ETV Bharat / state

ಜಿಲ್ಲಾಧಿಕಾರಿ ಬಿ.ಶರತ್​ ವರ್ಗಾವಣೆ ಖಂಡಿಸಿ ಪ್ರತಿಭಟನೆ - Mysore Latest News

ಉತ್ತಮವಾಗಿ ಕಾರ್ಯನಿರ್ವಹಿಸಿ ಮೈಸೂರಿಗೆ ಕೆಲಸ ಮಾಡಲು ಬಂದಿದ್ದ, ಇಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಸೂಕ್ತ ಕ್ರಮವಲ್ಲವೆಂದು ಕಿಡಿಕಾರಿದರು.

protest against transfer of District Collector B. Sharath
ಜಿಲ್ಲಾಧಿಕಾರಿ ಬಿ.ಶರತ್​ ವರ್ಗಾವಣೆ ಖಂಡಿಸಿ ಪ್ರತಿಭಟನೆ
author img

By

Published : Sep 30, 2020, 1:57 PM IST

ಮೈಸೂರು: ಜಿಲ್ಲೆಗೆ ತಿಂಗಳ ಹಿಂದಷ್ಟೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ಬಿ. ಶರತ್ ಅವರ ವರ್ಗಾವಣೆ ಖಂಡಿಸಿ, ಮೈಸೂರು ಕನ್ನಡ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ದಕ್ಷ ಅಧಿಕಾರಿಯಾಗಿರುವ ಬಿ.ಶರತ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಮೈಸೂರಿನ ಜನತೆಗೆ ಆಘಾತವನ್ನುಂಟು ಮಾಡಿದೆ. ಈ ಹಿಂದೆ ಕಲಬುರಗಿಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿ ಕೋವಿಡ್ ನಿಯಂತ್ರಿಸಲು ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸಿ ಮೈಸೂರಿಗೆ ಕೆಲಸ ಮಾಡಲು ಬಂದಿದ್ದ, ಇಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಸೂಕ್ತ ಕ್ರಮವಲ್ಲವೆಂದು ಕಿಡಿಕಾರಿದರು.

ಜಿಲ್ಲಾಧಿಕಾರಿ ಬಿ.ಶರತ್​ ವರ್ಗಾವಣೆ ಖಂಡಿಸಿ ಪ್ರತಿಭಟನೆ

ಬಿ.ಶರತ್ ಅವರು ಹಿಂದುಳಿದ ವರ್ಗದಿಂದ ಬಂದು, ಜನರ ಕಷ್ಟಗಳನ್ನು ಬಲ್ಲವರಾಗಿದ್ದಾರೆ. ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ‌. ಆದರೆ, ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿರುವುದು ಖಂಡನೀಯವೆಂದು ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.