ETV Bharat / state

ಮೈಸೂರು: ಮನೆಗೆ ನುಗ್ಗಿ ತನ್ನ ತಂದೆ, ಮಹಿಳೆಯನ್ನು ಕೊಂದ ಮಗ - double murder in mysuru

ಮನೆಗೆ ನುಗ್ಗಿ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ಹೊರವಲಯದಲ್ಲಿರುವ ಶ್ರೀನಗರದಲ್ಲಿ ನಡೆದಿದೆ.

person-murdered-his-father-and-a-woman-in-mysuru
ಮೈಸೂರು: ಮನೆಗೆ ನುಗ್ಗಿ ತನ್ನ ತಂದೆ, ಮಹಿಳೆಯನ್ನು ಕೊಂದ ಮಗ
author img

By

Published : Oct 22, 2021, 9:38 AM IST

ಮೈಸೂರು: ಮಗನೇ ತನ್ನ ತಂದೆ ಹಾಗೂ ಆತನ ಜೊತೆಗಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ಹೊರವಲಯದಲ್ಲಿರುವ ಶ್ರೀನಗರದಲ್ಲಿ ನಡೆದಿದೆ.

ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು. ಕೆ.ಜಿ.ಕೊಪ್ಪಲು ನಿವಾಸಿಯಾಗಿದ್ದ ಶಿವಪ್ರಕಾಶ್, ಮೈಸೂರಿನ ಶ್ರೀನಗರದ ನಿವಾಸಿ ಲತಾ ಎಂಬುವರ ಮನೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಲತಾ ಮನೆಗೆ ನುಗ್ಗಿದ ಸಾಗರ್, ಮೊದಲು ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಲತಾಳ ಮೇಲೂ ಕೂಡ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ‌‌.

ಲತಾ ಮೇಲೆ ಹಲ್ಲೆಗೆ ಮುಂದಾದಾಗ ತಡೆಯಲು ಬಂದ ಅವರ ಮಗ ನಾಗಾರ್ಜುನನ ಮೇಲೆ ಸಾಗರ್ ಹಲ್ಲೆ ನಡೆಸಿದ್ದಾನೆ. ಗಾಯಗೊಂಡಿರುವ ನಾಗಾರ್ಜುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ.

ಇದನ್ನೂ ಓದಿ: ಡಿವೋರ್ಸ್​ಗಾಗಿ ಮ್ಯಾಟ್ರಿಮೊನಿಯಲ್​ ಸೈಟ್​ನಲ್ಲಿ ಹೆಂಡ್ತಿ ಪ್ರೊಫೈಲ್​.. ಸಾಫ್ಟವೇರ್​​ ಗಂಡನ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.