ETV Bharat / state

ಹೃದಯದ ಅರಸನ ನೆನೆದು ರಾಣಿ ಭಾವುಕ.. ಪತಿಯ ಸುದೀರ್ಘ ಕಾನೂನು ಹೋರಾಟ ಸ್ಮರಿಸಿದ ಪ್ರಮೋದಾದೇವಿ! - undefined

ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪ್ರಮೋದಾದೇವಿ ಒಡೆಯರ್ ಅವರು ತಮ್ಮ ಪತಿಯನ್ನು ನೆನೆದು ಭಾವುಕರಾದರು. ತಮ್ಮ ಜೀವನದುದ್ದಕ್ಕೂ ಸ್ವಂತಕ್ಕಾಗಿ ಎಂದೂ ಚಿಂತಿಸದೆ ಕಷ್ಟದ ಹಾದಿಯನ್ನೇ ತುಳಿದು ಬಂದರು ಎಂದು ನೆನೆದು ಕಣ್ಣೀರಿಟ್ಟರು.

ಪ್ರಮೋದಾದೇವಿ ಒಡೆಯರ್
author img

By

Published : Jun 2, 2019, 9:34 PM IST

ಮೈಸೂರು: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ತಮ್ಮ ಜೀವನದುದ್ದಕ್ಕೂ ಸ್ವಂತಕ್ಕಾಗಿ ಎಂದೂ ಚಿಂತಿಸದೆ ಕಷ್ಟದ ಹಾದಿಯನ್ನೇ ತುಳಿದು ಬಂದರು ಎಂದು ತಮ್ಮ ಪತಿಯನ್ನು ನೆನೆದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕಣ್ಣೀರಿಟ್ಟು ಭಾವುಕರಾದರು.

ನಗರದ ಜಗನ್‌ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಮೈಸೂರು ರಾಜವಂಶಸ್ಥರು ಸ್ಥಾಪಿಸಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಪತಿ ಯಾರಿಗೂ ಕೇಡು ಬಯಸಿರಲಿಲ್ಲ. ರಾಜವಂಶಕ್ಕೆ ನ್ಯಾಯಬದ್ಧವಾಗಿ ಸಿಗಬೇಕಿದ್ದ ಆಸ್ತಿಯನ್ನು ಉಳಿಸಿಕೊಳ್ಳಲು ಅವರು ನಡೆಸಿದ ಕಾನೂನು ಹೋರಾಟ ಅವರನ್ನು ಉಳಿಸಿತು. 40 ವರ್ಷಗಳ ಪತಿಯೊಂದಿಗಿನ ಒಡನಾಟ ನನ್ನನ್ನು ಗಟ್ಟಿಗೊಳಿಸಿತು. ಅವರು ಕಲಾರಾಧಕರಾಗಿದ್ದು, ಹೃದಯ ವೈಶಾಲ್ಯತೆ ಹೊಂದಿದ್ದರು. ಅವರು ಸೂಕ್ಷ್ಮ ಸ್ವಭಾವದ ವ್ಯಕ್ತಿ ಹಾಗೂ ಉತ್ತಮ ಪತಿಯಾಗಿದ್ದರು ಎಂದು ಸ್ಮರಿಸಿದರು.

ರಾಜಮನೆತನಕ್ಕೆ ಸೇರಿದ ಪಾರಂಪರಿಕ ಕಟ್ಟಡಗಳ ನವೀಕರಣ, ಸಾಮಾಜಿಕ ಕಾರ್ಯ ಇತ್ಯಾದಿಗಳನ್ನು ಕೈಗೊಳ್ಳಲು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ಸ್ಥಾಪಿಸಲಾಗಿದ್ದು, ಇದರಡಿಯಲ್ಲಿ ಈಗ ಜಗನ್‌ಮೋಹನ ಅರಮನೆ ನವೀಕರಣ, ಚಾಮರಾಜ ಆರ್ಟ್ ಗ್ಯಾಲರಿ ನವೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಗನ್‌ಹೌಸ್, ಚಾಮುಂಡೇಶ್ವರಿ ದೇವಸ್ಥಾನ, ಬೆಂಗಳೂರಿನ ಅರಮನೆಯ ಆವರಣದಲ್ಲಿರುವ ಆಂಜನೇಯ ದೇವಸ್ಥಾನ ಇತ್ಯಾದಿ ಪಾರಂಪರಿಕ ಕಟ್ಟಡಗಳ ನವೀಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಬಳಿಕ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮಾತನಾಡಿ, ಸುದೀರ್ಘವಾಗಿ ಮೈಸೂರು ಪ್ರಾಂತ್ಯವನ್ನು ಆಳಿದ ರಾಜವಂಶಸ್ಥರು ತಾವು ಗಳಿಸಿದ ಹಣ, ಆಸ್ತಿಯನ್ನು ಸ್ವಂತಕ್ಕೆ ಹಾಗೂ ಸಂಪತನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಬಳಸದೆ ಸಮಾಜದ ಅಭಿವೃದ್ಧಿಗೆ ವಿನಿಯೋಗಿಸಿದರು. ಅವರ ಜನಪರ ಅಲೋಚನೆಗಳಿಂದ ಮೈಸೂರು ಬೆಳೆದಿದೆ ಎಂದು ಸ್ಮರಿಸಿದರು.

Intro:ಪ್ರಮೋದಾದೇವಿ ಒಡೆಯರ್Body:ಪತಿಯ ಕಾನೂನು ಹೋರಾಟ ನೆನದು ಭಾವುಕರಾದ ಪ್ರಮೋದಾದೇವಿ ಒಡೆಯರ್
ಮೈಸೂರು,ಜೂ.೨-ಜೀವನದುದ್ದಕ್ಕೂ ಸ್ವಂತಕ್ಕಾಗಿ ಎಂದೂ ಚಿಂತಿಸದೇ ಪತಿ ಕಷ್ಟದ ಹಾದಿಯನ್ನೇ ತುಳಿದರು ಎಂದು ಶ್ರೀಕಂಠದತ್ತ ನರಸಿಂಹರಾಜ ಒಡೆಂiiರ್ ಅವರನ್ನು ನೆನದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಕಣ್ಣೀರಿಟ್ಟು ಭಾವುಕರಾದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಮೈಸೂರು ರಾಜವಂಶಸ್ಥರು ಸ್ಥಾಪಿಸಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು,ನನ್ನ ಪತಿ ಯಾರಿಗೂ ಕೇಡು ಬಯಸಿರಲಿಲ್ಲ.ಆದರೆ, ರಾಜವಂಶಕ್ಕೆ ನ್ಯಾಯಬದ್ಧವಾಗಿ ಸಿಗಬೇಕಿದ್ದ ಆಸ್ತಿಯನ್ನು ಉಳಿಸಿಕೊಳ್ಳಲು ಅವರು ನಡೆಸಿದ ಕಾನೂನು ಹೋರಾಟ ಅವರನ್ನು ಬಳಸಿತು.
ನಲವತ್ತು ವರ್ಷಗಳ ಪತಿಯೊಂದಿಗಿನ ಒಡನಾಟ ನನ್ನನ್ನು ಗಟ್ಟಿಗೊಳಿಸಿತು. ಅವರು ಕಲಾರಾಧಕರಾಗಿದ್ದರು. ಹೃದಯ ವೈಶಾಲತೆ ಹೊಂದಿದ್ದರು. ಅವರು ಸೂಕ್ಷ್ಮ ಸ್ವಭಾವದ ವ್ಯಕ್ತಿ ಹಾಗೂ ಅತ್ಯುತ್ತಮ ಪತಿಯಾಗಿದ್ದರು ಎಂದು  ಸ್ಮರಿಸಿದರು.  
ರಾಜಮನೆತನಕ್ಕೆ ಸೇರಿದ ಪಾರಂಪರಿಕ ಕಟ್ಟಡಗಳ ನವೀಕರಣ, ಸಾಮಾಜಿಕ ಕಾರ್ಯ ಇತ್ಯಾದಿಗಳನ್ನು ಕೈಗೊಳ್ಳಲು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ಸ್ಥಾಪಿಸಲಾಗಿದೆ. ಇದರಡಿಯಲ್ಲಿ ಈಗ ಜಗನ್ಮೋಹನ ಅರಮನೆ ನವೀಕರಣ, ಚಾಮರಾಜ ಆರ್ಟ್ ಗ್ಯಾಲರಿ ನವೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಗನ್‌ಹೌಸ್, ಚಾಮುಂಡೇಶ್ವರಿ ದೇವಸ್ಥಾನ, ಬೆಂಗಳೂರಿನ ಅರಮನೆಯ ಆವರಣದಲ್ಲಿರುವ ಆಂಜನೇಯ ದೇವಸ್ಥಾನ ಇತ್ಯಾದಿ ಪಾರಂಪರಿಕ ಕಟ್ಟಡಗಳ ನವೀಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮಾತನಾಡಿ, ಸುದೀರ್ಘವಾಗಿ ಮೈಸೂರು ಪ್ರಾಂತ್ಯವನ್ನು ಆಳಿದ ರಾಜವಂಶಸ್ಥರು ತಾವು ಗಳಿಸಿದ ಹಣ- ಆಸ್ತಿಯನ್ನು ಸ್ವಂತಕ್ಕೆ ಹಾಗೂ  ಸಂಪತನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಬಳಸದೆ ಸಮಾಜದ ಅಭಿವೃದ್ಧಿಗೆ ವಿನಿಯೋಗಿಸಿದರು.ಅವರ ಜನಪರ ಅಲೋಚನೆಗಳಿಂದ ಮೈಸೂರು ಬೆಳೆದಿದೆ ಎಂದು ಸ್ಮರಿಸಿದರು. ರಾಜಮನೆತನದಿಂದ ಸ್ಥಾಪಿಸಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ಅನ್ನು ಸದ್ಗುರು ಜಗ್ಗೀ ವಾಸುದೇವ್ ಲೋಕಾರ್ಪಣೆ ಮಾಡಿ ನಂತರ ಮಾತನಾಡಿದರು. Conclusion:ಪ್ರಮೋದಾದೇವಿ ಒಡೆಯರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.