ಮೈಸೂರು: ರಾಜ್ಯದಲ್ಲಿ ಗುಪ್ತಚರ ಇಲಾಖೆ ನಿರ್ಲಕ್ಷ್ಯ ಮಾಡಿದ್ದು , ಕ್ರಿಮಿನಲ್ ಗಳ ಮೇಲೆ ಕಣ್ಣಿಟ್ಟಿಲ್ಲ. ಹರ್ಷನ ಮೇಲೆ ನಾಲ್ಕು ವರ್ಷದಿಂದ ಕಣ್ಣಿಟ್ಟಿದ್ದರೂ, ಘಟನೆಯನ್ನ ತಡೆಯುವಲ್ಲಿ ವಿಫಲವಾಗಿದೆ ಎಂದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಈ ಘಟನೆಯ ನಂತರ ಇಸ್ಲಾಮಿಕ್ ಶಕ್ತಿಗಳು ಬಾಲ ಬಿಚ್ಚಿದರೆ ಸುಮ್ಮನೀರಲು ಸಾಧ್ಯವಿಲ್ಲ. ಘಟನೆಯನ್ನ ನೋಡಿದರೆ ಒಂದು ತರಬೇತಿ ಹೊಂದಿರುವ ಗುಂಪಿನ ಷ್ಯಡ್ಯಂತ್ರ ಇದೆ ಎನಿಸುತ್ತಿದೆ. ಇದರ ಹಿಂದೆ ಸಂಘಗಳು ಇವೆ. ಎಸ್.ಡಿ.ಪಿ.ಐ ಹಾಗೂ ಪಿ.ಎಫ್. ಐ ಸಂಘಟನೆಗಳನ್ನ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಮಚ್ಚು ಹಿಡಿದುಕೊಂಡು ಹೊಡೆದಾಡುತ್ತೇವೆ ಎನ್ನುವುದಕ್ಕೆ ಇದು ಅಫ್ಘಾನಿಸ್ತಾನವಲ್ಲ. ಈ ದೇಶದ ಅನ್ನ ತಿನ್ನುವ ನೀವು ಸಂವಿಧಾನಕ್ಕೆ ಬದ್ದರಾಗಿರಬೇಕು. ದೇಶದಲ್ಲಿ ಸಂವಿಧಾನವಿದೆ, ನ್ಯಾಯಾಲಯವಿದೆ ನಿಮಗೆ ತೊಂದರೆಯಾದರೆ ನ್ಯಾಯಾಲಯಕ್ಕೆ ಹೋಗಿ, ಅದನ್ನ ಬಿಟ್ಟು ಲಾಂಗ್ ಮಚ್ಚು ಹಿಡಿದುಕೊಂಡು ಬಂದರೆ ಸರಿಯಲ್ಲ ಎಂದು ಎಚ್ಚರಿಕೆ ಮಾತುಗಳನ್ನು ಆಡಿದ್ದಾರೆ.
ಇದನ್ನೂ ಓದಿ: ಅಭಿಮತ: ರಷ್ಯಾದ ಸೈನ್ಯ ಶಕ್ತಿಯೆದುರು ನಿಲ್ಲುವುದೇ ಉಕ್ರೇನ್?
ಹರ್ಷ ಕೊಲೆ ಕೇಸ್ನಲ್ಲಿ ಬಂಧಿತರಾಗಿರುವವರು ಕ್ರಿಮಿನಲ್ಗಳು. ಅವರನ್ನ ಎನ್ಕೌಂಟರ್ ಮಾಡಿಯೇ ಉತ್ತರ ಕೊಡಬೇಕು. ಇಲ್ಲದಿದ್ದರೇ, ವಿಶೇಷ ನ್ಯಾಯಾಲಯ ರಚನೆ ಮಾಡಿ ತುರ್ತಾಗಿ ಈ ಪ್ರಕರಣವನ್ನ ಮುಗಿಸಿ ಆರೋಪಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.