ಮೈಸೂರು: ವಾಕ್ ಮಾಡುವಾಗ ವಿಚಾರವಾದಿ ಕೆ.ಎಸ್. ಭಗವಾನ್ ಕುಸಿದು ಬಿದ್ದ ಪರಿಣಾಮ ಗಾಯವಾಗಿರುವ ಹಿನ್ನೆಲೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಸಂಜೆ ವಾಕಿಂಗ್ ಮಾಡುವಾಗ ವಿಚಾರವಾದಿ ಪ್ರೊ. ಭಗವಾನ್ ಕುಸಿದು ಬಿದ್ದು ಮೂಗಿಗೆ ಗಾಯವಾಗಿದ್ದು ಅವರನ್ನು ನಗರದ ಸುಯೋಗ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿ ತೀವ್ರ ನಿಗ ಘಟಕದಲ್ಲಿ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.
ತೀವ್ರತರದ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಪ್ರೊ. ಭಗವಾನ್ಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಮೂಗಿನಲ್ಲಿ ತೀವ್ರ ರಕ್ತ ಸ್ರಾವವಾಗಿದೆ.