ಮೈಸೂರು: ಕೋವಿಡ್ನಿಂದ ಗುಣಮುಖರಾದ ನಗರಪಾಲಿಕೆ ಸಿಬ್ಬಂದಿಯೊಬ್ಬರು ಪ್ಲಾಸ್ಮಾ ದಾನ ಮಾಡುವ ಮೂಲಕ ಕೆ.ಆರ್. ಆಸ್ಪತ್ರೆಯಲ್ಲಿ ಪ್ಲಾಸ್ಮಾ ಕೇಂದ್ರದ ಉದ್ಘಾಟನೆ ಮಾಡಲಾಯಿತು.
ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಹಾಗಾಗಿ ಅವರ ಪ್ಲಾಸ್ಮಾವನ್ನು ಸೋಂಕಿಗೆ ಒಳಗಾದವರಿಗೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ ಕೆ.ಆರ್. ಆಸ್ಪತ್ರೆಯಲಿ ಪ್ಲಾಸ್ಮಾ ದಾನ ಕೇಂದ್ರ ತೆರೆಯಲಾಗಿದೆ.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಕೆ.ಆರ್. ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವತಿಯಿಂದ ಆರಂಭವಾಗಿರುನ ಪ್ಲಾಸ್ಮಾ ಕೇಂದ್ರಕ್ಕೆ ಇಂದು ಸೋಂಕಿನಿಂದ ಗುಣಮುಖನಾದ ನಗರಪಾಲಿಕೆ ಸಿಬ್ಬಂದಿಯೊಬ್ಬರು ಪ್ಲಾಸ್ಮಾ ದಾನ ಮಾಡಿದ್ದು, ಆ ಮೂಲಕ ಪ್ಲಾಸ್ಮಾ ಕೇಂದ್ರವನ್ನು ಉದ್ಘಾಟನೆ ಮಾಡಿದ್ದಾರೆ