ETV Bharat / state

ಸಂಸದರ 'ದತ್ತು ಗ್ರಾಮ'ಕ್ಕೆ ಗ್ರಾಮಸ್ಥರ ಮಾತುಗಳೇನು ಗೊತ್ತಾ?

ಚಾಮರಾಜನಗರ ಜಿಲ್ಲೆಯ ಸಂಸದ ಆರ್.ಧ್ರುವನಾರಾಯಣ ಅವರ ದತ್ತು ಗ್ರಾಮದ ಅಭಿವೃದ್ಧಿಯ ಬಗ್ಗೆ ಅಲ್ಲಿಯ ಸ್ಥಳೀಯ ನಿವಾಸಿಗಳು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಸತತ ಎರಡು ಬಾರಿ‌ ಗೆದ್ದಿರುವ ಆರ್.ಧ್ರುವನಾರಾಯಣ, ಹೊಸ ತಾಲೂಕಾಗಿ ರೂಪಗೊಂಡಿರುವ ಸರಗೂರು ತಾಲೂಕಿನ ಕಾಡಂಚಿನ ಪ್ರದೇಶದ 'ಬಿ.ಮಟಗೆರೆ' ದತ್ತು ಗ್ರಾಮವನ್ನು ಹೈಟೆಕ್ ಗ್ರಾಮವನ್ನಾಗಿ ಪರಿವರ್ತನೆ ಮಾಡಿದ್ದಾರೆ.

ಸಂಸದ ಆರ್.ಧ್ರುವನಾರಾಯಣ ರವರ ದತ್ತು ಗ್ರಾಮ
author img

By

Published : Feb 22, 2019, 1:49 PM IST

ಮೈಸೂರು: ಚಾಮರಾಜನಗರ ಜಿಲ್ಲೆಯ ಸಂಸದ ಆರ್.ಧ್ರುವನಾರಾಯಣ ಅವರ ದತ್ತು ಗ್ರಾಮದ ಅಭಿವೃದ್ಧಿಯ ಬಗ್ಗೆ ಅಲ್ಲಿಯ ಸ್ಥಳೀಯ ನಿವಾಸಿಗಳು ತಮ್ಮ ಅನಿಸಿಕೆಯನ್ನ ಹಂಚಿಕೊಂಡಿದ್ದಾರೆ.

ಈಗಾಗಲೇ ಸತತ ಎರಡು ಬಾರಿ‌ ಗೆದ್ದಿರುವ ಆರ್.ಧ್ರುವನಾರಾಯಣ, ಹೊಸ ತಾಲೂಕಾಗಿ ರೂಪಗೊಂಡಿರುವ ಸರಗೂರು ತಾಲೂಕಿನ ಕಾಡಂಚಿನ ಪ್ರದೇಶದ 'ಬಿ.ಮಟಗೆರೆ' ಗ್ರಾಮವನ್ನು ಹೈಟೆಕ್ ಗ್ರಾಮವನ್ನಾಗಿ ಪರಿವರ್ತನೆ ಮಾಡಿದ್ದಾರೆ.

ಮೈಸೂರು ಜಿಲ್ಲೆಯಿಂದ 85 ಕಿ.ಮೀ. ದೂರದಲ್ಲಿರುವ ಚಾಮರಾಜನಗರದ ಸಂಸದರ ವ್ಯಾಪ್ತಿಗೆ ಬರುವ 'ಬಿ.ಮಟಗೆರೆ' ಗ್ರಾಮವನ್ನು ದತ್ತು ಗ್ರಾಮವಾಗಿ ಪಡೆದಾಗ, ಎಲ್ಲ ಸಂಸದರಂತೆ ಇವರು ಬಾಯಿ ಮಾತಿನ ಸಂಸದರಾಗಿ ಉಳಿಯುತ್ತಾರೆ. ಕೈಗೆ ಸಿಗುವುದಿಲ್ಲವೆಂಬುದು ಗ್ರಾಮಸ್ಥರ ಲೆಕ್ಕಾಚಾರವಾಗಿತ್ತು.

ಆದರೆ, ಅದಕ್ಕೆ ತದ್ವಿರುದ್ಧವೆಂಬಂತೆ ದತ್ತು ಪಡೆದ ಗ್ರಾಮವನ್ನು ಗ್ರಾಮಸ್ಥರು ಊಹಿಸದ ಮಟ್ಟಕ್ಕಿಂತ ಅಭಿವೃದ್ಧಿ ಮಾಡಿ ತೋರಿಸಿಕೊಟ್ಟಿದ್ದಾರೆ. ರಸ್ತೆಗಳ ಅಭಿವೃದ್ಧಿ, ನಾಡ ಕಚೇರಿ, ‌ಮಿನಿ ವಿದ್ಯುತ್ ಘಟಕ ಸ್ಥಾಪನೆ ಮಾಡಿಸಿ ವಿದ್ಯುತ್ ಕೊರತೆ ಎದುರಾಗದಂತೆ ನೋಡಿಕೊಂಡಿದ್ದಾರೆ.

ಕಾಡು ಪ್ರಾಣಿಗಳ ಉಪಟಳ ತಡೆಯುವಂತೆ ಅರಣ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಪರಿಣಾಮ ಕಾಡು ಪ್ರಾಣಿಗಳ ಉಪಟಳ ಕಡಿಮೆಯಾಗಿದೆ. ಗ್ರಾಮದಲ್ಲಿ ಪ್ರೌಢ ಶಾಲೆಯವರೆಗೆ ಮಕ್ಕಳಿಗೆ ವಿದ್ಯಾಭ್ಯಾಸವಿತ್ತು. ಆದರೀಗ ಪಿಯುಸಿವರೆಗೆ ಅಲ್ಲಿಯೇ ಶಿಕ್ಷಣ ಸಿಗುವಂತೆ ಪದವಿ ಕಾಲೇಜು ಕಟ್ಟಡ ಕೂಡ ಪ್ರಾರಂಭವಾಗಿದೆ‌ ಎಂಬುದು ಗ್ರಾಮಸ್ಥರ ಮಾತು.

ಪ್ರತಿ ತಿಂಗಳು ದತ್ತು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಡನೆ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಅಲ್ಲದೇ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದಾರಂತೆ.

Intro:Body:

Mysore News

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.