ETV Bharat / state

ಜ್ಯುಬಿಲಿಯಂಟ್ ಕಂಪನಿಯ ನೌಕರರು ಬಿಸಿಎಂ ಹಾಸ್ಟೆಲ್​ನಲ್ಲಿ ಕ್ವಾರಂಟೈನ್​: ಸ್ಥಳೀಯರಿಂದ ಪ್ರತಿಭಟನೆ

ನಂಜನಗೂಡಿನ ಕೆ.ಎಚ್.ಬಿ ಕಾಲೋನಿಯಲ್ಲಿರುವ ಬಿಸಿಎಂ ಹಾಸ್ಟೆಲ್​ನಲ್ಲಿ, ಜ್ಯುಬಿಲಿಯಂಟ್ ಕಂಪನಿಯ ನೌಕರರನ್ನು ಕ್ವಾರಂಟೈನ್​ನಲ್ಲಿ ಇಡಲಾಗುವುದು ಎಂದು ತಿಳಿದ ಅಲ್ಲಿನ ಸ್ಥಳಿಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

mys
mys
author img

By

Published : Mar 31, 2020, 9:13 AM IST

ಮೈಸೂರು: ಜ್ಯುಬಿಲಿಯಂಟ್ ಕಂಪನಿಯ ನೌಕರರನ್ನು ನಂಜನಗೂಡಿನ ಕೆ.ಎಚ್.ಬಿ ಕಾಲೋನಿಯಲ್ಲಿರುವ ಬಿಸಿಎಂ ಹಾಸ್ಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿ ಇಡಲಾಗುವುದು ಎಂಬ ಮಾಹಿತಿ ತಿಳಿದು ಅಕ್ಕಪಕ್ಕದ ನಿವಾಸಿಗಳು ಅದನ್ನು ವಿರೋಧಿಸಿ ಹಾಸ್ಟೆಲ್ ಮುಂಭಾಗ ಪ್ರತಿಭಟನೆ ನಡೆಸಿದರು.

ಈಗಾಗಲೇ ಓರ್ವನಿಂದ ಒಂಭತ್ತು ಜನಕ್ಕೆ ಕೊರೊನಾ ಸೋಂಕು ಹರಡಿರುವುದರಿಂದ ಮತ್ತೆ ಬೇರೆಯವರಿಗೂ ಹರಡಿದೆ. ಆದ್ದರಿಂದ ಬಿಸಿಎಂ ಹಾಸ್ಟೆಲ್​ನಲ್ಲಿ ನೌಕರರಿಗೆ ಹೋಂ ಕ್ವಾರೆಂಟೈನ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರುಗಳಾದ ಎಸ್.ಪಿ.ಮಹೇಶ್, ಎನ್.ಎಸ್.ಯೋಗೀಶ್, ಪ್ರಾಂಶುಪಾಲ ಮಹದೇವಯ್ಯ, ರಿಟೈರ್ಡ್ ಎಎಸ್ಐಗಳಾದ ರಂಗಸ್ವಾಮಿ, ಗೋವಿಂದರಾಜ್, ಶಿವನಂಜಯ್ಯ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.