ಮೈಸೂರು: ಒಂದೆಡೆ ಕೊರೊನಾ ಹಾವಳಿ, ಮತ್ತೊಂದೆಡೆ ವಿದ್ಯುತ್ ಇಲಾಖೆಯ ಕಣ್ಣಾಮುಚ್ಚಾಲೆ ಆಟದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ವಿದ್ಯುತ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಂಜನಗೂಡು ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಹಳ್ಳಿದಿಡ್ಡಿ ಗ್ರಾಮದಲ್ಲಿ ಕಬ್ಬು ನೆಲಕಚ್ಚಿದೆ. ಕಳೆದ 12 ದಿನಗಳ ಹಿಂದೆ ಕೆಟ್ಟು ನಿಂತ ಟ್ರಾನ್ಸ್ಫಾರ್ಮರ್ನಿಂದ ವಿದ್ಯುತ್ ಇಲ್ಲದೆ ಬೆಳೆಗಳಿಗೆ ನೀರು ಒದಗಿಸಲಾಗಿದೆ ಗ್ರಾಮಸ್ಥರು ಪರದಾಡುವಂತಾಗಿದೆ. ನೀರಿಲ್ಲದೆ ಬೆಳೆ ಒಣಗಿ ಗೆದ್ದಲು ಹಿಡಿಯುತ್ತಿದ್ದು, ಹತ್ತಾರು ರೈತರು ಬೆಳೆದ ಬೆಳೆ ನಾಶವಾಗಿದೆ.
ಟ್ರಾನ್ಸ್ಫಾರ್ಮರ್ ಸರಿಪಡಿಸುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲವಂತೆ. ಹೀಗಾಗಿ ಸಾಮೂಹಿಕ ಆತ್ಮಹತ್ಯೆಗೆ ರೈತರು ನಿರ್ಧರಿಸಿದ್ದಾರೆ. ಅನಾಹುತವಾದಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಹೈರಾಣಾದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.