ಮೈಸೂರು: 8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆಯೊಬ್ಬರು ನೇಣಿಗೆ ಶರಣಾದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಸಾವಿಗೆ ಶರಣಾದ ಬಿಂದು ಗರ್ಭಿಣಿಯಾಗಿದ್ದು, ಇವರನ್ನು 8 ತಿಂಗಳ ಹಿಂದೆ ಹೆಚ್.ಡಿ. ಕೋಟೆ ತಾಲೂಕಿನ ಸರಗೂರು ಸಮೀಪದ ಹಳೆಯೂರಿನ ಗುರುಸ್ವಾಮಿ ಎಂಬುವರಿಗೆ ಮದುವೆ ಮಾಡಿ ಕೊಡಲಾಗಿತ್ತು.
ಗಂಡನ ಮನೆಯವರು ವರದಕ್ಷಿಣೆ ತರಲಿಲ್ಲ ಎಂದು ನನ್ನ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಬಿಂದು ಕುಟುಂಬದವರು ಸರಗೂರು ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಸರಗೂರು ಪೊಲೀಸರು ಗಂಡ ಗುರುಸ್ವಾಮಿ, ತಂದೆ ಹಾಗೂ ತಾಯಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.