ETV Bharat / state

ಮುಂಬೈನಿಂದ ಬಂದ ಗರ್ಭಿಣಿಗೆ ಕೊರೊನಾ ಶಂಕೆ: ಗ್ರಾಮಸ್ಥರಲ್ಲಿ ಆತಂಕ

ಮುಂಬೈನಿಂದ ಜಿಲ್ಲೆಯ ಹುಣಸೂರು ತಾಲೂಕಿನ ಪೆಂಜಳ್ಳಿ ಗ್ರಾಮಕ್ಕೆ ಆಗಮಿಸಿದ ಗರ್ಭಿಣಿಗೆ ಕೊರೊನಾ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

Mysore
Mysore
author img

By

Published : Jun 4, 2020, 4:53 PM IST

ಮೈಸೂರು: ಮುಂಬೈನಿಂದ ತಮ್ಮ ಗ್ರಾಮಕ್ಕೆ ಬಂದಿರುವ ಗರ್ಭಿಣಿಯಲ್ಲಿ ಕೊರೊನಾ ಪಾಸಿಟಿವ್ ಇದೆ ಎಂಬ ಶಂಕೆ ಹಿನ್ನಲೆ, ಆಕೆಯನ್ನು ಕೋವಿಡ್ ಆಸ್ಪತ್ರೆಗೆ ಕರೆತರಲಾಗಿದೆ. ಅಲ್ಲದೆ, ಇಡೀ ಗ್ರಾಮವನ್ನ ಸೀಲ್ ಡೌನ್ ಮಾಡಲಾಗಿದೆ.

ಬುಧವಾರ ಮುಂಬೈನಿಂದ ಜಿಲ್ಲೆಯ ಹುಣಸೂರು ತಾಲೂಕಿನ ಪೆಂಜಳ್ಳಿ ಗ್ರಾಮಕ್ಕೆ ಆಗಮಿಸಿದ ಗರ್ಭಿಣಿ ಮಹಿಳೆಗೆ ಕೊರೊನಾ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ.

ಈ‌ ಹಿನ್ನಲೆಯಲ್ಲಿ ಹುಣಸೂರು ತಹಶೀಲ್ದಾರ್​ ಬಸವರಾಜ್ ಹಾಗೂ ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗರ್ಭಿಣಿಯನ್ನು ಮೈಸೂರಿನ ಕೋವಿಡ್​ ಆಸ್ಪತ್ರೆಗೆ ಕರೆತಂದಿದ್ದಾರೆ.

ಇದೀಗ ಆಕೆಯ ಸಂಪರ್ಕದಲ್ಲಿದ್ದ ಎಲ್ಲರಿಗೂ ಪರೀಕ್ಷೆಗೆ ಒಳಪಡಿಸಿದ್ದು, ಪೆಂಜಳ್ಳಿ ಗ್ರಾಮವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. ಹೊರಗಿನಿಂದ ಗ್ರಾಮಕ್ಕೆ ಬರುವ ಎಲ್ಲರಿಗೂ ನಿರ್ಬಂಧ ಹೇರಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.