ಮೈಸೂರು: ನಗರದ ರಂಗಾಯಣದಲ್ಲಿ ನಾಳೆಯಿಂದ ನಡೆಯಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಿದ್ಧತೆಗಳು ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಈ ರಾಷ್ಟ್ರೀಯ ನಾಟಕೋತ್ಸವದ ಬಹುರೂಪಿಗೆ ಮುಖ್ಯ ವೇದಿಕೆಯ ಬೋರ್ಡ್ ಸೇರಿದಂತೆ ರಂಗಾಯಣದ ಒಳಗಿನ ಎಲ್ಲಾ ಪರಿಕರಗಳನ್ನು ಪ್ಲಾಸ್ಟಿಕ್ ಮುಕ್ತವಾಗಿ ನಿರ್ಮಿಸಲಾಗಿದೆ.
ಇನ್ನು ಕಲಾವಿದ ರಂಗನಾಥ್ ಮಾತನಾಡಿದ್ದು, ಈ ಬಾರಿ ಗಾಂಧಿಯವರ ಪರಿಕಲ್ಪನೆಯ ಹಾಗೂ ಸ್ವಚ್ಛ ಭಾರತ್ ಪರಿಕಲ್ಪನೆಯ ದೃಷ್ಟಿಯಿಂದ ಬಹುರೂಪಿಯನ್ನು ನಡೆಸಲಾಗುತ್ತಿದ್ದು, ಆದ್ದರಿಂದ ಎಲ್ಲೂ ಪ್ಲಾಸ್ಟಿಕ್ ಬಳಸದಂತೆ ಬಿದಿರು ಚಾಪೆ ಹಾಗೂ ಇತರೆ ಪ್ಲಾಸ್ಟಿಕ್ ಮುಕ್ತ ವಸ್ತುಗಳನ್ನು ಬಳಸಿಕೊಂಡು ನಿರ್ಮಾಣ ಮಾಡಿದ್ದೇವೆ. ಈ ರೀತಿ ನಿರ್ಮಾಣ ಸ್ವಲ್ಪ ಕಷ್ಟವಾದರೂ ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ.
ಅಲ್ಲದೇ, ಪ್ರತಿವರ್ಷದಂತೆ ನಾವು ಈ ವರ್ಷವೂ ವಿನೂತನವಾಗಿ ಪ್ರಯತ್ನಿಸುತ್ತಿರುವುದು ಈ ದೇಶದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವುದಕ್ಕಾಗಿ ಎಂದಿದ್ದಾರೆ.