ಮೈಸೂರು: ಸಾಂಸ್ಕೃತಿಕ ರಾಯಭಾರಿಗಳಾದ ಗಜಪಡೆ ತಾಲೀಮಿಗೆ ಅಗಮಿಸುವಾಗ, ದೇವರಾಜ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರಿಗಳು ಪ್ರತಿದಿನ ಉಚಿತವಾಗಿ ಹೂ ನೀಡಿ ನಮಸ್ಕರಿಸುತ್ತಾರೆ.
ಜಂಬೂಸವಾರಿಗೆ ಕಾಡಿನಿಂದ ನಾಡಿಗೆ ಬರುವ ಗಜಪಡೆಗೆ ಪ್ರತಿದಿನ ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ತಾಲೀಮು ನಡೆಸುತ್ತಾರೆ. ಆದರೆ ಈ ಗಜ ಪಡೆ ಪ್ರತಿದಿನ ಕೆ.ಆರ್. ಸರ್ಕಲ್ ದಾಟಿ ದೇವರಾಜ ಮಾರುಕಟ್ಟೆಗೆ ಬರುತ್ತಿದ್ದಂತೆ ಎಲ್ಲಾ ವ್ಯಾಪಾರಿಗಳು ಒಂದೊಂದು ದಿನ ಎಲ್ಲಾ ಆನೆಗಳಿಗೂ ಉಚಿತವಾಗಿ ಹೂ ನೀಡಿ, ಆನೆಗೆ ನಮಸ್ಕರಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಿಗೆ ತಮ್ಮದೇ ರೀತಿಯಲ್ಲಿ ಸ್ವಾಗತ ಕೋರುತ್ತಾರೆ.