ETV Bharat / state

ಕೋವಿಡ್-19 ನಕಲಿ ಪಾಸ್ ಹೊಂದಿದ್ದ ವ್ಯಕ್ತಿ ಪೊಲೀಸರ ವಶಕ್ಕೆ

ನಕಲಿ ಕೋವಿಡ್-19 ಪಾಸ್ ಹೊಂದಿದ್ದ ವ್ಯಕ್ತಿಯನ್ನು ನರಸಿಂಹರಾಜ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿರ್ಮಲ್ ಕುಮಾರ್ ಸಿಂಘ್ವಿ ಬಂಧಿತ ಆರೋಪಿ.

Police seized  car
ಕೋವಿಡ್-19 ಡೂಪ್ಲಿಕೇಟ್ ಪಾಸ್ ಹೊಂದಿದ್ದ ಕಾರು ಪೋಲಿಸರ ವಶ
author img

By

Published : Apr 29, 2020, 10:10 PM IST

ಮೈಸೂರು: ತಮಿಳುನಾಡಿನಲ್ಲಿರುವ ಅಕ್ಕನ‌ ಮನೆಗೆ ಹೋಗಲು ನಕಲಿ ಕೋವಿಡ್-19 ಪಾಸ್ ಹೊಂದಿದ್ದ ವ್ಯಕ್ತಿಯನ್ನು ನರಸಿಂಹರಾಜ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Police seized  car
ಕೋವಿಡ್-19 ನಕಲಿ ಪಾಸ್ ಹೊಂದಿದ್ದ ವ್ಯಕ್ತಿಯ ಬಂಧನ
ಏಪ್ರಿಲ್ 29ರ ಸಂಜೆ ನರಸಿಂಹರಾಜ ಠಾಣೆ ಪೊಲೀಸರು ನಗರದ ಫೌಂಟೇನ್ ವೃತ್ತದ ಬಳಿ ವಾಹನ ತಪಾಸಣೆ ಮಾಡುವಾಗ ಬೆಂಗಳೂರು ನೋಂದಣಿ ಹೊಂದಿರುವ ಕಾರನ್ನು ತಡೆದು ಚೆಕ್ ಮಾಡಿದ್ದಾರೆ. ಆಗ ಕಾರಿನಲ್ಲಿ ಕರ್ನಾಟಕ ಸರ್ಕಾರದ ಕೋವಿಡ್-19 ವಾಹನ ಪಾಸ್ ದೊರೆತಿದೆ. ಬಳಿಕ ಕಾರ್​ನಲ್ಲಿದ್ದ ನಿರ್ಮಲ್ ಕುಮಾರ್ ಸಿಂಘ್ವಿ ಎಂಬ ವ್ಯಕ್ತಿಯನ್ನು ವಿಚಾರಸಿದಾಗ, ನಾನು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಅಕ್ಕನ ಮನೆಗೆ ಹೋಗಬೇಕಾಗಿತ್ತು. ನನ್ನ ಸ್ನೇಹಿತ ವಾಟ್ಸ್​ಆ್ಯಪ್ ಮುಖಾಂತರ ಕಳುಹಿಸಿದ ಪಾಸ್​​ಅನ್ನು ಡೌನ್​ಲೋಡ್ ಮಾಡಿ ಕಲರ್ ಪ್ರಿಂಟ್ ಹಾಕಿಸಿ ಕಾರಿನಲ್ಲಿ ಹಾಕಿಕೊಂಡು ಓಡಾಟ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ನರಸಿಂಹರಾಜ ಠಾಣೆ ಪೋಲಿಸರು ಕಾರು ಹಾಗೂ ಮೊಬೈಲ್​ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.