ಮೈಸೂರು: ಮಂಗಳೂರು ಗಲಭೆಯನ್ನು ನಿಭಾಯಿಸಿದ ಪೊಲೀಸ್ ಕಮೀಷನರ್ ಹರ್ಷ ಅವರಿಗೆ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪ್ ಸಿಂಹ ಹಾಕಿರುವ ಪೋಸ್ಟರ್ ಈಗ ಚರ್ಚೆಗೆ ಗ್ರಾಸವಾಗಿದೆ.
ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಅಲ್ಲಿನ ಪೊಲೀಸ್ ಕಮೀಷನರ್ ಹರ್ಷ ಅವರು ನಡೆದುಕೊಂಡ ರೀತಿಗೆ ಧನ್ಯವಾದಗಳು ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಾಡಿ ಹೊಗಳಿದ್ದರು.
ಒಬ್ಬ ದಕ್ಷ ಅಧಿಕಾರಿಗೆ ಫೇಸ್ಬುಕ್ನಲ್ಲಿ ಸ್ವಂತ ಫ್ಯಾನ್ ಪೇಜ್ ಸೃಷ್ಟಿಕೊಳ್ಳುವ, ಭಾಷಣ ಬಿಗಿಯುವ, ಮಾಧ್ಯಮಗಳ ಮುಂದೆ ಪೋಸ್ ಕೊಡುವ ಅಗತ್ಯವಿಲ್ಲ. ಕಠಿಣ ನಿರ್ಧಾರ ತೆಗೆದುಕೊಳ್ಳುವ ಗುಂಡಿಗೆ ಮತ್ತು ವಿವೇಚನೆ ಇರಬೇಕು ಎಂಬುದನ್ನು ಮಂಗಳೂರಿನಲ್ಲಿ ಸಾಬೀತು ಮಾಡಿದ ನಿಜವಾದ ಸಿಂಗಂ ಕಮೀಷನರ್ ಹರ್ಷ ಅವರಿಗೆ ಧನ್ಯವಾದಗಳು ಎಂದು ಸಂಸದ ಪ್ರತಾಪ್ ಸಿಂಹ ಕಳೆದ 20 ಗಂಟೆಗಳ ಹಿಂದೆ ಹಾಕಿದ ಪೋಸ್ಟರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.