ETV Bharat / state

ತಪ್ಪಾಯ್ತು ಬಿಟ್ಟು ಬಿಡಿ ಸರ್.. ಸೀಜ್ ಆದ ವಾಹನ ಮಾಲೀಕರಿಂದ ಪೊಲೀಸರಿಗೆ ದುಂಬಾಲು

author img

By

Published : May 10, 2021, 1:24 PM IST

ಲಾಕ್‌ಡೌನ್​ನ ಮೊದಲ ದಿನವೇ ಸಾಂಸ್ಕೃತಿಕ ನಗರಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಪಾಠ ಕಳಿಸಿದ್ದಾರೆ. ನಗರ ಮೂಲೆ ಮೂಲೆಗಳಲ್ಲಿ ಕಣ್ಣಿಟ್ಟಿರುವ ಖಾಕಿ ಪಡೆ, ಈಗಾಗಲೇ ನೂರಾರು ವಾಹನಗಳನ್ನು ವಶಪಡಿಸಿಕೊಂಡಿದೆ..

Police seized vehicles in Mysuru
ನಿಯಮ ಉಲ್ಲಂಘಿಸಿದ ವಾಹನ ಸೀಜ್

ಮೈಸೂರು : ಕರ್ಫ್ಯೂ​ ಅವಧಿಯಲ್ಲಿ ಮಾರ್ಗಸೂಚಿ ಉಲ್ಲಂಘಿಸಿ ಓಡಾಡುತ್ತಿದ್ದ 145 ಬೈಕ್, ಒಂದು ಆಟೋ, 12 ಕಾರುಗಳು ಸೇರಿದಂತೆ ಒಟ್ಟು 158 ವಾಹನಗಳನ್ನು ಮೇ 9ರಂದು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿ ಪಾಲಿಸದ ಸಂಬಂಧ ನಗರದಲ್ಲಿ ಒಂದೇ ದಿನ 147 ಪ್ರಕರಣಗಳು ದಾಖಲಾಗಿದ್ದು, ಒಟ್ಟು 24,150 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ದೇವರಾಜ ಠಾಣೆಯಲ್ಲಿ 7 ಪ್ರಕರಣ ದಾಖಲು : ದೇವರಾಜ ಠಾಣಾ ವ್ಯಾಪ್ತಿಯ ಹಳೆ ಸಂತೆಪೇಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ಮಾಡುತ್ತಿದ್ದ ಶಿವಣ್ಣ ಸ್ಟೋರ್ ದಿನಸಿ ಅಂಗಡಿ ಮಾಲೀಕ, ಮಹದೇವ ಭಂಡಾರ್ ದಿನಸಿ ಅಂಗಡಿ ಮಾಲೀಕ, ಎಂ.ಎನ್ ಎನ್ ಟ್ರೇಡರ್ಸ್ ದಿನಸಿ ಅಂಗಡಿ ಮಾಲೀಕ, ಶ್ರೀ ಸರಸ್ವತಿ ಭಂಡಾರ್ ದಿನಸಿ ಅಂಗಡಿ ಮಾಲೀಕ, ಶ್ರೀ ವೆಂಕಟೇಶ್ವರ ಟ್ರೇಡರ್ಸ್ ಅಡುಗೆ ಎಣ್ಣೆ ಅಂಗಡಿ ಮಾಲೀಕ, ಸೂರ್ಯದರ್ಶನಿ ಹೋಟೆಲ್ ಮಾಲೀಕ, ರೂಪ್ ಎಂಟರ್​​ಪ್ರೈಸಸ್ ದಿನಸಿ ಅಂಗಡಿ ಮಾಲೀಕ‌ರ ವಿರುದ್ದ ಪ್ರಕರಣ ದಾಖಲಾಗಿದೆ.

ಹೇಗಿದೆ ಮೈಸೂರಿನಲ್ಲಿ ಲಾಕ್​ ಡೌನ್​

ಸಾಡೆ ರಸ್ತೆಯ ಮೀನ ಬಜಾರ್​ನಲ್ಲಿರುವ ದಿಲ್ಲಿ ಬಜಾರ್ ಬಟ್ಟೆ ಮಾಲೀಕ ಮತ್ತು ಬಟ್ಟೆ ಅಂಗಡಿ ತೆರೆಯಲು ಯಾವುದೇ ಅನುಮತಿ ಇಲ್ಲದಿದ್ದರೂ ಸಹ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆ ಅಂಗಡಿ ಮಾಲೀಕ ನಸೀಮ್ ವಿರುದ್ಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದಯಗಿರಿಯ ಮಲ್ಲಿಕಾರ್ಜುನ ಶಾಲೆ ಸಮೀಪವಿರುವ ಹಲಾಲ್ ಚಿಕನ್ ಸೆಂಟರ್ ಮಾಲೀಕ ಲಾಯಿಕ್ ಪಾಷ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ವ್ಯಾಪಾರ ಮಾಡಿದ್ದಕ್ಕೆ ಉದಯಗಿರಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಟ್ಟು ಬಿಡುವಂತೆ ಬೇಡಿಕೊಂಡ ವಾಹನ ಸವಾರರು

ಇಂದು ಲಾಕ್​ ಡೌನ್ ಜಾರಿಯಾಗಿರುವುದರಿಂದ ಮೈಸೂರಿನ ವಿವಿದೆಡೆ ವಾಹನಗಳಲ್ಲಿ ಅಡ್ಡಾಡುತ್ತಿರುವ ಜನತೆಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಡಿಸಿಪಿ ಪ್ರಕಾಶ್ ಗೌಡ ನೇತೃತ್ವದಲ್ಲಿ ರಾಮಸ್ವಾಮಿ ವೃತ್ತದಲ್ಲಿ ತಪಾಸಣೆ ನಡೆಸಿದ್ದಾರೆ.

ಬೈಕ್ ಬಿಡುವಂತೆ ಪರಿ ಪರಿಯಾಗಿ ಬೇಡಿದ ಸವಾರರು : ಲಾಕ್​ ಡೌನ್​ ವೇಳೆ ಅನಗತ್ಯವಾಗಿ ಓಡಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಬೈಕ್ ಸವಾರರು ತಮ್ಮ ವಾಹನ ಬಿಡುವಂತೆ ಪೊಲೀಸರೊಂದಿಗೆ ಪರಿ ಪರಿಯಾಗಿ ಬೇಡುತ್ತಿದ್ದ ದೃಶ್ಯ ದೇವರಾಜ ಮಾರುಕಟ್ಟೆ ಮುಂಭಾಗ ಹಾಗೂ ಹಾರ್ಡ್ವಿಕ್ ವೃತ್ತದ ಬಳಿ ಕಂಡುಬಂತು.

ಬಿಟ್ಟು ಬಿಡುವಂತೆ ಬೇಡಿಕೊಂಡ ವಾಹನ ಸವಾರರು

ಗಾಯಿತ್ರಿಪುರಂ ನಿವಾಸಿಯೊಬ್ಬ ಬಂಡಿಪಾಳ್ಯಕ್ಕೆ ಹೋಗುತ್ತಿದ್ದ ವೇಳೆ ಹಾರ್ಡ್ವಿಕ್ ವೃತ್ತದ ಬಳಿ ಪೊಲೀಸರ ಕೈಗೆ ತಗಲಾಕಿಕೊಂಡರೆ, ಬೋಗಾದಿ ನಿವಾಸಿಯೊಬ್ಬ ದಿನಸಿ ತರಲು ಮಾರುಕಟ್ಟೆಗೆ ಬಂದು ಖಾಕಿ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಸವಾರರ ಮನವಿಗೆ ಕೇರ್ ಮಾಡದ ಪೊಲೀಸರು ಮೇ 24 ರಂದು ಠಾಣೆಗೆ ಬಂದು ಬೈಕ್ ಬಿಡಿಸಿಕೊಂಡು ಹೋಗುವಂತೆ ವಾರ್ನ್ ಮಾಡಿದ್ದಾರೆ.

ನಗರದ ಎಲ್ಲಾ ರಸ್ತೆಗಳು ಬಂದ್ : ಲಾಕ್​ ಡೌನ್ ಹಿನ್ನೆಲೆ ನಗರದ ಪ್ರತಿ ಬಡಾವಣೆಯ ರಸ್ತೆ ಹಾಗೂ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಮುಚ್ಚಲಾಗಿದೆ. ಅನಗತ್ಯವಾಗಿ ಓಡಾಡುವ ವಾಹನಗಳನ್ನು ಪರಿಶೀಲನೆ ನಡೆಸಿ ಸೀಜ್ ಮಾಡಲಾಗುತ್ತಿದೆ. ವಾಹನ ಸೀಜ್ ಮಾಡುವುದಕ್ಕೂ ಮುನ್ನ ಯಾವ ಉದ್ದೇಶಕ್ಕಾಗಿ ಹೊರಗಡೆ ಬಂದಿದ್ದಾರೆ ಎಂದು ಸಂಪೂರ್ಣ ಪರಿಶೀಲನೆ ಮಾಡಿ, ಅದನ್ನು ವಿಡಿಯೋ ರೆಕಾರ್ಡ್ ಮಾಡಿ ಸರಿಯಾದ ಕಾರಣ ಅಥವಾ ಪಾಸ್ ನೀಡದಿದ್ದರೆ ಮಾತ್ರ ವಶಕ್ಕೆ ಪಡೆಯಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.