ETV Bharat / state

ಮೈಸೂರು: ಅನುಮಾನಾಸ್ಪದವಾಗಿ ಗರ್ಭಿಣಿ ಸಾವು

ಮಳವಳ್ಳಿ ತಾಲೂಕಿನ ಮಿಕ್ಕೆರೆ ಗ್ರಾಮದವರಾದ ಶಾಕುಂತಲ ಚರಣ್ ರಾಜ್ ಎಂಬುವರಿಗೆ ಕೇವಲ ಐದು ತಿಂಗಳ ಹಿಂದೆಯಷ್ಟೇ ವಿವಾಹವಾಗಿ ಗರ್ಭಿಣಿಯಾಗಿದ್ದರು. ಸದ್ಯ ಶಾಕುಂತಲ ಮೃತಪಟ್ಟಿದ್ದು, ಸಾವಿನ ಸುತ್ತ ಅನುಮಾನ ಸೃಷ್ಟಿಯಾಗಿದೆ.

author img

By

Published : Apr 24, 2020, 3:25 PM IST

Pregnant has died in Mysore
ಮೈಸೂರು: ಗರ್ಭಿಣಿ ಅನುಮಾನಾಸ್ಪದ ಸಾವು

ಮೈಸೂರು: ಗರ್ಭಿಣಿಯೋರ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಿ.ನರಸೀಪುರ ತಾಲೂಕಿನ ಹೆಗ್ಗೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚರಣ್ ರಾಜ್ ಪತ್ನಿ ಶಾಕುಂತಲ(25) ಅನುಮಾನಾಸ್ಪದವಾಗಿ ಮೃತಪಟ್ಟ ಗರ್ಭಿಣಿ. ಮಳವಳ್ಳಿ ತಾಲೂಕಿನ ಮಿಕ್ಕೆರೆ ಗ್ರಾಮದವರಾದ ಶಾಕುಂತಲ ಚರಣ್ ರಾಜ್ ಅವರೊಂದಿಗೆ ಕೇವಲ ಐದು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ವರದಕ್ಷಿಣೆ ತರುವಂತೆ ಗಂಡನ ಮನೆಯವರು ಪೀಡಿಸುತ್ತಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಪತಿ-ಪತ್ನಿ ನಡುವೆ ಗಲಾಟೆ ನಡೆಯುತ್ತಿದ್ದು, ಗುರುವಾರ ರಾತ್ರಿ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಳಿಯನೇ ಕೊಲೆ ಮಾಡಿದ್ದಾನೆಂದು ಮೃತ ಶಾಕುಂತಲ ಪೋಷಕರು ಆರೋಪಿಸಿದ್ದಾರೆ.

ಗರ್ಭಿಣಿ ಅನುಮಾನಾಸ್ಪದ ಸಾವು

ಬನ್ನೂರು ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದು, ಮಾತುಕತೆ ಮೂಲಕ ಇತ್ಯರ್ಥ ಮಾಡಿಕೊಳ್ಳುವಂತೆ ಮೃತಳ ತಂದೆಗೆ ಕಿವಿಮಾತು ಹೇಳುತ್ತಿದ್ದಾರೆಂಬ ಆರೋಪವೂ ಕೇಳಿ ಬಂದಿದೆ. ಆದ್ರೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗುವವರೆಗೂ ಮೃತದೇಹ ಪಡೆಯುವುದಿಲ್ಲವೆಂದು ಪೋಷಕರು ಪಟ್ಟು ಹಿಡಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.