ಮೈಸೂರು : ಕೋವಿಡ್ ಡೇಂಜರ್ ವೈರಸ್ ಅಲ್ಲ. ಆದರೆ, ಎಚ್ಚರಿಕೆಯಿಂದ ಇರಬೇಕು ಅಷ್ಟೇ.. ಇದಕ್ಕೆ ಇನ್ನು 2-3 ತಿಂಗಳಲ್ಲೇ ಲಸಿಕೆ ಲಭ್ಯವಾಗುತ್ತದೆ ಎಂದು ವಿಜ್ಞಾನಿ ಪ್ರೊ. ಕೆ ಎಸ್ ರಂಗಪ್ಪ ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇಂದು ವಿಜ್ಞಾನ ಭವನದಲ್ಲಿ ಈಟಿವಿ ಭಾರತ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿಜ್ಞಾನಿ ಪ್ರೊ.ಕೆ ಎಸ್ ರಂಗಪ್ಪ, ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಮಾಸ್ಕ್ ಹಾಗೂ ಒಳ್ಳೆಯ ಸೋಪ್ನಿಂದ ಕೈ ತೊಳೆದುಕೊಂಡ್ರೆ ಸಾಕು. ಇದು ಸಾರ್ಸ್ ಮತ್ತು ಹೆಚ್1ಎನ್1 ವೈರಸ್ಗೆ ಹೋಲಿಸಿದ್ರೆ ದುರ್ಬಲ ವೈರಸ್ ಎಂದರು.
ಆಕ್ಸ್ಫರ್ಡ್ನಲ್ಲಿ 6000 ದಿಂದ 7000 ವಿಜ್ಞಾನಿಗಳು ಕೋವಿಡ್ಗೆ ಲಸಿಕೆ ಕಂಡು ಹಿಡಿಯಲು ಕೆಲಸ ಮಾಡುತ್ತಿದ್ದಾರೆ. 2-3 ತಿಂಗಳಲ್ಲಿ ಲಸಿಕೆ ಬರಬಹುದು. 3 ವಿಧದಲ್ಲಿ ಲಸಿಕೆಗಳ ಪ್ರಯೋಗ ಮಾಡಲಾಗುತ್ತಿದೆ.
ಕೋವಿಡ್ ಸಾವಿನ ಬಗ್ಗೆ ಯಾವುದೇ ಭಯ ಬೇಡ, ಇತರ ಮಾರಣಾಂತಿಕ ರೋಗಗಳಿಗೆ ತುತ್ತಾದವರು ಮಾತ್ರ ಕೋವಿಡ್ ತಗುಲಿದ್ರೆ ಸಾಯುತ್ತಿದ್ದಾರೆ ಅಷ್ಟೇ.. ಸಾವಿನ ಪ್ರಮಾಣ ತುಂಬಾ ಕಡಿಮೆ ಇದೆ. ಇದರ ಬಗ್ಗೆ ಜನರು ಭಯ ಪಡುವುದು ಬೇಡ ಎಂದು ವಿಜ್ಞಾನಿ ಪ್ರೊ. ಕೆ ಎಸ್ ರಂಗಪ್ಪ ತಿಳಿಸಿದರು.