ಮೈಸೂರು: ಇಂದಿನಿಂದ ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಶುರುವಾಗಿದ್ದು, ನಗರದ 6 ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ರ ವರೆಗೆ ನಗರದ ಕುವೆಂಪು ನಗರ, ಜಯಲಕ್ಷ್ಮಿಪುರಂ, ನಾರಾಯಣ ಶಾಸ್ತ್ರಿ ರಸ್ತೆ , ಸರಸ್ವತಿಪುರಂ, ವಿವಿ ಪುರಂ ನಲ್ಲಿ ಮೌಲ್ಯಮಾಪನ ನಡೆಯುವುದರಿಂದ ಆಯಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ ಎಂದು ವಿವರಿಸಿದ್ದಾರೆ.