾಗತೀಕರಣ - ಸವಾಲುಗಳು ಮತ್ತು ಸಹಕಾರದ ಅಗತ್ಯ' ವಿಷಯ ಕುರಿತು ಅವರು ಮಾತನಾಡಿದರು.

ಕೃಷಿ ಸಾಲ ನೀಡುವುದರಿಂದ ಪ್ರಗತಿಗೆ ಅನುಕೂಲವಾಗಲಿದೆ. ಆದ್ರೆ, ಇದರಿಂದ ದೇಶದ ಆರ್ಥಿಕತೆ ಮೇಲೆ ಹೊಡೆತ ಬೀಳಲಿದೆ. ಹಾಗಾಗಿ ಕೃಷಿಗೆ ದೇಶದಲ್ಲಿ ಉತ್ತಮ ವೇದಿಕೆ ಒದಗಿಸಿಕೊಟ್ಟರೆ, ಎಲ್ಲ ರೈತರಿಗೆ ಅನುಕೂಲವಾಗಲಿದೆ. ಭಾರತಕ್ಕೆ ಜಿಡಿಪಿಯಲ್ಲಿ ಹಿನ್ನಡೆಯಾಗುತ್ತಿದೆ. ಈ ಸಂಬಂಧ ಭಾರತ ಸರ್ಕಾರ ಆರ್ಥಿಕ ತಜ್ಞರ ಸಲಹೆ ಪಡೆದು ಆರ್ಥಿಕತೆಯನ್ನು ಮೇಲೆತ್ತುವ ಕೆಲಸ ಮಾಡಬೇಕಿದೆ. ಆರ್ಥಿಕತೆ ಸ್ಥಿರವಾಗಿದ್ದರೆ ದೇಶದ ಅಭಿವೃದ್ಧಿ ಸಾಧ್ಯವೆಂದು ಗೀತಾ ಗೋಪಿನಾಥ್​ ಪ್ರತಿಪಾದಿಸಿದರು.

ಸಾಲಮನ್ನಾ ಬದಲು ಕೃಷಿಗೆ ಉತ್ತಮ ವೇದಿಕೆ ಕಲ್ಪಿಸುವಂತೆ ವಾಷಿಂಗ್ಟನ್​ ಡಿಸಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಸಂಶೋಧನಾ ವಿಭಾಗದ ಆರ್ಥಿಕ ಸಲಹೆಗಾರ್ತಿ ಮತ್ತು ನಿರ್ದೇಶಕಿ ಡಾ. ಗೀತಾ ಗೋಪಿನಾಥ್​​ ಸಲಹೆ

ಲೇಖಕ ಎಸ್. ಗುರುಮೂರ್ತಿ ಅವರು ಬರೆದಿರುವ 'ಭಾರತ್-ಗ್ಲೋಬಲ್ ಆ್ಯಂಬಿಷನ್ಸ್ ಆ್ಯಂಡ್​ ಲೋಕಲ್ ಚಾಲೆಂಜಸ್' ಕೃತಿಯನ್ನು ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ್ ಬಿಡುಗಡೆಗೊಳಿಸಿದರು. ಈ ವೇಳೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈವಿವಿ ಕುಲಪತಿ ಡಾ. ಜಿ.ಹೇಮಂತ್ ಕುಮಾರ್, ಜೆಎಸ್​​​ಎಸ್​ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜೆ. ಬೆಟಸೂರಮಠ, ಜೆಎಸ್ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ‌ ಪ್ರೊ.ಕೆ.ಎಸ್. ಸುರೇಶ್ ಸೇರಿದಂತೆ ರೈತ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Intro: ಅಂತರಾಷ್ಟ್ರೀಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಉಪನ್ಯಾಸ

Body:ಗೀತಾ ಗೋಪಿನಾಥ್ ಉಪನ್ಯಾಸ

Conclusion:ಸಾಲಮನ್ನಾ ಕ್ಕಿಂತ ಕೃಷಿಗೆ ಲಾಭದಾಯಕ ವೇದಿಕೆ ಒದಗಿಸಿ: ಆರ್ಥಿಕ ತಜ್ಞೆ ಡಾ.ಗೀತಾ ಗೋಪಿನಾಥ್
ಮೈಸೂರು: ರೈತರ ಸಾಲ ಮಾಡುವುದಕ್ಕಿಂತ ಕೃಷಿಗೆ ಲಾಭದಾಯಕ ವೇದಿಕೆ ಒದಗಿಸಕೊಡಬೇಕಿದೆ ಎಂದು ಅಮೆರಿಕದ ವಾಷಿಂಗ್ ಟನ್ ಡಿಸಿ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯ ಸಂಶೋಧನಾ ವಿಭಾಗದ ಆರ್ಥಿಕ ಸಲಹೆಗಾರರು ಮತ್ತು ನಿರ್ದೇಶಕರಾದ ಡಾ.ಗೀತಾ ಗೋಪಿನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೆಎಸ್ ಎಸ್ ಆಸ್ಪತ್ರೆಯಲ್ಲಿರುವ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ಸುವರ್ಣ ಮಹೋತ್ಸವದ ದತ್ತಿ ಉಪನ್ಯಾಸದಲ್ಲಿ' ಜಾಗತೀಕರಣ-ಸವಾಲುಗಳು ಮತ್ತು ಸಹಕಾರದ ಅಗತ್ಯ' ವಿಷಯ ಕುರಿತು ಮಾತನಾಡಿದ ಮಾತನಾಡಿದರು ಅವರು, ಕೃಷಿ ಸಾಲ ಮಾಡುವುದರಿಂದ ಸಾಲ ಪಡೆದ ರೈತರಿಗೆ ಅನುಕೂಲವಾಗಲಿದೆ.ಇದರಿಂದ ದೇಶದ ಆರ್ಥಿಕತೆ ಮೇಲೂ ಹೊಡೆತ ಬೀಳಲಿದೆ.ಕೃಷಿಗೆ ದೇಶದಲ್ಲಿ ಲಾಭ ವೇದಿಕೆ ಒದಗಿಸಿಕೊಟ್ಟರೆ ಎಲ್ಲ ರೈತರಿಗೆ ಅನುಕೂಲವಾಗಲಿದೆ ಎಂದರು.
ಭಾರತ ದೇಶ ಜಿಡಿಪಿಯಲ್ಲಿ ಹಿನ್ನೆಡೆಯಾಗುತ್ತಿದೆ.ದೇಶದ ಆರ್ಥಿಕ ತಜ್ಞರ ಸಲಹೆ ಪಡೆದ ದೇಶದ ಆರ್ಥಿಕತೆ ಮೇಲೆತ್ತಬೇಕು.ಆರ್ಥಿಕತೆ ಸ್ಥಿರವಾಗಿದ್ದರೆ ದೇಶದ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ಭಾರತದಲ್ಲಿ ಜನಸಂಖ್ಯೆ ಬೆಳೆಯುತ್ತಿದೆ‌.ಭಾರತ ಜಗತ್ತಿನಲ್ಲಿ ಆರ್ಥಿಕತೆ ಬೆಳೆಯಲು ಇನ್ನು ದಶಕಗಳು ಬೇಕು.ಒಟ್ಟು ದೇಶಿಯ ಉತ್ಪಾದನೆ(ಜಿಡಿಪಿ)
ಅಪರಾಧ, ಭ್ರಷ್ಟಚಾರ, ವಾತಾವರಣ ಬದಲಾವಣೆ, massive refugees flows, ಭಾರತ ಆರ್ಥಿಕ ಬಗ್ಗೆ ಸಾಕಷ್ಟು ಬದಲಾವಣೆಯಾಗಬೇಕಿದೆ ಎಂದು ತಿಳಿಸಿದರು.
ಲೇಖಕ ಎಸ್.ಗುರುಮೂರ್ತಿ ಅವರು ಬರೆದಿರುವ 'ಭಾರತ್-ಗ್ಲೋಬಲ್ ಆ್ಯಂಬಿಷನ್ಸ್ ಅಂಡ್ ಲೋಕಲ್ ಚಾಲೆಂಜಸ್' ಕೃತಿಯನ್ನು ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಬಿಡುಗಡೆಗೊಳಿಸಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈವಿವಿ ಕುಲಪತಿ ಡಾ.ಜಿ.ಹೇಮಂತ್ ಕುಮಾರ್, ಜೆಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟಸೂರಮಠ, ಜೆಎಸ್ ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ‌ ಪ್ರೊ.ಕೆ.ಎಸ್.ಸುರೇಶ್ ಸೇರಿದಂತೆ ರೈತ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಈ ಕಾರ್ಯಕ್ರಮದ ವಿಡಿಯೋ ಅನ್ನು FTP ಲಿ ಕೂಡ ಕಳುಹಿಸಲಾಗಿದೆ)

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.