ಮೈಸೂರು: ಯುವಕನೋರ್ವನಿಂದ ಹಲ್ಲೆಗೊಳಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್ ಸೇಠ್ ಅವರನ್ನು ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್. ವಿಶ್ವನಾಥ್ ಹಾಗೂ ಮಾಜಿ ಸಂಸದ ಆರ್. ಧ್ರುವನಾರಾಯಣ ಭೇಟಿ ಮಾಡಿದ್ದು, ಆರೋಗ್ಯ ವಿಚಾರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್. ವಿಶ್ವನಾಥ್, ತನ್ವೀರ್ ಸೇಠ್ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಅವರ ತಂದೆ ಅಜೀಜ್ ಸೇಠ್ ಅವರಂತೆ ತನ್ವೀರ್ ಸೇಠ್ ಕೂಡ ಉತ್ತಮ ವ್ಯಕ್ತಿಯಾಗಿದ್ದು, ಇಂತಹ ಘಟನೆ ನಡೆಯಬಾರದಿತ್ತು ಎಂದರು.
ಇನ್ನು ಮಾಜಿ ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ತನ್ವೀರ್ ಸೇಠ್ ಅವರ ಆರೋಗ್ಯ ನಿನ್ನೆಗಿಂತ ಇಂದು ಮತ್ತಷ್ಟು ಚೇತರಿಕೆಯಾಗಿದೆ ಎಂದು ಹೇಳಿದರು.
ಜಿ.ಟಿ.ಡಿ ಭೇಟಿ: ಹುಣಸೂರಿನಲ್ಲಿ ನಡೆಯುತ್ತಿರುವ ಉಪಚುನಾವಣೆಗೆ ಸಹಾಯ ಮಾಡುವಂತೆ ಜಿ.ಟಿ. ದೇವೇಗೌಡ ಅವರ ಮನೆಗೆ ತೆರಳಿ ಅವರನ್ನು ಅವರ ಪುತ್ರ, ಪತ್ನಿ ಅವರ ಬೆಂಬಲ ಕೇಳಿದ್ದೇವೆಂದು ತಿಳಿಸಿದರು.