ETV Bharat / state

ನಿಮ್ಮ ರಕ್ಷಣೆ ನಮ್ಮ ಹೊಣೆ, ನೀವು ಮನೆಯಲ್ಲಿರಿ.. ನಂಜನಗೂಡಿಗೆ ಆತ್ಮಸ್ಥೈರ್ಯ ತುಂಬಿದ ಖಾಕಿ ಪಥಸಂಚಲನ! - Mysore Jubileeant Factory

ಸಾರ್ವಜನಿಕರು ಮನೆಯಲ್ಲಿಯೇ ಇರಿ. ನಿಮ್ಮನ್ನು ಸುರಕ್ಷಿತವಾಗಿ ಕಾಪಾಡಲು ನಮಗೆ ಅವಕಾಶ ನೀಡಿ ಎಂದು ಸಂದೇಶಗಳನ್ನು ಸಾರುತ್ತಾ ಪೊಲೀಸರು ಪಥಸಂಚಲನ ಮಾಡಿದರು.

Police spreading awareness in Nanjangud through march
ಪಥ ಸಂಚಲನದ ಮೂಲಕ ನಂಜನಗೂಡು ಜನರಿಗೆ ಅಭಯ ನೀಡಿದ ಪೊಲೀಸರು
author img

By

Published : Apr 10, 2020, 11:24 AM IST

ಮೈಸೂರು : ನಂಜನಗೂಡು ಡಿವೈಎಸ್​ಪಿ ನೇತೃತ್ವದಲ್ಲಿ ಪಟ್ಟಣದ ಸುತ್ತ ಪೊಲೀಸರು ಪಥಸಂಚಲನ ನಡೆಸಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ನಮಗೆ ಸಹಕಾರ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.

ಪಥ ಸಂಚಲನದ ಮೂಲಕ ನಂಜನಗೂಡು ಜನರಿಗೆ ಅಭಯ ನೀಡಿದ ಪೊಲೀಸರು..

ಜ್ಯುಬಿಲಿಯಂಟ್ ಕಾರ್ಖಾನೆಯ 26 ಮಂದಿ ನೌಕರರಿಗೆ ಕೊರೊನಾ ಸೋಂಕು ತಗಲಿರುವುದರಿಂದ ನಂಜನಗೂಡು ಪಟ್ಟಣದಲ್ಲಿ ಆತಂಕ ಆವರಿಸಿದೆ. ಎತ್ತ ನೋಡಿದ್ರೂ ಮೌನದ ಗಾಳಿ ಬೀಸುತ್ತದೆ. ಈ ಹಿನ್ನಲೆ ಸಾರ್ವಜನಿಕರು ಮನೆಯಲ್ಲಿಯೇ ಇರಿ. ನಿಮ್ಮನ್ನು ಸುರಕ್ಷಿತವಾಗಿ ಕಾಪಾಡಲು ನಮಗೆ ಅವಕಾಶ ನೀಡಿ ಎಂದು ಸಂದೇಶಗಳನ್ನು ಸಾರುತ್ತಾ ಪೊಲೀಸರು ಪಥಸಂಚಲನ ಮಾಡಿದರು.

ರಾಜ್ಯದ ರೆಡ್ ಜೋನ್ ವಲಯದಲ್ಲಿರುವ ಐದು ಜಿಲ್ಲೆಗಳ ಪಟ್ಟಿಯಲ್ಲಿ ಮೈಸೂರು ಕೂಡ ಒಂದಾಗಿದೆ. ಅಲ್ಲದೇ ನಂಜನಗೂಡು ತಾಲೂಕು ಹಾಟ್‌ಸ್ಪಾಟ್ ಆಗಿರುವುದರಿಂದ ಸಾರ್ವಜನಿಕರು ಮನೆಯಿಂದ ಆಚೆ ಬರಲು ಕೂಡ ಭಯ ಪಡುವಂತಾಗಿದೆ. ಹೀಗಾಗಿ ಜನರಲ್ಲಿ ಆತಂಕ, ಭಯ ದೂರ ಮಾಡಿ ಜಾಗೃತಿ ಮೂಡಿಸಲು ಪೊಲೀಸರಿಂದ ಪಥ ಸಂಚಲನ ಕೈಗೊಳ್ಳಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.