ETV Bharat / state

ಮೈಸೂರು: ಆನೆಗಳ ಹಾವಳಿಗೆ ನಲುಗಿದ ಗ್ರಾಮಸ್ಥರು, ಬೆಳೆ ನಷ್ಟ ನೆನೆದು ಕಣ್ಣೀರು - ಮೈಸೂರಿನ ನಂಜನಗೂಡು ತಾಲೂಕಿನಲ್ಲಿ ಹೆಚ್ಚಿದ ಆನೆಗಳ ಹಾವಳಿ

ನಂಜನಗೂಡು ಹುಲ್ಲಹಳ್ಳಿ ಹೋಬಳಿಯ ಮಡುವಿನಹಳ್ಳಿ ಗ್ರಾಮದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಕಳೆದ ಮೂರು ದಿನಗಳಿಂದ ಜಮೀನಿಗೆ ಲಗ್ಗೆ ಹಾಕಿ ಕೈಗೆ ಬಂದ ಫಸಲನ್ನು ಹಾಳು ಮಾಡಿವೆ. ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ದೂರು ಕೇಳಿಬಂದಿದೆ.

ಆನೆಗಳ ಹಾವಳಿಗೆ ಬೆಳೆ ಹಾನಿ
ಆನೆಗಳ ಹಾವಳಿಗೆ ಬೆಳೆ ಹಾನಿ
author img

By

Published : Apr 27, 2022, 4:46 PM IST

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ನಗು ಜಲಾಶಯದ ವ್ಯಾಪ್ತಿಯಲ್ಲಿರುವ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಜಮೀನುಗಳತ್ತ ನುಗ್ಗಿ ಬರುವ ಆನೆಗಳು, ಫಸಲು ತಿಂದು ಬೆಳೆ ನಾಶ ಮಾಡಿ ಹೋಗುತ್ತವೆ. ಆನೆಗಳನ್ನು ನಿಯಂತ್ರಿಸಿ, ಬೆಳೆ ರಕ್ಷಣೆ ಮಾಡುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬ ದೂರುಗಳು ಇಲ್ಲಿನ ಸ್ಥಳೀಯರದ್ದು.

ಕಾಡಾನೆಗಳ ದಾಳಿ ತಡೆಗಟ್ಟಲು ನಿರ್ಮಿಸಲಾದ ಕಬ್ಬಿಣದ ತಡೆಗೋಡೆ ತೆರೆದುಕೊಂಡಿದೆ. ಇದರಿಂದ ಅವುಗಳು ಜಮೀನುಗಳಿಗೆ ನುಗ್ಗುತ್ತಿವೆ. ಎಷ್ಟೇ ಮನವಿ ಮಾಡಿದ್ರೂ ಅರಣ್ಯಾಧಿಕಾರಿಗಳು ಗಮನ ಹರಿಸುತ್ತಿಲ್ಲ. ಗಜಪಡೆ ಹಾವಳಿಯಿಂದ ಬೇಸತ್ತಿರುವ ರೈತರು ಅರಣ್ಯ ಇಲಾಖೆ ಕಚೇರಿ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪ್ರಶ್ನೆಪತ್ರಿಕೆ ‌ಸೋರಿಕೆ ಕೇಸ್‌: ಹಿರಿಯ ಪ್ರಾಧ್ಯಾಪಕ ಪೊಲೀಸ್ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.