ETV Bharat / state

ಬೆಂಕಿ ಅವಘಡಕ್ಕೆ ಇಡೀ ಕುಟುಂಬವೇ ಬಲಿ... ಮಗ, ಪತಿ ಅಗಲಿಕೆ ಬೆನ್ನಲ್ಲೇ ಕೊನೆಯುಸಿರೆಳೆದ ಪತ್ನಿ - ಬೆಂಕಿ ತಗುಲಿ ಪೇದೆ ಸೇರಿದಂತೆ ಮೂವರನ್ನು ಆಸ್ಪತ್ರೆಗೆ

ಮೈಸೂರು ಜಿಲ್ಲೆಯಲ್ಲಿ ಪೇದೆ ಸೇರಿದಂತೆ ಆತನ ಕುಟುಂಬದ ಸದಸ್ಯರಿಗೆ ಬೆಂಕಿ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಪೇದೆ ಹಾಗೂ ಆತನ ಮಗ ಚಿಕಿತ್ಸೆ ಫಲಿಸದೇ ಕಳೆದ ಶುಕ್ರವಾರ ಸಾವನ್ನಪ್ಪಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಪೇದೆಯ ಪತ್ನಿ ಕೂಡ ಕೊನೆಯುಸಿರೆಳೆದಿದ್ದಾರೆ.

ಹೆಂಡತಿ ಸಾವು
ಹೆಂಡತಿ ಸಾವು
author img

By

Published : Feb 19, 2020, 8:39 PM IST

ಮೈಸೂರು: ನೀರಿನ ಒಲೆ ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಪೇದೆ ಸೇರಿದಂತೆ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಶುಕ್ರವಾರ ಪೇದೆ ಹಾಗೂ ಮಗ ಸಾವನ್ನಪ್ಪಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಪೇದೆಯ ಪತ್ನಿ ಸಹ ಕೊನೆಯುಸಿರೆಳೆದಿದ್ದಾರೆ.

ಜಿಲ್ಲೆಯ ಕೆ.ಆರ್. ನಗರ ಪಟ್ಟಣದ ಈಶ್ವರ ಬಡಾವಣೆಯಲ್ಲಿ ವಾಸವಿದ್ದ ಪೊಲೀಸ್ ಪೇದೆ ಕುಟುಂಬ, ಮನೆಯಲ್ಲಿ ನೀರಿನ ಒಲೆಗೆ ಬೆಂಕಿ ಹಾಕುವಾಗ ಪೇದೆಯ ಹೆಂಡತಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು. ಇವರನ್ನು ರಕ್ಷಿಸಲು ಹೋಗಿದ್ದ ಪೇದೆ ರೇಣುಕಸ್ವಾಮಿ ಹಾಗೂ ಮಗ ತೇಜಸ್​ಗೂ ಬೆಂಕಿ ತಗುಲಿದ ಪರಿಣಾಮ ಎಲ್ಲರನ್ನೂ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂವರಲ್ಲಿ ಪೋಲಿಸ್ ಪೇದೆ ಹಾಗೂ ಮಗ ತೇಜಸ್ ಕಳೆದ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಇನ್ನು, ಪೊಲೀಸ್ ಪೇದೆಯ ಹೆಂಡತಿ ಪುಷ್ಪಲತಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಸಾವನ್ನಪ್ಪಿದ್ದಾರೆ. ಒಟ್ಟಾರೆ ಇಡೀ ಪೊಲೀಸ್ ಪೇದೆಯ ಕುಟುಂಬವೇ ಸಾವನ್ನಪ್ಪಿದ್ದು, ಕುಟುಂಬದಲ್ಲಿ ಒಬ್ಬಳು ಹೆಣ್ಣು ಮಗಳು ಮಾತ್ರ ಬದುಕುಳಿದಿದ್ದಾಳೆ. ಕೆ.ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.