ETV Bharat / state

ಕೊಳೆತ ಟೊಮ್ಯಾಟೊ ಎಸೆದಿದ್ದಕ್ಕೆ ಗೃಹಿಣಿ ಕೊಲೆ ಕೇಸ್​ ​: ತಂದೆ-ಮಗ ಅರೆಸ್ಟ್ - ಮೈಸೂರು ಗೃಹಿಣಿ ಕೊಲೆ ಪ್ರಕರಣ

ಘಟನೆಯಲ್ಲಿ ಸುನೀತಾ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಆಕೆಯ ತಾಯಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇಷ್ಟೆಲ್ಲ ಆದ್ಮೇಲೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು..

Police arrested Mysore housewife murder case accused
ಮೈಸೂರು ಗೃಹಿಣಿ ಕೊಲೆ ಕೇಸ್​ನ ಆರೋಪಿಗಳ ಬಂಧನ
author img

By

Published : Mar 12, 2022, 9:15 AM IST

ಮೈಸೂರು : ಕೊಳೆತ ಟೊಮ್ಯಾಟೊ ಎಸೆದ ವಿಚಾರವಾಗಿ ಮಹಿಳೆಯನ್ನು ಕೊಲೆ ಮಾಡಿದ್ದ ತಂದೆ-ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಯಾತಮಾರನಹಳ್ಳಿ ನಿವಾಸಿಯಾದ ಶಿವರಾಜ್(57) ಹಾಗೂ ಗಿರೀಶ್(29) ಬಂಧಿತ ಆರೋಪಿಗಳು.‌

ಫೆಬ್ರವರಿ 2ರಂದು ಕೆಎನ್‌ಪುರದಲ್ಲಿ ಭಾರತಿ ಎಂಬುವರು ತಮ್ಮ ಮನೆ ಬಳಿ ನಡೆಸುತ್ತಿದ್ದ ಅಂಗಡಿಯಿಂದ ಕೊಳೆತ ಟೊಮ್ಯಾಟೊಗಳನ್ನು ಬೀದಿಗೆ ಬಿಸಾಡಿದ್ದರು.

ಇದೇ ವಿಚಾರವಾಗಿ ಎದುರು ಮನೆಯಲ್ಲಿದ್ದ ಶಿವರಾಜು ಮತ್ತು ಅವರ ಮಗ ಗಲಾಟೆ ಮಾಡಿದ್ದರು. ಇಬ್ಬರ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿ ಗಿರೀಶ್​​ ಮಚ್ಚಿನಿಂದ ಸುನೀತಾ ಹಾಗೂ ಆಕೆಯ ತಾಯಿ ಭಾರತಿ ಮೇಲೆ ಹಲ್ಲೆ ನಡೆಸಿದ್ದನು.

ಘಟನೆಯಲ್ಲಿ ಸುನೀತಾ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಆಕೆಯ ತಾಯಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇಷ್ಟೆಲ್ಲ ಆದ್ಮೇಲೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು.

ಈ ಸಂಬಂಧ ಉದಯಗಿರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ತಮಿಳುನಾಡಿನಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ: ಚೆಲುವೆ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ ಪತಿ ಬಂಧನ.. ಪ್ರೀತಿಗಾಗಿ ಹೆತ್ತವರನ್ನ ಬಿಟ್ಟ ಬಂದವಳಿಗೆ ಪ್ರಾಣ ತೆಗೆಯಲೆತ್ನಿಸಿದ ಕಿರಾತಕ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.