ಮೈಸೂರು: ಹೆಲಿಟೂರಿಸಂಗೆ ಹೆಲಿಪ್ಯಾಡ್ ನಿರ್ಮಾಣ ವಿಚಾರವಾಗಿ ಅರಣ್ಯ ಇಲಾಖೆಗೆ ಪತ್ರ ಬರೆದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
![Pramoda Devi Wodeyar wrote letter to forest department](https://etvbharatimages.akamaized.net/etvbharat/prod-images/kn-mys-03-rajamathe-vis-ka10003_18042021085136_1804f_1618716096_870.jpg)
ಮರ ಕಡಿಯಲು ಸಾರ್ವಜನಿಕ ಆಕ್ಷೇಪಣ ಅರ್ಜಿ ಕರೆದಿರುವುದು ಕಾನೂನು ಬಾಹಿರವಾಗಿದೆ. ಮರಗಳ ಹರಣಕ್ಕೆ ಗುರುತು ಮಾಡಿರುವ ಜಾಗ ನಮಗೆ ಸೇರಿದ್ದು. ಈ ಬಗ್ಗೆ ಹೈಕೋರ್ಟ್ನಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಆ ಜಾಗದಲ್ಲಿ ಮರ ಕಡಿಯಲು ಸಾರ್ವಜನಿಕ ಆಕ್ಷೇಪಣ ಅರ್ಜಿ ಹೇಗೆ ಕರೆದಿದ್ದೀರಾ? ಇದು ಕಾನೂನಿನ ಪ್ರಕಾರ ಅತಿಕ್ರಮಣ ಪ್ರವೇಶವಾಗಿದೆ. ಮರಗಳನ್ನು ಉಳಿಸಬೇಕು ಎಂದು ಪತ್ರದ ಮೂಲಕ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮರ ಕಡಿದು ಹೆಲಿಟೂರಿಸಂ ಮಾಡಲು ನಾವು ಬಿಡುವುದಿಲ್ಲ: ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಖಡಕ್ ವಾರ್ನಿಂಗ್