ETV Bharat / state

ಜನ ನಿಮ್ಮ ಮುಖ ನೋಡಿ ಮತ ಹಾಕಿಲ್ಲ, ಗ್ಯಾರಂಟಿ ಕಾರ್ಡ್​ ನೋಡಿ ವೋಟ್​ ಕೊಟ್ಟಿದ್ದಾರೆ : ಪ್ರತಾಪ್ ಸಿಂಹ - ಈಟಿವಿ ಭಾರತ ಕನ್ನಡ

ವಿಧಾನಸಭೆ ಚುನಾವಣೆ ಫಲಿತಾಂಶ ಲೋಕಸಭೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದ್ದಾರೆ.

ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
author img

By

Published : May 25, 2023, 5:03 PM IST

ಮೈಸೂರು: ಮತದಾರರು ನಿಮ್ಮ ಮುಖ ನೋಡಿ ಮತ ಹಾಕಿಲ್ಲ, ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿ ನಿಮಗೆ 135 ಸೀಟ್ ಕೊಟ್ಟಿದ್ದಾರೆ. ‌ನೀವು ಕೊಟ್ಟಿರುವ ಭರವಸೆಗಳನ್ನು ಈಡೇರಿಸಿ, ಇಲ್ಲದ್ದಿದ್ದರೆ ನಾವು ಹೋರಾಟ ಮಾಡಬೇಕಾಗುತ್ತದೆ. ಬಿಜೆಪಿ ಸೋತಿದೆ ಹೊರತು ಸತ್ತಿಲ್ಲ ಎಂದು ಮಾಧ್ಯಮಗೋಷ್ಟಿಯಲ್ಲಿ ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯ, ಮೈಸೂರು ನಗರದ ಮಣಿಪಾಲ್ ಆಸ್ಪತ್ರೆಯ ಸಿಗ್ನಲ್ ನಲ್ಲಿ ಉಂಟಾಗಿರುವ ಟ್ರಾಫಿಕ್ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿ, ನಂತರ ಮಾಧ್ಯಮಗೋಷ್ಠಿ ನಡೆಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

ಅಭಿವೃದ್ಧಿಗಾಗಿ ಯಾರ ಕಾಲು ಬೇಕಾದರೂ ಹಿಡಿಯುತ್ತೇನೆ : ಮೈಸೂರು ಮತ್ತು ಕೊಡಗಿನ ಅಭಿವೃದ್ಧಿಗಾಗಿ ಯಾರ ಕಾಲನ್ನ ಬೇಕಾದರೂ ಹಿಡಿಯುತ್ತೇನೆ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ, ಉಳಿದ ಸಮಯದಲ್ಲಿ ಅಭಿವೃದ್ಧಿ ರಾಜಕಾರಣ ಮಾಡೋಣ. ಕುರ್ಚಿ ಯಾರಿಗೂ ಶಾಶ್ವತ ಅಲ್ಲ. ಇದ್ದಾಗ ಅಭಿವೃದ್ಧಿ ಮಾಡಬೇಕು. ‌ನಾನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿ, ಅಭಿವೃದ್ಧಿಗೆ ಸಹಾಯ ಮಾಡುವಂತೆ‌ ಕೇಳುತ್ತೇನೆ. ಅಭಿವೃದ್ಧಿಗಾಗಿ ಯಾರ ಕಾಲನ್ನ ಬೇಕಾದರೂ ಹಿಡಿಯಲು ಸಿದ್ಧನಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಇದೇ ವೇಳೆ ಹೇಳಿಕೆ ನೀಡಿದರು.

ಲೋಕಸಭೆ ಫಲಿತಾಂಶದ ಮೇಲೆ ಪ್ರಭಾವ ಬೀರಲ್ಲ: ವಿಧಾನಸಭೆ ಚುನಾವಣೆಯ ಫಲಿತಾಂಶ ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ದೇಶಕ್ಕೆ ಎಂತಹ ನಾಯಕರು ಬೇಕೆಂಬುದು ರಾಜ್ಯದ ಜನರಿಗೆ ಗೊತ್ತಿದೆ. ಒಂದು ಚುನಾವಣೆಗೂ ಮತ್ತೊಂದು ಚುನಾವಣೆಗೂ ವ್ಯತ್ಯಾಸ ಇದೆ ಎಂದರು.

ಗ್ಯಾರಂಟಿ ಕಾರ್ಡ್ ವಿಚಾರದಲ್ಲಿ ಬಿಜೆಪಿ ಎಚ್ಚೆತ್ತುಕೊಳ್ಳಬೇಕಾಗಿತ್ತು. ಬಿಜೆಪಿ ಅವತ್ತು ಎಚ್ಚೆತ್ತುಕೊಂಡಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ. ಗ್ಯಾರಂಟಿ ಆಶ್ವಾಸನೆಗಳನ್ನ ಕಾಂಗ್ರೆಸ್ ಈಡೇರಿಸಬೇಕು. ಇಲ್ಲದಿದ್ದರೆ ಜೂನ್ ಒಂದರಿಂದ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಹಣ ಪಾವತಿಸಬೇಡಿ. 200 ಯೂನಿಟ್ ಗಿಂತ ಹೆಚ್ಚು ಬಳಸಿದರೆ, ಹೆಚ್ಚುವರಿಗೆ ಮಾತ್ರ ಬಿಲ್ ಕಟ್ಟಿ ಎಂದು ಜನತೆಗೆ ಸಂಸದರು ಕರೆ ಸಲಹೆ ನೀಡಿದರು. ಸಿಎಂ ಕುರ್ಚಿ ಯಾರ ಸ್ವತ್ತು ಅಲ್ಲ. ಆದರೆ ಆಡಳಿತ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ ಶಾಶ್ವತವಾಗಿ ಇರುತ್ತದೆ. ವಿಧಾನ ಸಭೆಯಲ್ಲಿ ಕುಳಿತು ಪೊಲೀಸರಿಗೆ ಧಮ್ಕಿ ಹಾಕುವುದನ್ನು ನಿಲ್ಲಿಸಿ. ಆಡಳಿತವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ಎರಡು ತಿಂಗಳ ಹಿಂದೆ ಅಶ್ವತ್ಥನಾರಾಯಣ್ ಅವರು ಹೇಳಿದ ಹೇಳಿಕೆಗೆ ಈಗ ಎಫ್​ಐಆರ್ ಹಾಕಿಸುವುದು ಎಷ್ಟು ಸರಿ ಎಂದು ಪ್ರತಾಪ್​ ಸಿಂಹ ಪ್ರಶ್ನಿಸಿದರು.

40% ಕಮಿಷನ್ ತನಿಖೆ ಮಾಡಿಸಿ: ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವುದನ್ನು ಹೊಸ ಸರ್ಕಾರ ತಡೆಹಿಡಿಯುವ ಆದೇಶ ನೋಡಿದರೆ, ಇವರು ಎಷ್ಟು ಪರ್ಸೆಂಟ್​ಗಾಗಿ ಇಂತಹ ಆದೇಶ ಮಾಡಿದ್ದಾರೆ ಎಂಬ ಅನುಮಾನ ಉಂಟಾಗುತ್ತದೆ. ಆಡಳಿತ ನಡೆಸುವವರು ಬದಲಾಗುತ್ತಾರೆ. ಆದರೆ ಆಡಳಿತ ವ್ಯವಸ್ಥೆ ಬದಲಾಗುವುದಿಲ್ಲ. ವ್ಯವಸ್ಥೆಯೇ ಹೀಗಿರುವಾಗ ಕಾಮಗಾರಿಗೆ ಯಾಕೆ ಹಣ ಬಿಡುಗಡೆಯನ್ನು ತಡೆಹಿಡಿದಿದ್ದೀರಿ ಎಂದು ಸಂಸದರು ಕೇಳಿದ್ರು.

ಇದರಿಂದ ನಿಮಗೆ ಎಷ್ಟು ಪರ್ಸೆಂಟ್ ಬರುತ್ತದೆ ಎಂದು ಪ್ರಶ್ನೆ ಮಾಡಿದ ಸಂಸದ ಪ್ರತಾಪ್ ಸಿಂಹ ಅವರು, ‌ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಹಾಗೂ ಬಿಟ್ ಕಾಯಿನ್ ಹಗರಣದಲ್ಲಿ ಯಾರಿದ್ದಾರೆ ಎಂಬುದನ್ನು ತನಿಖೆ ಮಾಡಿಸಿ. ತಪ್ಪಿತಸ್ಥರನ್ನ ಕಂಡುಹಿಡಿದು ಜೈಲಿಗೆ ಕಳುಹಿಸಿ. ಆಗ ನಿಮ್ಮ ಕಾಲಿಗೆ ಬಿದ್ದು ನಾನೇ ನಮಸ್ಕಾರ ಮಾಡುತ್ತೇನೆ. ಇಲ್ಲದಿದ್ದರೆ ನೀವು ಸುಳ್ಳು ಹೇಳಿದ ಹಾಗೆ ಆಗುತ್ತದೆ ಎಂದು 40 ಪರ್ಸೆಂಟ್​ ಕಮೀಷನ್ ಆರೋಪದ​ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದರು.

ಕಾರ್ಯಕರ್ತರೇ ಯಾವಾಗಲೂ ಅಪಾಯದಲ್ಲಿ ಇರುತ್ತಾರೆ : ಗೆದ್ದವರು, ಸೋತ ನಾಯಕರು ಯಾವಾಗಲೂ ಸಮಸ್ಯೆಗೆ ಸಿಲುಕುವುದಿಲ್ಲ. ಆದರೆ ಪಕ್ಷ, ಸಿದ್ದಾಂತ ಎಂದು ಹೋರಾಟ ಮಾಡುವ ನಮ್ಮ ಕಾರ್ಯಕರ್ತರು ಚುನಾವಣೆ ಆದ ನಂತರ ಸ್ಥಳೀಯವಾಗಿ ಸಮಸ್ಯೆಗೆ ಸಿಲುಕುತ್ತಾರೆ. ಆದ್ದರಿಂದ ನಮಗೆ ಸೋಲು ಆಗಿರುವುದರಿಂದ, ಅಂತರಾಳದಿಂದ ಕಾರ್ಯಕರ್ತರ ಕ್ಷಮೆ ಕೇಳಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಈಗ ಬಂದಿರುವ ಹೊಸ ಸರ್ಕಾರದಲ್ಲಿ ಮೈಸೂರಿನವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದು, ಹಿಂದಿನ ಸರ್ಕಾರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಆರಂಭವಾಗಿದ್ದು, ಅವುಗಳನ್ನು ಮುಂದುವರೆಸಿಕೊಂಡು ಹೋಗಲು ಸಹಕಾರ ನೀಡಬೇಕು. ‌ಈ ಹಿನ್ನೆಲೆಯಲ್ಲಿ ನಾನೇ ಖುದ್ದಾಗಿ ಅವರನ್ನು ಭೇಟಿ ಮಾಡಿ ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಪ್ರಧಾನಿ ಉದ್ಘಾಟನೆ ಮಾಡುವುದು ಸರಿಯಿದೆ : ನೂತನ ಸಂಸತ್ ಭವನಕ್ಕೆ ಪ್ರಧಾನ ಮಂತ್ರಿಯವರೇ ಅಡಿಗಲ್ಲು ಹಾಕಿದ್ದರು. ಈಗ ಅವರೇ ಉದ್ಘಾಟನೆ ಮಾಡುತ್ತಿರುವುದು ಸರಿ ಇದೆ. ಈ ವಿಚಾರದಲ್ಲಿ ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಇದನ್ನೂ ಓದಿ: ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಕಚೇರಿಗೆ ಸಿಬ್ಬಂದಿ ವರ್ಗದವರಿಂದ ಕುಂಬಳಕಾಯಿ ಪೂಜೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.