ETV Bharat / state

ಹುಣಸೂರು ಉಪಚುನಾವಣೆಗೆ ಸಕಲ ಸಿದ್ಧತೆ: ಡಿಸಿಯಿಂದ ಮಾಹಿತಿ - karnataka by election latets news

ಹುಣಸೂರು ಉಪಚುನಾವಣೆಗೆ ಸಕಲ ಸಿದ್ಧತೆಯಾಗಿದ್ದು,10 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್
author img

By

Published : Nov 22, 2019, 11:41 PM IST

ಮೈಸೂರು: ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪೂರ್ವ ಸಿದ್ಧತೆ ನಿಮಿತ್ತ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಅಮರ್ ಖುಷ್ವ (ದೂರವಾಣಿ ಸಂಖ್ಯೆ: 7259813556) ಹಾಗೂ ವೆಚ್ಚ ವೀಕ್ಷಕರಾಗಿ ಉಪಿಂದರ್ ಬಿರ್ ಸಿಂಗ್ (ದೂರವಾಣಿ ಸಂಖ್ಯೆ: 7899831135) ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.

Prepare for the by-election of Hunsur: DC
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಹುಣಸೂರು ಉಪಚುನಾವಣೆಯಲ್ಲಿ ಒಟ್ಟು 21 ಅಭ್ಯರ್ಥಿಗಳಿಂದ 31 ನಾಮಪತ್ರ ಸ್ವೀಕೃತವಾಗಿದ್ದವು. 11 ಅಭ್ಯರ್ಥಿಗಳು ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದು, ಅಂತಿಮವಾಗಿ 10 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ನೀಡಿದರು.

ಚುನಾವಣಾಧಿಕಾರಿಯಾಗಿ ಹುಣಸೂರು ಉಪವಿಭಾಗದ ಉಪವಿಭಾಗಾಧಿಕಾರಿಗಳಾದ ಎಸ್.ಪೂವಿತ ಅವರು (ದೂ.ಸಂಖ್ಯೆ: 9606137722) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಹುಣಸೂರು ತಾಲೂಕಿನ ತಹಶೀಲ್ದಾರ್ ಬಸವರಾಜ್ ಐ.ಇ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಣಸೂರು ವಿಧಾನಸಭಾ ಕ್ಷೇತ್ರದದಲ್ಲಿ ಒಟ್ಟು 274 ಮತಗಟ್ಟೆಗಳಿದ್ದು, ಒಟ್ಟು 2,27,974 ಮತದಾರರಿದ್ದಾರೆ. 1,14,146 ಪುರಷ ಮತದಾರರು, 1,12,770 ಮಹಿಳಾ ಮತದಾರರು, 4 ಇತರ ಮತದಾರರು ಇದ್ದು, ಹೆಚ್ಚುವರಿಯಾಗಿ 434 ಪುರುಷ ಮತದಾರರು ಹಾಗೂ 618 ಮಹಿಳಾ ಮತದಾರರು, ಹಾಗೂ 6 ಇತರ ಮತದಾರರು ಸೇರ್ಪಡೆಯಾಗಿದ್ದು, ವಿಶೇಷ ಚೇತನ ಮತದಾರರು ಒಟ್ಟು 2,235 ಇದ್ದು ಹೊಸದಾಗಿ ಯಾರು ಸೇರ್ಪಡೆಯಾಗಿಲ್ಲ ಎಂದು ಹೇಳಿದರು.

ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೆ ಅಗತ್ಯವಾದ ಕನಿಷ್ಠ ಸೌಲಭ್ಯಗಳಾದ ಕುಡಿವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ರ್ಯಾಂಪ್ ವ್ಯವಸ್ಥೆಯನ್ನು ಮಾಡಲಾಗಿದೆ. ಬ್ಯಾಲೆಟ್ ಯುನಿಟ್ 329, ಕಂಟ್ರೋಲ್ ಯುನಿಟ್ 329 ಹಾಗೂ ವಿವಿಪ್ಯಾಟ್ 357 ಮತಯಂತ್ರಗಳನ್ನು ಹುಣಸೂರು ತಾಲೂಕಿನ ನಗರಸಭೆ ಕಾರ್ಯಾಲಯ ಕಟ್ಟಡ ಭದ್ರತಾ ಕೊಠಡಿಯಲ್ಲಿ ಪೊಲೀಸ್ ಭದ್ರತೆ ಹಾಗೂ ಸಿಸಿಟಿವಿ ಕಣ್ಗಾವಲಿನಲ್ಲಿ ಸುರಕ್ಷಿತವಾಗಿ ಇಡಲಾಗಿದೆ ಎಂದರು.

ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಮತ್ತು ಮತ ಎಣಿಕೆ ನಡೆಸಲು ಚುನಾವಣಾ ವೀಕ್ಷಕರು, ಜಿಲ್ಲಾ ಚುನಾವಣಾಧಿಕಾರಿ, ಚುನಾವಣಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಮತ್ತು ಲೋಕೋಪಯೋಗಿ ಇಲಾಖೆಯ ಅಭಿಯಂತರರು ಸಂಯುಕ್ತ ಆಶ್ರಯದಲ್ಲಿ ಸ್ಥಳ ಪರಿಶೀಲನೆ ಮಾಡಿ ಹುಣಸೂರಿನ ಶ್ರೀ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ನಡೆಸಲು ನಿಗದಿ ಮಾಡಲಾಗಿದೆ ಎಂದರು.

ಚುನಾವಣೆ ಸಂಬಂಧ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದ್ದು, ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ : 1077/1950, ಹುಣಸೂರು ಉಪವಿಭಾಗಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08222-252073 ಹಾಗೂ ಹುಣಸೂರು ತಾಲೂಕು ಕಚೇರಿ ದೂರವಾಣಿ ಸಂಖ್ಯೆ: 08222-252040 ಗೆ ಕರೆ ಮಾಡಬಹುದು. 1950 ದೂರವಾಣಿ ಸಂಖ್ಯೆಗೆ ಈವರೆಗೂ ಒಟ್ಟು 94 ದೂರವಾಣಿ ಕರೆಗಳು ಸ್ವೀಕತವಾಗಿವೆ ಎಂದರು.

ಮನುಗನಹಳ್ಳಿ, ವೀರನಹೊಸಹಳ್ಳಿ( ಉಮ್ಮತ್ತೂರು, ಚಿಲ್ಕುಂದ, ಗಾವಡಗೆರೆ ( ಚಿಕ್ಕಾಡನಹಳ್ಳಿ) ಮುತ್ತುರಾಯನಹೊಸಹಳ್ಳಿ, ದೊಡ್ಡೇಕೊಪ್ಪಲು ಚೆಕ್‍ಪೋಸ್ಟ್‍ಗಳನ್ನು ಮಾಡಲಾಗಿತ್ತು. ಹೆಚ್ಚುವರಿಯಾಗಿ ಆಸ್ವಾಳು, ಶಾಂತಿಪುರ, ಶಿರೇನಹಳ್ಳಿಯಲ್ಲಿ ಚೆಕ್ ಪೋಸ್ಟ್​​​ಗಳನ್ನ ಮಾಡಲಾಗಿದೆ ಎಂದು ತಿಳಿಸಿದರು. ಚುನಾವಣೆ ಹಿನ್ನೆಲೆ ಒಟ್ಟು 9 ಚೆಕ್‍ಪೋಸ್ಟ್​ಗಳನ್ನ ತೆರೆಯಲಾಗಿದ್ದು, ಈಗಾಗಲೇ ಹಣ, ವಸ್ತುಗಳು ಮತ್ತು ಮದ್ಯ ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ಒಟ್ಟು ಹಣ 6,35,300/- ಇದರಲ್ಲಿ 4,00,000/- ರೂ.ಗಳನ್ನು ವಾರಸುದಾರರ ದಾಖಲೆಗಳನ್ನು ಪರಿಶೀಲಿಸಿ ಹಿಂದಿರುಗಿಸಲಾಗಿದೆ. 1,37,00000/- ರೂ.ಗಳ ಮದ್ಯವಶಪಡಿಸಿಕೊಳ್ಳಲಾಗಿದೆ. ಹಾಗೂ 97,90,000/-ರೂ. ಮೌಲ್ಯದ ಪಾಂಪ್ಲೇಟ್, ಪಾತ್ರೆ, ಸೀರೆ ದ್ವಿ ಚಕ್ರ ವಾಹನ ಹಾಗೂ ನಾಲ್ಕು ಚಕ್ರವಾಹನ, 4 ಟ್ಯಾಂಕರ್ಸ್‍ಗಳನ್ನು ವಶಪಡಿಸಿಕೊಂಡಿದ್ದು ಇದುವರೆಗೆ 40 ಎಫ್‍ಐಆರ್​​​​​​​ ದಾಖಲಾಗಿವೆ ಎಂದು ಮಾಹಿತಿ ನೀಡಿದರು.

Intro:ಡಿಸಿBody:ಹುಣಸೂರು ಉಪಚುನಾವಣೆಗೆ ಸಕಲ ಸಿದ್ಧತೆ: ಅಭಿರಾಮ್ ಜಿ.ಶಂಕರ್
ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆ ಭಾರತ ಚುನಾವಣಾ ಆಯೋಗ ವೇಳಾ ಪಟ್ಟಿಯನ್ನು ಪ್ರಕಟಿಸಿದೆ. ಮತದಾನವು ಡಿಸೆಂಬರ್ 5 ರಂದು, ಮತ ಎಣಿಕೆ ಡಿಸೆಂಬರ್ 9 ರಂದು ಹಾಗೂ ಚುನಾವಣೆಯ ಮುಕ್ತಾಯ ದಿನಾಂಕವನ್ನು ಡಿಸೆಂಬರ್ 11 ಎಂದು ನಿಗಧಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ತಿಳಿಸಿದರು.
ಹುಣಸೂರು ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಪೂರ್ವ ಸಿದ್ಧತೆ ಹಿನ್ನೆಲೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಅಮರ್ ಖುಷ್ವ (ದೂರವಾಣಿ ಸಂಖ್ಯೆ: 7259813556) ಹಾಗೂ ವೆಚ್ಚ ವೀಕ್ಷಕರಾಗಿ ಉಪಿಂದರ್ ಬಿರ್ ಸಿಂಗ್ (ದೂರವಾಣಿ ಸಂಖ್ಯೆ: 7899831135) ಅವರನ್ನು ನೇಮಕ ಮಾಡಲಾಗಿದ್ದು, ಚುನಾವಣೆ ಸಂಬಂಧ ಹೆಚ್ಚಿನ ಮಾಹಿತಿ ಹಾಗೂ ದೂರುಗಳಿಗೆ ಸಂಪರ್ಕಿಸುವಂತೆ ಅವರು ತಿಳಿಸಿದರು.
ಹುಣಸೂರು ಉಪಚುನಾವಣಾ 2019 ರ ಒಟ್ಟು 21 ಅಭ್ಯರ್ಥಿಗಳಿಂದ 31 ನಾಮಪತ್ರ ಸ್ವೀಕೃತವಾಗಿದ್ದು, ಯಾವುದೇ ನಾಮಪತ್ರ ತಿರಸ್ಕøತವಾಗಿರುವುದಿಲ್ಲ. 11 ಅಭ್ಯರ್ಥಿಗಳು ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದು, ಅಂತಿಮವಾಗಿ 10 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಚುನಾವಣಾಧಿಕಾರಿಯಾಗಿ ಹುಣಸೂರು ಉಪವಿಭಾಗದ ಉಪವಿಭಾಗಾಧಿಕಾರಿಗಳಾದ ಎಸ್.ಪೂವಿತ ಅವರು (ದೂ.ಸಂಖ್ಯೆ: 9606137722) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಹುಣಸೂರು ತಾಲ್ಲೂಕಿನ ತಹಶೀಲ್ದಾರ್‍ರಾದ ಬಸವರಾಜ್ ಐ.ಇ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಹುಣಸೂರು ವಿಧಾನಸಭಾ ಕ್ಷೇತ್ರದದಲ್ಲಿ ಒಟ್ಟು 274 ಮತಗಟ್ಟೆಗಳಿದ್ದು, ಒಟ್ಟು 2,27,974 ಮತದಾರರಿದ್ದಾರೆ. 1,14,146 ಪುರಷ ಮತದಾರರು, 1,12,770 ಮಹಿಳಾ ಮತದಾರರು, 4 ಇತರೆ ಮತದಾರರು ಇದ್ದು, ಹೆಚ್ಚುವರಿಯಾಗಿ 434 ಪುರುಷ ಮತದಾರರು ಹಾಗೂ 618 ಮಹಿಳಾ ಮತದಾರರು, ಹಾಗೂ 6 ಇತರೆ ಮತದಾರರು ಸೇರ್ಪಡೆಯಾಗಿದ್ದು, ವಿಶೇಷ ಚೇತನ ಮತದಾರರು ಒಟ್ಟು 2235 ಇದ್ದು ಹೊಸದಾಗಿ ಯಾರು ಸೇರ್ಪಡೆಯಾಗಿಲ್ಲ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಅಗತ್ಯವಾದ ಕನಿಷ್ಟ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ರ್ಯಾಂಪ್ ವ್ಯವಸ್ಥೆಯನ್ನು ಮಾಡಲಾಗಿದೆ. ಬ್ಯಾಲೆಟ್ ಯುನಿಟ್ 329, ಕಂಟ್ರೋಲ್ ಯುನಿಟ್ 329 ಹಾಗೂ ವಿವಿಪ್ಯಾಟ್ 357 ಮತಯಂತ್ರಗಳನ್ನು ಹುಣಸೂರು ತಾಲ್ಲೂಕಿ ನಗರಸಭೆ ಕಾರ್ಯಾಲಯ ಕಟ್ಟಡ ಭದ್ರತಾ ಕೊಠಡಿಯಲ್ಲಿ ಪೊಲೀಸ್ ಭದ್ರತೆ ಹಾಗೂ ಸಿಸಿಟಿವಿ ಕಣ್ಗಾವಲಿನಲ್ಲಿ ಸುರಕ್ಷಿತವಾಗಿ ಇಡಲಾಗಿದೆ ಎಂದರು.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಮತ್ತು ಮತ ಎಣಿಕೆ ನಡೆಸಲು ಚುನಾವಣಾ ವೀಕ್ಷಕರು, ಜಿಲ್ಲಾ ಚುನಾವಣಾಧಿಕಾರಿ, ಚುನಾವಣಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಮತ್ತು ಲೋಕೋಪಯೋಗಿ ಇಲಾಖೆಯ ಅಭಿಯಂತರರು ಸಂಯುಕ್ತ ಆಶ್ರಯದಲ್ಲಿ ಸ್ಥಳ ಪರಿಶೀಲನೆ ಮಾಡಿ ಹುಣಸೂರಿನ ಶ್ರೀ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ನಡೆಸಲು ನಿಗಧಿ ಮಾಡಲಾಗಿದೆ ಎಂದರು.

ಚುನಾವಣೆ ಸಂಬಂಧ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದ್ದು, ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ : 1077/1950, ಹುಣಸೂರು ಉಪವಿಭಾಗಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08222-252073 ಹಾಗೂ ಹುಣಸೂರು ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ: 08222-252040 ಗೆ ಕರೆ ಮಾಡಬಹುದು. 1950 ದೂರವಾಣಿ ಸಂಖ್ಯೆಗೆ ಈವರೆಗೂ ಒಟ್ಟು 94 ದೂರವಾಣಿ ಕರೆಗಳು ಸ್ವೀಕತವಾಗಿವೆ ಎಂದರು.
ಮನುಗನಹಳ್ಳಿ, ವೀರನಹೊಸಹಳ್ಳಿ( ಉಮ್ಮತ್ತೂರು, ಚಿಲ್ಕುಂದ, ಗಾವಡಗೆರೆ ( ಚಿಕ್ಕಾಡನಹಳ್ಳಿ) ಮುತ್ತುರಾಯನಹೊಸಹಳ್ಳಿ, ದೊಡ್ಡೇಕೊಪ್ಪಲು ಚೆಕ್‍ಪೋಸ್ಟ್‍ಗಳನ್ನು ಮಾಡಲಾಗಿತ್ತು. ಹೆಚ್ಚುವರಿಯಾಗಿ ಆಸ್ವಾಳು, ಶಾಂತಿಪುರ, ಶಿರೇನಹಳ್ಳಿಯಲ್ಲಿ ಚೆಕ್ ಪೋಸ್ಟ್‍ಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಚುನಾವಣೆಯ ಹಿನ್ನೆಲೆ ಒಟ್ಟು 9 ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದ್ದು, ಈಗಾಗಲೇ ಹಣ, ವಸ್ತುಗಳು ಮತ್ತು ಮದ್ಯ ಜಪ್ತಿ ಮಾಡಲಾಗಿದೆ.
ಜಪ್ತಿ ಮಾಡಲಾದ ಒಟ್ಟು ಹಣ 6,35,300/- ಇದರಲ್ಲಿ 4,00,000/- ರೂಗಳನ್ನು ವಾರಸುದಾರರ ದಾಖಲೆಗಳನ್ನು ಪರಿಶೀಲಿಸಿ ಹಿಂದಿರುಗಿಸಲಾಗಿದೆ. 1,37,00000/- ರೂ.ಗಳ ಮದ್ಯವಶಪಡಿಸಿಕೊಳ್ಳಲಾಗಿದೆ. ಹಾಗೂ 97,90,000/-ರೂ. ಮೌಲ್ಯದ ಪಾಂಪ್ಲೇಟ್, ಪಾತ್ರೆ, ಸೀರೆ ದ್ವಿ ಚಕ್ರ ವಾಹನ ಹಾಗೂ ನಾಲ್ಕು ಚಕ್ರವಾಹನ, 4 ಟ್ಯಾಂಕರ್ಸ್‍ಗಳನ್ನು ವಶಪಡಿಸಿಕೊಂಡಿದ್ದು ಇದುವರೆಗೆ 40 ಎಫ್‍ಐಆರ್‍ಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಮತದಾನ ದಿನದಂದು ಹುಣಸೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮತದಾರರಿಗೆ ಮತದಾನ ಮಾಡಲು ಸರ್ಕಾರಿ ಮತ್ತು ಖಾಸಗಿ ವಯಲಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ನೌಕರರುಗಳಿಗೆ ಡಿಸೆಂಬರ್ 5 ರಂದು ವೇತನ ಸಹಿತ ಸಾರ್ವತ್ರಿಕ ರಜೆಯನ್ನು ನೀಡಲು ಭಾರತ ಚುನಾವಣಾ ಆಯೋಗ ನಿರ್ಧರಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಚುನಾವಣಾ ಸಾಮಾನ್ಯ ವೀಕ್ಷಕರಾದ ಅಮರ್ ಖುಷ್ವ ಹಾಗೂ ವೆಚ್ಚ ವೀಕ್ಷಕರಾದ ಉಪಿಂದರ್‍ಬಿರ್ ಸಿಂಗ್ ಮತ್ತು ಇತರರು ಉಪಸ್ಥಿತರಿದ್ದರು.Conclusion:ಡಿಸಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.